
ಕಲಬುರಗಿ,ಏ.29: ನಾಡಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊಂದಿರುವ ಪೆÇಲೀಸ್
ಸಿಬ್ಬಂದಿಗಳ ಕ್ಷೇಮಾಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ರಾಜ್ಯದ ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದರು.
ಮಂಗಳವಾರ ಕಲಬುರಗಿ ನಗರದ ಸಿ.ಎ.ಆರ್. ಪೆÇಲೀಸ ಮೈದಾನದಲ್ಲಿ ಕಲಬುರಗಿ ನಗರ ಪೆÇಲೀಸ್ ಹಾಗೂ ಕಲಬುರಗಿ ಜಿಲ್ಲಾ ಪೆÇಲೀಸ್ ಮತ್ತು ಕರ್ನಾಟಕ ರಾಜ್ಯ ಪೆÇಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಸುಮಾರು 20.88 ಕೋಟಿ ರೂ ಮೊತ್ತದ 72 ಪೆÇಲೀಸ ವಸತಿ ಗೃಹಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕಲಬುರಗಿ ನಗರದಲ್ಲಿ 24 ಪೆÇಲೀಸ್ ವಸತಿ ಗೃಹ ಕಟ್ಟಡಗಳು, ಅಫಜಲಪುರ ಪಟ್ಟಣದಲ್ಲಿ 24, ದೇವಲ ಗಾಣಗಾಪುರದಲ್ಲಿ 12, ಆಳಂದ ಪಟ್ಟಣದಲ್ಲಿ 12 ಪೆÇಲೀಸ್ ವಸತಿ ಗೃಹ ಕಟ್ಟಡಗಳನ್ನು ಇಂದಿಲ್ಲಿ ಪೆÇಲೀಸ್ ಸಿಬ್ಬಂದಿಗೆ ಸಮರ್ಪಿಸಲಾಗಿದೆ ಎಂದರು.
ಬ್ರಿಟಿಷರ ಕಾಲದ ಹಳೆಯ ‘ಪೆÇಲೀಸ್ ಲೈನ್’ ಮನೆಗಳ ಬದಲಿಗೆ, ಆಧುನಿಕ ಸೌಲಭ್ಯವುಳ್ಳ ‘ ಪೆÇಲೀಸ್ ಗೃಹ’ ಯೋಜನೆಯಡಿ ರಾಜ್ಯಾದ್ಯಂತ ಈಗಾಗಲೇ 40,712 ಮನೆಗಳನ್ನು ನಿರ್ಮಿಸಲಾಗಿದೆ. ಇನ್ನೂ 1,830 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪೆÇಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಉತ್ತಮ ಸೌಲಭ್ಯ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ಸಂಚಾರಿ ನಿರ್ವಹಣೆ ಸೇರಿದಂತೆ ಇಲಾಖೆಯ ಕೆಲಸಗಳಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಮಾಡರ್ನ್ ಫೆಸಿಲಿಟಿಗಳನ್ನು ಅಳವಡಿಸಿಕೊಳ್ಳಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮಳೆ, ಬಿಸಿಲು ಎನ್ನದೆ ಹಗಲಿರುಳು ಶ್ರಮಿಸುವ ಪೆÇಲೀಸರು ಮತ್ತು ಅವರ ಕುಟುಂಬದ ಹಿತರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಪೆÇೀಷಕರಿಗೆ ನೆರವಾಗಲು ವಸತಿ ಸೌಕರ್ಯ ಅತ್ಯಗತ್ಯ ಎಂದರು.
ಪ್ರಸ್ತುತ ಇಲಾಖೆಯಲ್ಲಿ ಸುಮಾರು 15,000 ದಿಂದ 16,000 ಹುದ್ದೆಗಳು ಖಾಲಿ ಇವೆ. ಮೊದಲ ಹಂತದಲ್ಲಿ ಸುಮಾರು 8,000 ಹುದ್ದೆಗಳ ಭರ್ತಿಗೆ ಮುಂದಿನ 10 ದಿನಗಳಲ್ಲಿ ಅಧಿಕೃತ ಅಧಿಸೂಚನೆ ಹೊರಡಿಸಲಾಗುವುದು ಎಂದು ಗೃಹ ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವೈದ್ಯಕೀಯ ಶಿಕ್ಷಣ, ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪೆÇಲೀಸ್ ಇಲಾಖೆಯಲ್ಲಿ ತರುತ್ತಿರುವ ಅನೇಕ ಬದಲಾವಣೆ ಜನಸ್ನೇಹಿ ಪೆÇಲೀಸ್ ವ್ಯವಸ್ಥೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, ಇಡೀ ದೇಶದಲ್ಲೇ ಕರ್ನಾಟಕ ಪೆÇಲೀಸ್ ಇಲಾಖೆ ಉತ್ತಮ ಸ್ಥಾನದಲ್ಲಿರಲು ಅವರ ದೂರದೃಷ್ಟಿ ಮತ್ತು ನಿಸ್ವಾರ್ಥ ಸೇವೆ ಕಾರಣ ಎಂದರು.
ರಾಜ್ಯಸಭೆಯ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದಿಂದ ಜಾರಿಯಾದ ಆರ್ಟಿಕಲ್ 371(ಜೆ) ಈ ಕಾಯ್ದೆಯು ಈ ಭಾಗದ ಯುವಕರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ (ಇಂಜಿನಿಯರಿಂಗ್, ವೈದ್ಯಕೀಯ) ದೊಡ್ಡ ಮಟ್ಟದ ಅವಕಾಶಗಳನ್ನು ಕಲ್ಪಿಸಿದೆ. ಗ್ಯಾರಂಟಿ ಯೋಜನೆಗಳ ಜೊತೆಗೆ ಪ್ರತಿ ವರ್ಷ ಈ ಭಾಗಕ್ಕೆ ,5000 ಕೋಟಿ ರೂಪಾಯಿ ಅನುದಾನ ನೀಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ ದಕ್ಷಿಣ ಕ್ಷೇತ್ರದ ಕೋಟನೂರ ‘ಡಿ’ ಪ್ರದೇಶದಲ್ಲಿ ರಾತ್ರಿ ವೇಳೆಯಲ್ಲಿ ಅಹಿತಕರ ಘಟನೆಗಳು ನಡೆಯುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಇಲ್ಲಿ ಒಂದು ಪೆÇಲೀಸ್ ಸ್ಟೇಷನ್ ಸ್ಥಾಪಿಸಬೇಕು ಹಾಗೂ ಪಟ್ಟಣ ಗ್ರಾಮದಲ್ಲಿ ಒಂದು ಔಟ್‍ಪೆÇೀಸ್ಟ್ ಸ್ಟೇಷನ್ (ಪೆÇಲೀಸ್ ಹೊರಠಾಣೆ) ಸ್ಥಾಪಿಸಬೇಕೆಂದು ಸಚಿವರಲ್ಲಿ ಬೇಡಿಕೆ ಇಟ್ಟರು. ಶಾಸಕರ ಮನವಿಗೆ ಪೂರಕವಾಗಿ ಸ್ಪಂದಿಸಿದ ಗೃಹ ಸಚಿವರು, ಈಗಾಗಲೇ ವಿಧಾನಸಭೆಯಲ್ಲಿ ಈ ಬಗ್ಗೆ ಭರವಸೆ ನೀಡಿರುವುದನ್ನು ಸ್ಮರಿಸಿದರು. ಕ್ಷೇತ್ರದ ಜನರ ಬೇಡಿಕೆಗಳನ್ನು ಆದ್ಯತೆಯ ಮೇಲೆ ಈಡೇರಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರು ಹಾಗೂ ಆಳಂದ ಶಾಸಕ ಬಿ.ಆರ್. ಪಾಟೀಲ್, ಕರ್ನಾಟಕ ರೇμÉ್ಮ ಉದ್ಯಮಗಳ ನಿಗಮದ ಅಧ್ಯಕ್ಷರು ಹಾಗೂ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಖನೀಜಾ ಫಾತಿಮಾ, ಅಫಜಲಪುರ ಶಾಸಕ ಎಂ.ವೈ. ಪಾಟೀಲ್, ವಿಧಾನ ಪರಿಷತ್ ಶಾಸಕರುಗಳಾದ ಜಗದೇವ್ ಗುತ್ತೇದಾರ್, ತಿಪ್ಪಣ್ಣಪ್ಪ ಕಮಕನೂರ್, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸೈಯದ್ ಮೊಹಮ್ಮದ್ ಚಿಸ್ತಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಜಹರ್ ಆಲಂ ಖಾನ್, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರರಾದ ವμರ್Á ರಾಜೀವ ಜಾನೆ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುμÁ್ಠನ ಪ್ರಾಧಿಕಾರದ ಅಧ್ಯಕ್ಷ ಚಂದ್ರಿಕಾ ಪರಮೇಶ್ವರ್, ರಾಜ್ಯದ ಪೆÇಲೀಸ್ ಮಹಾನಿರ್ದೇಶಕರು ಮತ್ತು ಮಹಾ ನಿರೀಕ್ಷಕರು ಡಾ. ಎಂ.ಎಸ್. ಸಲೀಂ, ಈಶಾನ್ಯ ವಲಯದ ಡಿ.ಐ.ಜಿ ಶಾಂತನು ಸಿನ್ಹಾ, ಕಲಬುರಗಿ ಎಸ್.ಪಿ. ಅಡ್ಡೂರು ಶ್ರೀನಿವಾಸುಲು, ಬೀದರ್ ಎಸ್.ಪಿ. ಪ್ರದೀಪ್ ಗುಂಟಿ, ಯಾದಗಿರಿ ಎಸ್.ಪಿ. ಪೃಥ್ವಿಕ್ ಶಂಕರ್ ಸೇರಿದಂತೆ ಇಲಾಖೆಯ ಪ್ರಮುಖ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಲಬುರಗಿ ನಗರ ಪೆÇಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಸ್ವಾಗತಿಸಿದರು.






















