Home ಜಿಲ್ಲೆ ಬೆಂಗಳೂರು ಪದವಿಯೊಂದಿಗೆ ಸಂವಿಧಾನ ಮೌಲ್ಯಗಳ ಅರಿವು ಅಗತ್ಯ

ಪದವಿಯೊಂದಿಗೆ ಸಂವಿಧಾನ ಮೌಲ್ಯಗಳ ಅರಿವು ಅಗತ್ಯ

ಬೆಂಗಳೂರು, ಆ.13: ವಿಜಯನಗರದ ವಾಸವಿ ಜ್ಞಾನ ಪೀಠ ಪ್ರಥಮ ದರ್ಜೆ ಕಾಲೇಜಿನ ಯುಜಿ ಮತ್ತು ಪಿಜಿ ವಿಭಾಗಗಳ ವತಿಯಿಂದ 2026ನೇ ಸಾಲಿನ ಪದವಿ ಪ್ರದಾನ ಸಮಾರಂಭವನ್ನು ಗುರುವಾರ ಕಾಲೇಜಿನ ಸಭಾಂಗಣದಲ್ಲಿ ಸಂಭ್ರಮದಿಂದ ಆಯೋಜಿಸಲಾಗಿತ್ತು.


ಸಮಾರಂಭದಲ್ಲಿ ವಿವಿಧ ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳ ಒಟ್ಟು 320 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಜೊತೆಗೆ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಅಗ್ರ ಶ್ರೇಯಾಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಾಸವಿ ಜ್ಞಾನ ಪೀಠ ಪ್ರಥಮ ದರ್ಜೆ ಕಾಲೇಜಿನ ಬಿಕಾಂ, ಬಿಬಿಎ, ಬಿಎ, ಎಂಎ, ಎಂಕಾಂ ಹಾಗೂ ಎಂಸಿಎ ವಿಭಾಗಗಳ ವಿದ್ಯಾರ್ಥಿಗಳು ಮತ್ತು ವಾಸವಿ ಜ್ಞಾನ ಪೀಠ ಈವ್ನಿಂಗ್ ಕಾಲೇಜಿನ ಬಿಕಾಂ, ಬಿಬಿಎ ಹಾಗೂ ಬಿಸಿಎ ವಿಭಾಗಗಳ ವಿದ್ಯಾರ್ಥಿಗಳು ಪದವಿ ಪಡೆದರು.


ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಯೂನಿವರ್ಸಿಟಿ ಲಾ ಕಾಲೇಜು ಹಾಗೂ ಡಿಪಾರ್ಟ್‍ಮೆಂಟ್ ಆಫ್ ಸ್ಟಡೀಸ್ ಇನ್ ಲಾ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಪ್ರಾಂಶುಪಾಲರಾದ ಪೆÇ್ರ. (ಡಾ.) ವಿ. ಸುಧೇಶ್ ಅವರು ಮಾತನಾಡಿ, ಪದವಿ ಪ್ರಮಾಣಪತ್ರವನ್ನು ಪಡೆಯುವುದಷ್ಟೇ ವಿದ್ಯಾರ್ಥಿಗಳ ಅಂತಿಮ ಗುರಿಯಾಗಬಾರದು. ಶಿಕ್ಷಣದ ಮೂಲಕ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು, ಸಮಾಜಕ್ಕೆ ಜವಾಬ್ದಾರಿಯುತ ನಾಗರಿಕರಾಗಬೇಕು ಎಂದು ಕರೆ ನೀಡಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಾಸವಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಶಿಕ್ಷಣ ತಜ್ಞರಾದ. ಡಿ.ಆರ್. ವಿಜಯಸಾರಥಿ ಅವರು ಮಾತನಾಡಿ, ಪದವಿ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಂಡು, ಉನ್ನತ ಶಿಕ್ಷಣದತ್ತ ಹೆಜ್ಜೆ ಹಾಕಬೇಕು. ಉತ್ತಮ ಶಿಕ್ಷಣ, ಶಿಸ್ತು, ಕೌಶಲ್ಯ ಮತ್ತು ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವೃತ್ತಿಜೀವನ ನಿರ್ಮಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಉತ್ತಮ ಶಿಕ್ಷಣದ ಮೂಲಕ ಉತ್ತಮ ವೃತ್ತಿಜೀವನ ರೂಪಿಸಿಕೊಂಡು, ತಮ್ಮ ಕುಟುಂಬಕ್ಕೂ, ಸಂಸ್ಥೆಗೂ ಹಾಗೂ ಸಮಾಜಕ್ಕೂ ಹೆಮ್ಮೆ ತರುವಂತಹ ಸಾಧನೆ ಮಾಡಬೇಕು,” ಎಂದ ಡಿ.ಆರ್ ವಿಜಯಸಾರಥಿ ಹೇಳಿದರು.


ಶಿಕ್ಷಣದ ಜೊತೆಗೆ ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಾಲೇಜು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ವಾಸವಿ ಜ್ಞಾನ ಪೀಠ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪದ್ಮಾ ವಿ., ವಾಸವಿ ಜ್ಞಾನ ಪೀಠ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಂಗಸ್ವಾಮಿ ಬಿ.ವಿ., ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಬೋಧಕರು ಮತ್ತು , ವಿದ್ಯಾರ್ಥಿಗಳು ಹಾಗೂ ಪೆÇೀಷಕರು ಉಪಸ್ಥಿತರಿದ್ದರು.