
ಸಂಜೆವಾಣಿ ವಾರ್ತೆ
ತಿ.ನರಸೀಪುರ:ಮೇ.20- ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಎಲ್ಲಾ ಧರ್ಮಗಳನ್ನು ಅಧ್ಯಯನ ಮಾಡಿ ನಂತರ ಬುದ್ಧ ಧಮ್ಮವನ್ನು ಸ್ವೀಕರಿಸಿದರು. ಆದ್ದರಿಂದ ಅವರ ಅನುಯಾಯಿಗಳಾದ ನಾವುಗಳು ಧಮ್ಮವನ್ನು ಉಳಿಸಿ ಬೆಳೆಸಬೇಕು. ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು. ಎಂದು ಸಾಹಿತಿ, ಚಿಂತಕ ಮಲ್ಕುoಡಿ ಮಹದೇವಸ್ವಾಮಿ ತಿಳಿಸಿದರು.
ಪಟ್ಟಣದ ತ್ರಿವೇಣಿ ನಗರದ ಬುದ್ಧ ವಿಹಾರ ಆವರಣದಲ್ಲಿ ನಳಂದ ಬುದ್ಧ ವಿಹಾರದ ಪ್ರಧಾನ ಬಿಕ್ಕು ಬೋದಿರತ್ನ ಬಂತೇಜಿ ರವರ ದಿವ್ಯ ಸಾನಿದ್ಯದಲ್ಲಿ. ಬೌದ್ಧ ಮಹಾಸಭಾದ ವತಿಯಿಂದ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿ, ಬೌದ್ಧ ಧರ್ಮ ವ್ಯಕ್ತಿ ಪೂಜೆ, ವಿಗ್ರಹಾರಾಧನೆ, ಮೂಢನಂಬಿಕೆಯನ್ನು ವಿರೋಧಿಯಾಗಿದ್ದು, ಮಿತ ಜೀವನ ಮತ್ತು ಸಾತ್ವಿಕತೆಯನ್ನು ಬೋಧಿಸುತ್ತದೆ. ಜಗತ್ತಿಗೆ ಶಾಂತಿ ಸಂದೇಶವನ್ನು ಬೋಧಿಸುವ ಬುದ್ಧ ಧರ್ಮದ ಮೂಲಸ್ಥಾನವಾದ ಭಾರತದಲ್ಲೇ ಬುದ್ಧ ಧರ್ಮದ ಉಳಿವಿಗೆ ಹೋರಾಟ ನಡೆಸಬೇಕಾದು ನಮ್ಮೆಲ್ಲರ ದುರ್ದೈವ ಎಂದರು.
ಅಂಬೇಡ್ಕರ್ ಅವರು ಬುದ್ಧ ಧರ್ಮ ಸ್ವೀಕಸಿದ ನಂತರ ಸಂಚರಿಸಿದ ಸ್ಥಳಗಳನ್ನು ಪವಿತ್ರ ಸ್ಥಳಗಳಾಗಿವೆ. ಹಾಗಾಗಿ ಅಂಬೇಡ್ಕರ್ ಅನುಯಾಯಿಗಳು ಈ ಸ್ಥಳಗಳಿಗೆ ಬೇಟಿ ನೀಡಬೇಕು.ಬಾಬಾ ಸಾಹೇಬರ ಆದರ್ಶಗಳನ್ನು ಅನುಸರಿಸಬೇಕು ಎಂದರು.
ಭಾರತದಲ್ಲಿ ಭೌದ್ಧ ಧಮ್ಮವನ್ನು ಬೆಳೆಸಿ ನೆಲೆ ನಿಲ್ಲುವಂತೆ ಮಾಡಲು ಸಾಕಷ್ಟು ಸವಾಲು ಮತ್ತು ವೈರುಧ್ಯಗಳಿವೆ. ಹಾಗಾಗಿ ಅಂಬೇಡ್ಕರ್ ಅನುಯಾಯಿಗಳು ಭೌದ್ಧ ಧರ್ಮವನ್ನು ಅನುಸರಿಸುವ ಮುಖೇನ ಧರ್ಮವನ್ನು ಶಾಶ್ವತವಾಗಿ ಭಾರತ ದೇಶದಲ್ಲಿ ನೆಲೆಯೂರುವಂತೆ ತಮ್ಮ ಸಮಯ, ಹಣ ಮತ್ತು ಸಂಯಮವನ್ನು ವ್ಯಯಿಸಬೇಕು. ಇದರಿಂದ ದಮ್ಮ ಹೆಚ್ಚು ಬಲವರ್ಧನೆ ಆಗಲಿದೆ ಎಂದರು.
ಪೆÇಲೀಸ್ ಇನ್ಸ್ಪೆಕ್ಟರ್ ಧನಂಜಯ್ ಮಾತನಾಡಿ, ಪ್ರತಿಭಾ ಪುರಸ್ಕಾರ ನೀಡುವುದರ ಜತೆಗೆ ಮಕ್ಕಳಲ್ಲಿ ಸಂಸ್ಕಾರವನ್ನು ನೀಡುವ ಕಾರ್ಯಕ್ರಮವನ್ನು ಆಯೋಜಿಸಿರುವುದು ಅತ್ಯಂತ ಶ್ಲಾಘನಿಯ. ನೌಕರರು, ಸುಶಿಕ್ಷಿತರು ಮತ್ತು ವಿದ್ಯಾರ್ಥಿಗಳಲ್ಲೂ ಮೂಢನಂಬಿಕೆ, ಕಂದಾಚಾರಗಳನ್ನು ನಂಬುತ್ತಿರುವುದು ವಿಷಾದನೀಯ. ವಿದ್ಯಾರ್ಥಿಗಳ ಸಾಧನೆಯ ಹಿಂದೆ ವಿದ್ಯಾರ್ಥಿಗಳ ಪರಿಶ್ರಮ, ಪೆÇೀಷಕರ ತ್ಯಾಗ, ಪೆÇ್ರೀತ್ಸಾಹ ಮತ್ತು ಗುರುವಿನ ಮಾರ್ಗದರ್ಶನವಿರುತ್ತದೆ ಎಂದರು. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ನಳಂದ ಬುದ್ಧ ವಿಹಾರದ ಪ್ರಧಾನ ಬಿಕ್ಕು ಬೋಧಿರತ್ನ ಬಂತೇಜಿ ವಹಿಸಿದ್ದರು.
ಇದೇ ವೇಳೆ ಡಾಕ್ಟರೇಟ್ ಪದವಿ ಪಡೆದ ತಲಕಾಡು ಸುರೇಶ್, ಚಿನ್ನದ ಪದಕ ಪುರಸ್ಕೃತ ಹೊಸಹಳ್ಳಿ ಸಿದ್ದರಾಜು,ಪತ್ರಿಕೋದ್ಯಮ ಪದವಿ ಪಡೆದ ಶಿಕ್ಷಕ ಶಂಕರಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಮಹದೇವಸ್ವಾಮಿ,ರುದ್ರಯ್ಯ ಬಡ್ತಿ ಮುಖ್ಯಶಿಕ್ಷಕ ಚಿನ್ನಸ್ವಾಮಿ ಇತರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂದರ್ಭದಲ್ಲಿ ಬಿಎಸ್ಐ ಕಾರ್ಯದರ್ಶಿ ಸಿ. ಮಹದೇವಸ್ವಾಮಿ, ಉಪಾಧ್ಯಕ್ಷ ಕುಮಾರಸ್ವಾಮಿ ಸಂಘಟನಾ ಕಾರ್ಯದರ್ಶಿ ನಾಗರಾಜು ಉತ್ತಂಬಳ್ಳಿ, ಖಜಾಂಚಿ ನಾರಾಯಣಮೂರ್ತಿ, ಮುರಳೀಧರ, ಪ್ರಕಾಶ್, ನಾಗೇಂದ್ರ, ಪ್ರಸನ್ನ, ಸಿದ್ದರಾಜು, ಟಿಒಟಿ ನಾಗರಾಜು, ಮಹದೇವಯ್ಯ, ಮೂಗೂರು ಸಿದ್ದರಾಜು, ಹಸೂವಟ್ಟಿ ಸಿದ್ದರಾಜು, ಮಂಜುನಾಥ್, ಸಿದ್ದರಾಜು ಮಹೇಶಮೂರ್ತಿ, ರಾಜಪ್ಪ, ಅನಿಲ್ ರಾಜು, ಪಿಆರ್ ಪುರುಷೋತ್ತಮ ಇತರರು ಹಾಜರಿದ್ದರು.























