
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.01: ತಾಲೂಕಿನ ಕೊಳಗಲ್ಲು ಗ್ರಾಮಸ್ಥರು ಕುಡಿಯುವ ನೀರು ಮತ್ತು ದೈನಂದಿನ ದಿನ ಬಳಳಕೆಯ ನೀರಿನ ತೀವ್ರ ಅಭಾವ ಎದುರುಸುತ್ತಿದ್ದು
ಕೂಡಲೇ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಕೆರೆ.ನಿರ್ಮಿಸಲು ಹಾಗೂ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಡಿ.ವೈ.ಎಫ್.ಐ
ಸಂಘಟನೆಯ ನೇತೃತ್ವದ ಇಂದು ಗ್ರಾಮದಲ್ಲಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ.
ಸಂಘಟನೆಯ ಜಿಲ್ಲಾ ಅಧ್ಯಕ್ಷ ಯು.ಎರ್ರಿಸ್ವಾಮಿ, ಈ ಗ್ರಾಮದ ಜನರು ಹಲವು ವರ್ಷಗಳಿಂದ ಕುಡಿಯುವ ನೀರಿನ ಕೆರೆ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಗ್ರಾಮದ ಸರ್ವೆ ನಂ 557.ರಲ್ಲಿ 296 ಎಕ್ಕರೆ ಕೆರೆ ಭೂಮಿಯಲ್ಲಿ ಕುಡಿಯುವ ನೀರಿನ ಕೆರೆ ನಿರ್ಮಿಸಲು.ಮತ್ತು 300.ಕ್ಕೂ ಹೆಚ್ಚು ಬಡ ಕುಟುಂಬಗಳು ನಿವೇಶನ ಮತ್ತು ವಸತಿ ಎದಿರಿಸುತ್ತಿದ್ದಾರೆ. ಮುಖ್ಯ ರಸ್ತೆಯನ್ನು ಅಗಲಿಕಾರಣ ಮಾಡಿ ಡಬಲ್ ರೋಡ್ ನಿರ್ಮಿಸಬೇಕು .
ಗ್ರಾಮ ದಿಂದ ಅಲ್ಲಿಪುರಕ್ಕೆ ಹೋಗುವ ರೋಡ್
ಸಂಪೂರ್ಣ ಗುಂಡಿಬಿದ್ದು ಹಾಳಾಗಿ ದುಸ್ಥಿತಿಯಲ್ಲಿದ್ದು ಕೂಡಲೇ ಹೊಸರಸ್ತೆ ನಿರ್ಮಿಸಬೇಕು
ಸೇರಿದಂತೆ ಅನೇಕ ಬೇಡಿಕೆಗಳಿವೆಂದರು.
ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸದೇ ನಿರ್ಲಕ್ಷ್ಯ ದೊರಣೆ ಮುಂದುವರೆದೆ ಕೊಳಗಲ್ಲು ಗ್ರಾಮದ ಎಲ್ಲಾ ರೈತರು, ಮಹಿಳೆಯರು,ಯುವ ಜನರು ಸೇರಿ ಡಿವೈಎಫ್ಐ ಸಂಘಟನೆ ನೇತೃತ್ವದಲ್ಲಿ ವಿವಿಧ ರೀತಿಯ ಹೋರಾಟ ಮತ್ತು ಅನಿರ್ದಿಷ್ಟಾವಾದಿ ಉಪವಾಸ ಸತ್ಯಾಗ್ರಹ ನಡೆಸುವುದು. ಅನಿವಾರ್ಯವಾಗುತ್ತದೆಂದಿದ್ದಾರೆ.




























