
ಸಂಜೆವಾಣಿ ನ್ಯೂಸ್
ಮೈಸೂರು: ಸೆ.13:-ಮೈಸೂರು ನಗರಾ (ಜಿಲ್ಲಾ) ಕಾಂಗ್ರೆಸ್ ಅಧ್ಯಕ್ಷರಾದ ಆರ್. ಮೂರ್ತಿ ರವರು ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷರಾದ ಮಾಜಿ ಸಚಿವರು ಆದ ಎಂ. ಕೋಟೆ ಶಿವಣ್ಣ ರವರ ಸಹಯೋಗದೊಂದಿಗೆ ಮೈಸೂರು ನಗರ (ಜಿಲ್ಲಾ) ಪ್ರಚಾರ ಸಮಿತಿಯ ಅಧ್ಯಕ್ಷರಾದ ರಘುರಾಜೇ ಅರಸ್ ನೇತೃತ್ವದಲ್ಲಿ ಶ್ರೀ ಮಲ್ಲಿಕಾರ್ಜುನ್ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಹಾಗೂ ರಾಹುಲ್ ಗಾಂಧಿಯವರ ವಿರುದ್ಧ ಸುಳ್ಳು ಎಫ್ ಐ ಆರ್ ದಾಖಲೆಸಿರುವ ಬಗ್ಗೆ ಬಿಜೆಪಿ ಸರ್ಕಾರದ ದ್ವೇಷದ ರಾಜಕಾರಣವನ್ನು ಖಂಡಿಸಿ ಬಿಜೆಪಿ ಸರ್ಕಾರದ ವಿರುದ್ಧ ಹಣೆಗೆ ಕಪ್ಪು ಪಟ್ಟಿಯನ್ನು ಧರಿಸುವ ಮೂಲಕ ಕ್ಯಾಂಡಲ್ ಹಿಡಿದು ಮೌನ ಪ್ರತಿಭಟನೆಯನ್ನು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಗಾಂಧಿ ವೃತ್ತದ ವರೆಗೆ ಮೌನ ಮೆರವಣಿಗೆ ಮಾಡಲಾಯಿತು
ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷರೂ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ ಮೈದಾನದ ಸ್ಥಳವನ್ನು ಬಿಜೆಪಿಯವರು ಶುದ್ಧೀಕರಿಸಿದ ಸಂವಿಧಾನ ವಿರೋಧಿ ಕೃತ್ಯ ಮತ್ತು ಈ ಘಟನೆಯನ್ನು ಖಂಡಿಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿಯವರ ಮೇಲೆ ದ್ವೇಷಪೂರಿತವಾಗಿ ಎಫ್‍ಐಆರ್ (ಈIಖ) ದಾಖಲಿಸಿರುವ ಉತ್ತರಾಖಂಡ ಸರ್ಕಾರದ ನಡವಳಿಕೆಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ.
ಪ್ರಮುಖ ಮುಖ್ಯಾಂಶಗಳು:
ದಲಿತ ನಾಯಕರಿಗೆ ಮತ್ತು ಸಂವಿಧಾನಕ್ಕೆ ಆದ ಅಪಮಾನ: ಮಲ್ಲಿಕಾರ್ಜುನ ಖರ್ಗೆಯವರಂತಹ ಹಿರಿಯ ದಲಿತ ನಾಯಕರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸುವ ಮೂಲಕ ಬಿಜೆಪಿ ತನ್ನ ಶೋಷಕ ಹಾಗೂ ಮನುಸ್ಮೃತಿಯ ಕಲ್ಪನೆಯ ಮನಸ್ಥಿತಿಯನ್ನು ಮತ್ತೊಮ್ಮೆ ಬಯಲುಗೊಳಿಸಿದೆ. ಇದು ಕೇವಲ ಒಬ್ಬ ವ್ಯಕ್ತಿಗೆ ಆದ ಅಪಮಾನವಲ್ಲ, ಇಡೀ ದಲಿತ ಸಮುದಾಯಕ್ಕೆ ಮತ್ತು ಭಾರತದ ಸಂವಿಧಾನಕ್ಕೆ ಎಸಗಿದ ದ್ರೋಹ.
ಪ್ರಜಾಪ್ರಭುತ್ವದ ಧ್ವನಿ ಹಡಗಿಸುವ ಯತ್ನ: ಈ ಅನ್ಯಾಯವನ್ನು ಪ್ರಶ್ನಿಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿಯವರ ವಿರುದ್ಧ ದುರುದ್ದೇಶಪೂರಿತವಾಗಿ ಎಫ್‍ಐಆರ್ ದಾಖಲಿಸಿರುವುದು ಬಿಜೆಪಿಯ ಭಯದ ರಾಜಕೀಯವನ್ನು ತೋರಿಸುತ್ತದೆ.
ಅಧಿಕಾರ ದುರುಪಯೋಗ:
ಉತ್ತರಾಖಂಡದ ಬಿಜೆಪಿ ಸರ್ಕಾರವು ಪೆÇೀಲಿಸ್ ಮತ್ತು ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷದ ನಾಯಕರ ಧ್ವನಿಯನ್ನು ಅಡಗಿಸಲು ಹುನ್ನಾರ ನಡೆಸುತ್ತಿದೆ.
ನಮ್ಮ ಪ್ರಮುಖ ಬೇಡಿಕೆಗಳು:
ರಾಹುಲ್ ಗಾಂಧಿಯವರ ವಿರುದ್ಧ ದಾಖಲಿಸಲಾಗಿರುವ ಸುಳ್ಳು ಎಫ್‍ಐಆರ್ ಅನ್ನು ಉತ್ತರಾಖಂಡ ಸರ್ಕಾರ ತಕ್ಷಣವೇ ಹಿಂಪಡೆಯಬೇಕು. ಮಲ್ಲಿಕಾರ್ಜುನ ಖರ್ಗೆಯವರನ್ನು ಮತ್ತು ದಲಿತ ಸಮುದಾಯವನ್ನು ಅಪಮಾನಿಸಿದ ಬಿಜೆಪಿಯ ಜಾತೀಯ ಮನಸ್ಥಿತಿಯ ವಿರುದ್ಧ ಸಾರ್ವಜನಿಕ ಕ್ಷಮೆಯಾಚನೆ ಮಾಡಬೇಕು.
ಈ ಅಸ್ಪೃಶ್ಯತಾ ಸಾದೃಶ್ಯದ ಕೃತ್ಯವೆಸಗಿದ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
ಅಧಿಕಾರದ ಮದದಲ್ಲಿ ಮೆರೆಯುತ್ತಿರುವ ಬಿಜೆಪಿ ಸರ್ಕಾರದ ಇಂತಹ ಸಂವಿಧಾನ ವಿರೋಧಿ ಮತ್ತು ದ್ವೇಷಪೂರಿತ ನಡೆಯ ವಿರುದ್ಧ ಕಾಂಗ್ರೆಸ್ ಪಕ್ಷವು ಬೀದಿಗಿಳಿದು ಹೋರಾಟ ನಡೆಸಲಿದ್ದು,
ಈ ಹೋರಾಟವು ನ್ಯಾಯ ಸಿಗುವವರೆಗೆ ವಿಶ್ರಮಿಸುವುದಿಲ್ಲ.
ಈ ಕಾರ್ಯಕ್ರಮದಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಡಿ ಈಶ್ವರ್ ಚಡ್ಡಿ, ಶೌಕತ್ ಅಲಿಖಾನ್, ಕಾರ್ಯದರ್ಶಿಗಳಾದ ಆರ್ ಎಚ್ ಕುಮಾರ್, ಡೈರಿ ವೆಂಕಟೇಶ್ ಡಿಸಿಸಿ ಬ್ಲಾಕ್ ಅಧ್ಯಕ್ಷರಾದ ನಾಗಭೂಷಣ್ ಪ್ರಚಾರ ಸಮಿತಿಯ ಉಪಾಧ್ಯಕ್ಷರಾದ ಲತಾ ರಂಗನಾಥ್, ಶ್ರೀನಿವಾಸ್ ಯಾದವ್ ಮುಖ್ಯ ಸಂಯೋಜಕರುಗಳಾದ ಮಹೇಂದ್ರ ಕಾಗಿನೆಲೆ, ರಾಕೇಶ್ ಕುಮಾರ್, ಯೋಗೇಶ್ ಪ್ರಚಾರ ಸಮಿತಿಯ ಬ್ಲಾಕ್ ಅಧ್ಯಕ್ಷರಾದ ರಂಗಸ್ವಾಮಿ, ಚಂದ್ರಕಲಾ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಹೊಯ್ಸಳ ಡಿಸಿಸಿ ಪ್ರಚಾರ ಸಮಿತಿಯ ಸಂಯೋಜಕರಾದ ಸಾಯಿರಾಬಾನು, ಎಸ್ ರೇಷ್ಮಾ, ಹರೀಶ್, ಮಂಜುನಾಥ್ ಇನ್ನು ಮುಂತಾದವರು ಭಾಗವಹಿಸಿದರು.
































