
ಸಂಜೆವಾಣಿ ವಾರ್ತೆ
ಬಳ್ಳಾರಿ, ಆ.13: ನಗರದಲ್ಲಿ ಯಾವುದೇ ಬಂದ್ ನಡೆಯಲಿಲ್ಲ. ಕನಿಷ್ಠ ಸಾಂಕೇತಿಕ ಪ್ರತಿಭಟನೆ ಕೂಡ ನಡೆಯಲಿಲ್ಲ. ಜನ ಜೀವನ ಎಂದಿನಂತೆ ನಡೆಯಿತು.
ಬಸ್, ಆಟೋ ಸಂಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಹೋಟೆಲ್ ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ತೆರಿದಿದ್ದವು. ಯಾವ ಸಂಘಟನೆ ಕೂಡ ಬೆಂಬಲ ನೀಡದ ಹಿನ್ನೆಲೆ ಬಳ್ಳಾರಿ ಬಂದ್ ವಾತಾವರಣ ಕಾಣಲಿಲ್ಲ. ಆದರೂ ಅಲ್ಲಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿತ್ತು ಮುಂಜಾಗ್ರತ ಕ್ರಮವಾಗಿ.




























