Home ಜಿಲ್ಲೆ ಕರುನಾಡ ವಿಜಯಸೇನೆ ಸಂಘಟನೆಗೆ ಪದಾಧಿಕಾರಿಗಳ ಆಯ್ಕೆ

ಕರುನಾಡ ವಿಜಯಸೇನೆ ಸಂಘಟನೆಗೆ ಪದಾಧಿಕಾರಿಗಳ ಆಯ್ಕೆ

ಸಂಜೆವಾಣಿ ವಾರ್ತೆ 

ಹಗರಿಬೊಮ್ಮನಹಳ್ಳಿ :ಜೂ.15  ಕರುನಾಡ ವಿಜಯಸೇನೆ ಸಂಘಟನೆಯ  ತಾಲೂಕು ಘಟಕವನ್ನು ಜಿಲ್ಲಾ ಅಧ್ಯಕ್ಷ ಕೆ.ಎಸ್.ಬಸವರಾಜ್ ನೇತೃತ್ವದಲ್ಲಿ ರಚಿಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘಟನೆಯ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶಪತ್ರಗಳನ್ನು ವಿತರಿಸಲಾಯಿತು.

ನೂತನ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಆರ್. ಪ್ರಕಾಶ್ ಮಾತನಾಡಿ, ಸಂಘಟನೆಯ ಸಿದ್ಧಾಂತ ಹಾಗೂ ಸಂವಿಧಾನದ ನಿಯಮಾವಳಿಗಳಿಗೆ ಬದ್ದರಾಗಿ ಕಾರ್ಯನಿರ್ವಹಿಸುವುದಾಗಿ ಹುದ್ದೆಗೆ ಯಾವುದೇ ಧಕ್ಕೆಯಾಗದಂತೆ ಕಾರ್ಯನಿರ್ವಹಿಸುವುದಾಗಿ ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಉಪಸ್ಥಿತರಿದ್ದರು. ತಾಲೂಕು ಘಟಕದ ಇತರೆ ಪದಾಧಿಕಾರಿಗಳಾಗಿ ಉಪಾಧ್ಯಕ್ಷರಾಗಿ ಹಿಟ್ನಾಳ್ ವಿಶ್ವನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಜೆ. ದುರ್ಗಪ್ಪ, ಗೌರವ ಅಧ್ಯಕ್ಷರಾಗಿ ಶಿವಕುಮಾರ್ ಚೌಹಾಣ್ , ಖಜಾಂಚಿಯಾಗಿ ಶಿವಕುಮಾರ್ ಎಂ.. ಉಪ್ಪಾರಗಟ್ಟಿ ಗ್ರಾಮ ಘಟಕದ ಅಧ್ಯಕ್ಷರಾಗಿ ಇಮಾಮ್ ಸಾಬ್, ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ವೆಂಕಟೇಶ್ ನಾಯ್ಕ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ ಗುರುಸ್ವಾಮಿ ಹಾಗೂ ಯುವ ಘಟಕದ ತಾಲೂಕು ಅಧ್ಯಕ್ಷರಾಗಿ ಕುಮಾರ್  ಆಯ್ಕೆ ಮಾಡಲಾಯಿತು.