
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.01: ನಿನ್ನೆಯಿಂದ ಆರಂಭವಾಗಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆಯಲ್ಲಿ ಮತದಾರರಿಗೆ ಎನ್ಯುಮರೇಷನ್ ಫಾರಂ ನೀಡಿ ಅವನ್ನು ತುಂಬಿಸಿ, ಡಿಜಿಟಲ್ ಮಾಡಿ ಅಪ್ ಲೋಡ್ ಮಾಡುವುದರಲ್ಲಿ ಮೊದಲ ದಿನ ಬಳ್ಳಾರಿ ಜಿಲ್ಲೆ ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದಿದೆಂದು ಜಿಲ್ಲಾಧಿಕಾರಿ ಕೆ.ನಾಗೇಂದ್ರಪ್ರಸಾದ್ ಹೇಳಿದ್ದಾರೆ.
ಸಂಜೆವಾಣಿಯೊಂದಿಗೆ ಮಾತನಾಡಿದ ಅವರು ಈ ಕುರಿತು ವಿವರಣೆ ನೀಡಿ, ಈ ಪ್ರಕ್ರಿಯೆಯಲ್ಲಿ ರಾಯಚೂರು ಜಿಲ್ಲೆ 15750 ಮತದಾರರ ಹೆಸರು ಡಿಜಿಟಲ್ ಮೂಲಕ ಅಪ್ ಲೋಡ್ ಮಾಡಿ ಮೊದಲ ಸ್ಥಾನದಲ್ಲಿದ್ದರೆ. ಬಳ್ಳಾರಿ ಜಿಲ್ಲೆ 8059 ಮತದಾರರ ಹೆಸರು ಡಿಜಿಟಲ್ ಮಾಡಿದೆ. ಕೊಡುಗು ಜಿಲ್ಲೆ ಕೇವಲ 163 ಮಾಡುವ ಮೂಲಕ ಕೊನೆ ಸ್ಥಾನದಲ್ಲಿದೆ.
ಇನ್ನು ಎನ್ಯುಮರೇಷನ್ ಅರ್ಜಿಗಳನ್ನು ಮತದಾರರಿಗೆ ವಿತರಿಸುವಲ್ಲಿ ಹಾಸನ. 204110 ಅರ್ಜಿ ವಿತರಿಸಿ ಮೊದಲ ಸ್ಥಾನದಲ್ಲಿದ್ದರೆ. ಬಳ್ಳಾರಿ 41774 ವಿತರಿಸಿ 19 ನೇ ಸ್ಥಾನದಲ್ಲಿದೆ. ಕೊಡಗು 8670 ವಿತರಿಸಿ ಕೊನೆ ಸ್ಥಾನದಲ್ಲಿದೆ. ಈ ತಿಂಗಳ 29 ರ ವರೆಗೆ ಈ ಪ್ರಕ್ರಿಯೆ ನಡೆಯಲಿದೆ.
ಮೊದಲ ದಿನವಾದ್ದರಿಂದ ಒಂದಿಷ್ಟು ಕೆಲ ಅಡೆ ತಡೆಗಳು ಎದುರಾಗಿವೆ ಅವನ್ನು ಪರಿಹರಿಸಿಕೊಂಡು ಇನ್ನಷ್ಟು ವೇಗ ಪಡೆಯಲಿದೆಂದು ಎಡಿಸಿ ಮಹಮ್ಮದ್ ಝುಬೇರ್ ಅವರು ಹೇಳಿದ್ದು. ಮನೆ ಮನೆಗೆ ಬರುವ ಬಿಎಲ್ ಓ ಗಳಿಗೆ ಮತದಾರರು ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು ಎಂದಿದ್ದಾರೆ.




























