Home ಜಿಲ್ಲೆ ಅನ್ನಪೂರ್ಣಗೆ ಸಚಿವ ಸ್ಥಾನ ದೊರೆಯುವ ವಿಶ್ವಾಸ ನನ್ನದು: ತುಕರಾಂ

ಅನ್ನಪೂರ್ಣಗೆ ಸಚಿವ ಸ್ಥಾನ ದೊರೆಯುವ ವಿಶ್ವಾಸ ನನ್ನದು: ತುಕರಾಂ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ:ಅ,8- ನಾನು ಕಾಂಗ್ರೆಸ್ ನಲ್ಲಿ ಶಿಸ್ತಿನ ಸಿಪಾಯಿ. ನನ್ನ ರಕ್ತದಲ್ಲಿ ಕಾಂಗ್ರೆಸ್ ಇದೆ. 2018ರಲ್ಲಿಯೇ ಈ ಮಾತನ್ನು ಹೇಳಿದ್ದೇನೆ. ಪಕ್ಷ ಹೇಳಿದ ಹಾಗೇ ಕೇಳ್ತೇನೆ. ನಿಮ್ಮ ರಾಜಕೀಯ ಭವಿಷ್ಯ ನಾವು ರೂಪಿಸುತ್ತೇವೆ. ಎಂದು ಪಕ್ಷ ನಮಗೆ ಸೂಚನೆ ನೀಡಿದೆ. ಸೋನಿಯಾ ಗಾಂಧಿ ಅವರ  ಬಳಿಕ  ಬಳ್ಳಾರಿಯಲ್ಲಿ ಗೆದ್ದಿರೋದು ( ಕಾಂಗ್ರೆಸ್ ಪಕ್ಷದಿಂದ) ನಾನು ಗೆದ್ದಿದ್ದೇನೆ ಹೈಕಮೆಂಡ್ ಸೂಚನೆ ಮೇರೆಗೆ ಸ್ಪರ್ಧೆ ಮಾಡಿ ಎಂಪಿಯಾದೆ.ಉಪಚುನಾವಣೆ ವೇಳೆ ಸರ್ವೇ ನಮ್ಮ ಪರವಾಗಿರೋ ಹಿನ್ನೆಲೆ ಪತ್ನಿಯನ್ನು ಕಣಕ್ಕಿಳಿಸಿ ಗೆದ್ದಿದ್ದೇವೆ. ಕೊನೆ ಕ್ಷಣದಲ್ಲಿ ಪತ್ನಿ ಅನ್ನಪೂರ್ಣ ಸಚಿವ ಸ್ಥಾನ ತಪ್ಪಿದೆ ಎನ್ನಲಾಗ್ತಿದೆ. ಅವಕಾಶ ತಪ್ಪಿಲ್ಲ ಆದ್ರೇ ಮತ್ತೊಮ್ಮೆ ಸಿಗೋ ವಿಶ್ವಾಸ ಇದೆ. ಪ್ರಯತ್ನ ಕೊನೆಯವರೆಗೂ ಮಾಡ್ತೇನೆ ಸಿಕ್ಕೇ ಸಿಗೋ ವಿಶ್ವಾಸ ಇದೆ. 2028 ರಾಜ್ಯದಲ್ಲಿ ಮತ್ತು 2029 ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ತೇದೆ ಎಂದು ಸಂಸದ ಈ ತುಕರಾಂ ಇಂದು ನಗರದಲ್ಲಿ ಮಾಧ್ಯಮಗಳಜೊತೆ ಮಾತನಾಡುತ್ತಾ ಹೇಳಿದ್ದಾರೆ.