Home Uncategorized ಸಿರಿಗೇರಿಯಲ್ಲಿ ಬಸವದಳದ ಶರಣರಿಂದ ಮಾಸಿಕ ಇಷ್ಟಲಿಂಗ ಪೂಜೆ.

ಸಿರಿಗೇರಿಯಲ್ಲಿ ಬಸವದಳದ ಶರಣರಿಂದ ಮಾಸಿಕ ಇಷ್ಟಲಿಂಗ ಪೂಜೆ.

ಸಂಜೆವಾಣಿ ವಾರ್ತೆ

ಸಿರಿಗೇರಿ. ಅ.25. ಸಿರುಗುಪ್ಪ ತಾಲೂಕು ಸಿರಿಗೇರಿ ಗ್ರಾಮದ ಅಗಸೆ ಹತ್ತಿರದ ಕೊಟ್ಟೂರು ಸ್ವಾಮಿ ವಿರಕ್ತಮಠದಲ್ಲಿ ಇಂದು ಸಿರಿಗೇರಿಯ ಬಸವ ಬಳಗದ ಶರಣ ಶರಣೆಯರಿಂದ 56ನೇ ಮಾಸಿಕ, ಸಾಮೂಹಿಕ ಇಷ್ಟುಲಿಂಗ ಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು. ಶಿಕ್ಷಕ ಶಿವಕುಮಾರ್ ಮುದ್ದಾಟನೂರು ರವರಿಂದ ಪ್ರಾತ್ಯಕ್ಷಿಕತೆಯಲ್ಲಿ ಇಷ್ಟಲಿಂಗ, ಪ್ರಾಣಲಿಂಗ, ಮತ್ತು ಭಾವಲಿಂಗ ಪೂಜೆಗಳನ್ನು ಶರಣರು ಭಕ್ತಿ ಭಾವದಿಂದ ನೆರವೇರಿಸಿದರು. ಹಿರಿಯ ಶರಣ ಎಸ್ ಎನ್ ವಿರೂಪಾಕ್ಷಗೌಡ ರವರು ಷಟಸ್ಥಳ ಧ್ವಜಾರೋಹಣ ಮಾಡಿದರು. ಇಷ್ಟು ಲಿಂಗ ಪೂಜಾ ಕಾರ್ಯಕ್ರಮದಲ್ಲಿ ಶರಣರಾದ ಜೆ.ಮಲ್ಲಿಕಾರ್ಜುನಗೌಡ, ಸಿರ್ಗಾಪುರ ಎಂಗನಗೌಡ, ವಿವೇಕಾನಂದ ಪ್ರೌಢಶಾಲೆ ಮುಖ್ಯಗುರು ಎಸ್ಎನ್.ಪಂಪಾಪತಿ, ಹಾವಿನಹಾಳು ಎರೆಪ್ಪಗೌಡ, ಎಸ್.ಶಶಿಧರ, ಎಂ.ಪಂಪನಗೌಡ, ಗುಂಡಿಗನೂರು ಗ್ರಾಮದ ವೀರೇಶ ಮತ್ತು ಮಲ್ಲಿಕಾರ್ಜುನ ಶರಣ ದಂಪತಿಗಳು, ನಾಗನಾಥೇಶ್ವರ ಬ್ಯಾಂಕ್ ಯಲ್ಲನಗೌಡ, ಸೊಸೈಟಿ ಉಪಾಧ್ಯಕ್ಷ ದರೂರು ಚನ್ನಪ್ಪ, ಹೊಸಹಳ್ಳಿ ಚಂದ್ರಶೇಖರ, ಗೋಡೆ ನಿರಂಜನಕುಮಾರ್ ಮತ್ತು ಮಹಿಳಾ ಶರಣರು ಇತರರು ಪಾಲ್ಗೊಂಡಿದ್ದರು. ಪೂಜಾ ಕಾರ್ಯಕ್ರಮಕ್ಕೆ ದಾಸೋಹ ಸೇವೆಯನ್ನು ಎಸ್. ಎನ್. ಪಂಪಾಪತಿ ಶಿಕ್ಷಕ ದಂಪತಿಗಳು ವ್ಯವಸ್ಥೆ ಮಾಡಿದ್ದರು. siri01