
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.01: ಇಲ್ಲಿನ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ( ಬುಡಾ)ದಲ್ಲಿ ಸಂಬಂಧಿಸಿದ ಸಚಿವರು, ಬುಡಾ ಅಧ್ಯಕ್ಷರ ಹೆಸರಲ್ಲಿ ಬುಡಾ ಅಧಿಕಾರಿಗಳು, ಸಿಬ್ಬಂದಿ ಲಂಚ ಕೇಳ್ತಾರೆ ಎಂದು ರಿಯಲ್ ಎಸ್ಟೇಟ್ ಉದ್ಯಮಿ ಈರೇಶಿ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ ಅವರು ಕಳೆದ 20 ವರ್ಷಗಳಿಂದ ನಾನು ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಇದ್ದೇನೆ. ಈ ಹಿಂದೆ ಈ ರೀತಿ ಇರಲಿಲ್ಲ. ಈಗ್ಗೆ ಕೆಲ ವರ್ಷಗಳಿಂದ ಈ ಲಂಚದ ಬೇಡಿಕೆ ಹೆಚ್ಚಾಗಿದೆ. ಈ ಹಿಂದೆ ಅಗತ್ಯ ದಾಖಲೆ ನೀಡಿದರೆ ನನಗಂತೂ ಕೆಲಸ ಮಾಡಿಕೊಡುತ್ತಿದ್ದರು. ಈಗ ಲಂಚ ಇಲ್ಲದೆ ಯಾವುದೇ ಪೈಲ್ ಮೂ ಮಾಡಲ್ಲ. ಎಲ್ಲಾ ದಾಖಲೆ ಇದ್ದರೂ ಏನಾದರೊಂದು ಕೊಕ್ಕೆ ಹಾಕುತ್ತಾರೆ. ಲಂಚ ಕೊಟ್ಟರೆ ಸರಿ ದಾಖಲೆ ಇರದಿದ್ದರೂ ಕೆಲಸ ತಕ್ಷಣ ಆಗುತ್ತೆ.
ಇದಕ್ಕೆ ಬೇಸತ್ತು ಈ ಹಿಂದೆ 2024 ರಲ್ಲಿ20 ಎಕರೆ ಲೇಔಟ್ ಗೆ ಅನುಮತಿ ನೀಡಲು 23 ವರೆ ಲಕ್ಷ ಹಣ ಕೇಳಿದ್ದರು. ಆಗ ಲೋಕಾಯುಕ್ತಕ್ಜೆ ದೂರು ನೀಡಿ ಆಯುಕ್ತರಾದಿಯಾಗಿ ಆರು ಜನ ಅಮಾನತ್ ಆಗಿದ್ದರೂ.
ಆದರೂ ಇಲ್ಲಿನ ಲಂಚಾವತಾರ ಮಾತ್ರ ಕಡಿಮೆ ಆಗುತ್ತಿಲ್ಲ. ಸರ್ಕಾರಕ್ಕೆ ನೀಡಬೇಕಾದ ಶುಲ್ಕಕ್ಕಿಂತ ಇವರ ಲಂಚದ ಹಣ ದುಪ್ಪಟ್ಟಾಗಿರುತ್ತೆ. ಬೇಸತ್ತು ಒತ್ತೀಗೆ ಎರೆಡುವರೆ ಎಕರೆ ಲೇಔಟ್ ಗೆ 3.5 ಲಕ್ಷ ಲಂಚ ಕೇಳಿದ್ದಕ್ಕೆ ಮತ್ತೆ ಲೋಕಸಯುಕ್ತಕ್ಕೆ ದೂರು ನೀಡಿ ಬಯಡಾ ಸರ್ವೇಯರ್ ಶಾಂತಮೂರ್ತಿ ಮೇಲೆ ದೂರು ದಾಖಲಿಸುವಂತೆ ಮಾಡಿರುವೆ.
ಸಚಿವರು, ಅಧ್ಯಕ್ಷರಿಗೆ ಲಂಚ ಕೊಡಬೇಕು ಎಂಬ ಆಡಿಯೋ ನೀಡಿದ ಅವರು. ಇದರಿಂದಾಗಿ ನನ್ನನ್ನು ಅಧಿಕಾರಿಗಳು ಶತ್ರುಗಳಂತೆ ಕಾಣುತ್ತಿದ್ದಾರೆ. ಅವರು ತೊಂದರೆ ಕೊಡುವ ಸಾಧ್ಯತೆ ಇದೆ. ನನ್ನ ವ್ಯವಹಾರಕ್ಕೂ ಅಡ್ಡಿಪಡಿಸುವ ಹುನ್ನಾರ ಮಾಡಬಹುದು. ಆದರೂ ಭ್ರಷ್ಟಾಚಾರದ ವಿರುದ್ದ ನನ್ನ ಹೋರಾಟ ನಿಲ್ಲದು ಎಂದಿದ್ದಾರೆ.
ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಲಂಚ ರಹಿತ ಆಡಳಿತ ಎನ್ನುತರೆ. ಇಲ್ಲಿ ಮಾತ್ರ ಲಂಚ ಇಲ್ಲದೆ ಕೆಲಸ ಆಗಲ್ಲ. ಇದೊಂದೇ ಕಚೇರಿ ಅಲ್ಲ ಇತರೇ ಕಚೇರಿಗಳಲ್ಲೂ ಇದೇ ಪರಿಸ್ಥಿತಿ ಇದೆ ಎಂದು ಆರೋಪಿಸಿದರು.
ಬುಡಾ ಅಧ್ಯಕ್ಷರ ಹೆಸರೇಳಿ ಹಣ ಕೇಳುತ್ತಿದ್ದರೆ. ಈ ವಿಷಯವನ್ನು ಅವರ ಗಮನಕ್ಕೆ ತಂದಿದ್ದೀರ ಎಂಬ ಪ್ರಶ್ನೆಗೆ ಇಲ್ಲ.ತರಲಿಲ್ಲ ಇನ್ನು ಮುಂದೆ ತರುವೆ ಎಂದರು.
ಆಡಿಯೋದಲ್ಲಿ ಶಾಸಕರದ್ದು ಬೇರೆ, ಸಚಿವರದ್ದು ಬೇರೆ, ಅಧ್ಯಕ್ಷರದ್ದು ಕೊಡಬೇಕು ಎಂಬ ಅಸ್ಪಷ್ಟವಾದ ಮಾತುಗಳು ಕೇಳಿಬರುತ್ತಿವೆ.
ಒಟ್ಟಾರೆ ಬುಡಾದಿಂದ ಒಂದು ಲೇಔಟ್ ಮಾಡಲು ಹತ್ತಾರು ವರ್ಷ ಆದರೂ ಆಗದಿದ್ದರೂ, ಲಂಚ ವಿಷಯದಲ್ಲಿ ಮಾತ್ರ ಆಗಾಗ್ಗೆ ಸುದ್ದಿಮಾಡುತ್ತಲೇ ಇದೆ.




























