Home ಜಿಲ್ಲೆ ವೀಣಾ ಆದೋನಿ, ಶ್ರೀಧರ ಹೆಗಡೆಗೆ ದೊಡ್ಡನಗೌಡ ರಂಗತೋರಣ ಪುರಸ್ಕಾರ

ವೀಣಾ ಆದೋನಿ, ಶ್ರೀಧರ ಹೆಗಡೆಗೆ ದೊಡ್ಡನಗೌಡ ರಂಗತೋರಣ ಪುರಸ್ಕಾರ

oplus_6291458

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮೇ.29: ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಸಹಕಾರದಲ್ಲಿ ನಗರದ ರಂಗತೋರಣ ಸಂಸ್ಥೆ ಪ್ರತಿ ವರ್ಷ ಕೊಡಮಾಡುವ  ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ’ ಕ್ಕೆ 2024ನೇ ಸಾಲಿಗೆ ಗ್ರಾಮೀಣ ರಂಗಭೂಮಿಯ ಹಿರಿಯ ನಟಿ, ಗಾಯಕಿ, ನೃತ್ಯ ಕಲಾವಿದೆ ಬಳ್ಳಾರಿಯ ಶ ವೀಣಾ ಆದವಾನಿ ಹಾಗೂ 2025ನೇ ಸಾಲಿಗೆ ವೃತ್ತಿ ರಂಗಭೂಮಿಯ ಹಿರಿಯ ನಟ, ನಿರ್ದೇಶಕ ವಿಜಯಪುರದ  ಶ್ರೀಧರ ಹೆಗಡೆ ಅವರುನ್ನು ಆಯ್ಕೆಮಾಡಿದೆಂದು. ರಂಗತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ತಿಳಿಸಿದ್ದಾರೆ

ಅವರು ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ.  ಬರುವ ಜೂನ್  12,13 ಮತ್ತು 14 ರಂದು ನಡೆಯಲಿರುವ ಸಮಾರಂಭದಲ್ಲಿ ತಲಾ 25 ಸಾವಿರ ರೂ ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಿದೆ.

ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡರ ಸ್ಮರಣೆಯಲ್ಲಿ ರಂಗತೋರಣ ಸಾಂಸ್ಕೃತಿಕ ಸಾರ್ವಭೌಮ ಜೋಳದರಾ ದೊಡ್ಡನಗೌಡ ರಂಗತೋರಣ ಪುರಸ್ಕಾರವನ್ನು 2016ರಿಂದ ಆರಂಭಿಸಿದ್ದು, ರಂಗತೋರಣದೊಂದಿಗೆ ಜೋಳದರಾ ದೊಡ್ಡನಗೌಡ ಪ್ರತಿಷ್ಠಾನ ಹಾಗೂ ಗೌಡರೇ 1960ರಲ್ಲಿ ಸ್ಥಾಪಿಸಿದ್ದ ಶ್ರೀರಾಮೇಶ ಟ್ರಸ್ಟ್ ಸಹಯೋಗದ ರಾಜ್ಯಮಟ್ಟದ ಪುರಸ್ಕಾರ ನಾಡಿನ ಹಿರಿಯ ರಂಗಕರ್ಮಿಗಳಿಗೆ ನೀಡಲಾಗುತ್ತಿದೆ. 

ಸಾಂಸ್ಕೃತಿಕ ಸಾರ್ವಭೌಮ, ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ 25 ಸಾವಿರ ನಗದು ಹಾಗೂ ಆಕರ್ಷಕ ಪ್ರಶಸ್ತಿ ಫಲ ಒಳಗೊಂಡಿರುತ್ತದೆ.

ಪ್ರಥಮ ಬಾರಿಗೆ 2016ರಲ್ಲಿ ರಂಗ ನಟಿ, ನಿರ್ದೇಶಕಿ ಡಾ.ಬಿ.ಜಯಶ್ರೀ, 2017ರಲ್ಲಿ ರಂಗಜಂಗಮ ಸಾಣೇಹಳ್ಳಿಯ  ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, 2018ರಲ್ಲಿ ಹಿರಿಯ ನಾಟಕಕಾರ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿಯವರು-2019ರಲ್ಲಿ ಹಿರಿಯ ಪ್ರಸಾಧನ ಕಲಾವಿದ ರಾಮಕೃಷ್ಣ ಕನ್ನರ್ಪಾಡಿ ಯವರು, 2020ರಲ್ಲಿ ವೃತ್ತಿ ರಂಗಭೂಮಿಯ ಹಿರಿಯ ಕಲಾವಿದ  ಶೇಖ್ ಮಾಸ್ತರ್ 2021ರಲ್ಲಿ ಹಿರಿಯ ರಂಗಕರ್ಮಿ  ಗೌರಿದತ್ತು ಅವರು ಪಡೆದಿದ್ದು, 2022ರಲ್ಲಿ ಗ್ರಾಮೀಣ ರಂಗಭೂಮಿ ಹಿರಿಯ ಕಲಾವಿದ ಸಂಘಟಕ ಶೇಷಗಿರಿಯ  ಗುರಪ್ಪನವರ, 2023ರಲ್ಲಿ ಹವ್ಯಾಸಿ ರಂಗಭೂಮಿಯ ಹಿರಿಯ ಕಲಾವಿದೆ ಡಿ.ಹನುಮಕ್ಕ ಅವರಿಗೆ ನೀಡಲಾಗಿದೆ.

ದೊಡ್ಡನಗೌಡರು :

ಬಳ್ಳಾರಿ ಜಿಲ್ಲೆಯ ಜೋಳದರಾಶಿಯ ದೊಡ್ಡನಗೌಡರು ನಮ್ಮ ನಾಡಿನ ಸಾಂಸ್ಕೃತಿಕ ಮೇರು ವ್ಯಕ್ತಿ. ‘ನಾಟಕ ನನ್ನ ಬೆಂಬಿಡ ಬ್ರಹ್ಮರಾಕ್ಷಸ’ವೆಂದು ರಂಗಭೂಮಿಗೆ ಬಂದ ಜಮೀನ್ದಾರ.ನಟ-ನಾಟಕಕಾರ, ಗಮಕ, ವಚನ ವಾಗ್ಗೇಯಕಾರ ಲಾವಣಿಕಾರ, ಕವಿ, ಸಾಹಿತಿ-ಸಂಘಟಕ, ಗ್ರಾಮಾಭೀವೃದ್ಧಿಯ ಹರಿಕಾರ, ಪ್ರವಚನ ಶಿರೋಮಣಿ, ಗುಲಬರ್ಗಾ ವಿಷ ಹಾಗೂ ಹೈದರಾಬಾದಿನ ತೆಲುಗು ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಸಹೃದಯ ಸಂಪನ್ನರು.

ಸುದ್ದಿಗೋಷ್ಟಿಯಲ್ಲಿ  ದೊಡ್ಡನಗೌಡ ಪ್ರತಿಷ್ಠಾನದ  ಅಧ್ಯಕ್ಷ ಜೋಳದರಾಶಿ ಪೊಂಪನಗೌಡ, ಜಿಲ್ಲಾ ಕಲಾವಿದರ ಸಂಘದ ಕಾರ್ಯದರ್ಶಿ ಮುದ್ದಟನೂರು ತಿಪ್ಪೆಸ್ವಾಮಿ ಇದ್ದರು.