Home ಜಿಲ್ಲೆ ಮತದಾರರ ಪಟ್ಟಿ ಪರಿಷ್ಕರಣೆ ನೋಟೀಸ್ ಪಡೆದವರ ವಿಚಾರಣೆ ಪ್ರಕ್ರಿಯೆ ಆರಂಭ

ಮತದಾರರ ಪಟ್ಟಿ ಪರಿಷ್ಕರಣೆ ನೋಟೀಸ್ ಪಡೆದವರ ವಿಚಾರಣೆ ಪ್ರಕ್ರಿಯೆ ಆರಂಭ

Oplus_19005442

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಸೆ.06: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ಹೆಸರು, ವಯಸ್ಸು, ವಿಳಾಸದ ಅನುಮಾನಗಳಿಗೆ ನೋಟೀಸ್ ಪಡೆದವರಿಗೆ ವಿಚಾರಣೆ ನಡೆಸಿ, ಸೂಕ್ತ ದಾಖಲೆ ಪಡೆದು ಸರಿಪಡಿಸುವ ಕಾರ್ಯ ಆರಂಭಗೊಂಡಿದೆ.

ನಗರದಲ್ಲಿ ಪ್ರತಿ ವಾರ್ಡಿಗೆ ಒಂದರಂತೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮಕ್ಕೆ ಒಂದು ಎರಡೆರಂತೆ ವಿಚಾರಣೆಯ ಕೇಂದ್ರಗಳನ್ನು ತೆರೆದಿದೆ. ಇಲ್ಲಿ ಪ್ರತಿ ಕೇಂದ್ರದಲ್ಲಿ ಓರ್ವ ಸಹಾಯಕ ಚುನಾವಣಾ ಅಧಿಕಾರ, ಬಿಎಲ್ ಒ, ಡಾಟಾ ಆಪರೇಟರ್ ಹಾಗು ಸೂಪರ್ ವೈಸರ್ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿದಿನ ಒಂದು ಕೇಂದ್ರದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 8 ರವರೆಗೆ ಗರಿಷ್ಟ 150 ಜನರ ವಿಚಾರಣೆ ನಡೆಯುತ್ತಿದೆ. ಮತದಾರರು ಮೊದಲ ನೋಟೀಸ್ ಗೆ ಏಳು ದಿನಗಳ ಒಳಗೆ ಬಾರದೆ ಇದ್ದರೆ ಮತ್ತೊಮ್ಮೆ, ಮಗದೊಮ್ಮೆ ಮೂರು ಬಾರಿ ನೀಡಲಾಗುತ್ತದೆ. ಅನಾರೋಗ್ಯ ಪೀಡಿತರು ವಿಚಾರಣಾ ಕೇಂದ್ರಕ್ಕೆ ಬರಲು ಆಗದೇ ಇದ್ದ ವಯಸ್ಸಾದವರ ಮನೆಗೆ ತೆರಳಿ ವಿಚಾರಣೆ ನಡೆಸಿ ದಾಖಲೆ ಪಡೆಯಲಿದೆ.

ನಗರದ 17 ನೇ ವಾರ್ಡ್ ನ ಮತದಾರರಿಗೆ ನಿನ್ನೆಯಿಂದ  ನಗರದ ರಾಜಕುಮಾರ್ ರಸ್ತೆಯಲ್ಲಿನ ವಂದನಾ ಶಾಲೆಯಲ್ಲಿ ನಡೆಸಲಾಗುತ್ತಿದೆ. ಇಲ್ಲಿ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ ಎ.ಎಂ.ನಂದೀಶ್, ಡಾಟಾ ಎಂಟ್ರಿ ಆಪರೇಟರ್  ನವೀನ್, ಸೂಪರ್ ವೈಸರ್ ರಂಗಸ್ವಾಮಿ ಹಾಗು ಬಿಎಲ್ ಓ ಬಿ.ಸುನೀತ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವಾರ್ಡ್ ನಿಂದ 9 ಮತಗಟ್ಟೆಯ 1238 ಜನರಿಗೆ ನೋಟಿಸ್ ಜಾರಿಮಾಡಲಾಗಿದೆ. ನಿನ್ನೆ ದಿನ 92 ಜನರ ವಿಚಾರಣೆ ಮಾಡಿದೆಂದು ನಂದೀಶ್ ಅವರು ಸಂಜೆವಾಣಿಗೆ ತಿಳಿಸಿದ್ದಾರೆ

ವಿಚಾರಣಾ ಕೇಂದ್ರದಲ್ಲಿ ಯಾವುದೇ ಸಮಸ್ಯೆ ಆಗದಂತೆ ಉಪಕರಣಗಳ ಪರ್ಯಾಯ ವ್ಯವಸ್ಥೆ ಮಾಡಿದೆಂದು ಮೇಲ್ವಿಚಾರಕ ತಿಪ್ಪೆಸ್ವಾಮಿ ಅವರು ತಿಳಿಸಿದ್ದಾರೆ.

g2

ಮತದಾರರ ಪಟ್ಟಿ ಪರಿಷ್ಕರಣೆ

ನೋಟೀಸ್ ಪಡೆದವರ ವಿಚಾರಣೆ ಪ್ರಕ್ರಿಯೆ ಆರಂಭ