Home ಜಿಲ್ಲೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರ ಆರಂಭ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರ ಆರಂಭ

(ಸಂಜೆವಾಣಿ ವಾರ್ತೆ)

ಬಳ್ಳಾರಿ:ಅ,5-  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ, ಜಿಲ್ಲಾ ಸಂಸ್ಥೆ, ಬಳ್ಳಾರಿಯಲ್ಲಿ 2025-26ನೇ ಸಾಲಿನ ಸ್ಕೌಟ್ಸ್ ಗೈಡ್ಸ್ ಗಳಿಗೆ ರಾಜ್ಯಮಟ್ಟದ “ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರ”ವನ್ನು ಅ 3 ರಿಂದ ವರೆಗೆ ಕುರುಗೋಡು ತಾಲೂಕಿನ ವೆಂಕಾವಧೂತರ ಮಠದ ಆವರಣದಲ್ಲಿ ನಡೆಯುತ್ತಿದೆ.

  ಶಿಬಿರವದ ಉದ್ಘಾಟನೆಯನ್ನು ನಿನ್ನೆ ಜಿಂಕಲ್ ವೆಂಕಟೇಶ, ಅಧ್ಯಕ್ಷರು, ಸದ್ಗುರು ವೆಂಕಾವಧೂತರ ಸೇವಾ ಟ್ರಸ್ಟ್  ನೆರವೇರೊಸಿದರು. ಡಾ. ಎಂ.ಟಿ. ಮಲ್ಲೇಶಪ್ಪ, ಉಪಾಧ್ಯಕ್ಷರು ಅಧ್ಯಕ್ಷತೆ ವಹಿಸಿದ್ದರು. 

ಮುಖ್ಯ ಅತಿಥಿಗಳಾಗಿ  ಜಾಯಿ ಪ್ರಕಾಶ ರೆಡ್ಡಿ ದಮ್ಮೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು  ಆಗಮಿಸಿದ್ದರು

ಶಿಬಿರದ ನಾಯಕರಾಗಿ  ಎಂ ನಾಗರಾಜ್, ಜಿಲ್ಲಾ ತರಬೇತಿ ಆಯುಕ್ತರು (ಸ್ಕೌಟ್), ಗೈಡ್ ವಿಭಾಗಕ್ಕೆ  ಅನ್ನಪೂರ್ಣ ಕಟಗಿ ಕಾರ್ಯನಿರ್ವಹಿಸಿದರು.

ಈ ಸಂದರ್ಭದಲ್ಲಿ ಡಾ. ಕುಪ್ಪಗಲ್ ವೀರೇಶ್, ಜಿಲ್ಲಾ ಆಯುಕ್ತರು(ಸ್ಕೌಟ್),  ಎಸ್,  ಜಯಸಿಂಹ ಜಿಲ್ಲಾ ಕಾರ್ಯದರ್ಶಿಗಳು,  ಅನಂತಕುಮಾರ ಶೆಟ್ಟಿ, ಜಿಲ್ಲಾ ಸ್ಥಾನಿಕ ಆಯುಕ್ತರು,  ದೊಡ್ಡಬಸಪ್ಪ ಸ್ಥಳೀಯ ಕಾರ್ಯದರ್ಶಿಗಳು, ಶ ಜ್ಯೋತಿ ಜಿಲ್ಲಾ ತರಬೇತಿ ಆಯುಕ್ತರು ಗೈಡ್,  ಜಾವಿದ್, ಸ್ಥಳೀಯ ಖಜಾಂಚಿಗಳು ಹಾಗೂ ಮೆಹತಾಬ್,  ಮಂಜುನಾಥ,  ಸುಧೀರ್,  ಉಷಾರಾಣಿ ಹಾಗೂ  ಮಹಮ್ಮದ್ ಶರ್ಫುದ್ದೀನ್ ಹಾಗೂ ಸ್ಕೌಟ್ ಮಾಸ್ಟರ್ಸ್, ಗೈಡ್ ಕ್ಯಾಪ್ಟನ್ಸ್ ಇದ್ದರು.