
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.01: ಕಳೆದ ಜನವರಿ 1 ರಂದು ನಗರದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವಣಕ್ಕೆ ಬ್ಯಾನರ್ ಅಳವಡಿಕೆ ಸಂಬಂಧ ಜರುಗಿದ ಗಲಾಟೆ, ಫೈರಿಂಗ್ ಪ್ರಕರಣದ ತನಿಖೆಯನ್ನು ಸಂಬಂಧಿಸಿ ಮೂರು ತಿಂಗಳ ಬಳಿಕ ಸಿಐಡಿ ಚುರುಕುಗೊಳಿಸಿದೆ.
ಕಳೆದ ನಾಲ್ಕು ದಿನಗಳಿಂದ ನಗರದಲ್ಲಿ ಬೀಡು ಬಿಟ್ಟಿರುವ ತಂಡ ಡಿವೈಎಸ್ಪಿ ಅಂಜನ್ ಕುಮಾರ್ ನೇತೃತ್ವದ ಸಿಐಡಿ ಅಧಿಕಾರಿಗಳ ತಂಡ. ಪ್ರಕರಣದ ಆರೋಪಿಗಳನ್ನು ನಗರದ ಗೆಸ್ಟ್ ಹೌಸ್ ನಲ್ಲಿ ವಿಚಾರಣೆ ನಡೆಸಿದೆ.
ಬಲ್ಲ ಮೂಲಗಳ ಪ್ರಕಾರ ಈ ಮೊದಲು ಬೆಂಗಳೂರಿಗೆ ಬರುವಂತೆ ಮಾಜಿ ಸಚಿವ ಗಂಗಾವತಿ ಶಾಸಕ ಜನಾರ್ಧನರೆಡ್ಡಿ ಕಡೆಯ ಬಿಜೆಪಿ ಬೆಂಬಲಿತ ಆರೋಪಿಗಳಿಗೆ ನೋಟೀಸ್ ನೀಡಿತ್ತು. ಆಗ ಕೆಲವರು ಹೋಗಿ ತಮ್ಮ ಹೇಳಿಕೆ ದಾಖಲಿಸಿದ್ದರು.
ಆಗ ಹೋಗದವರನ್ನು ತಂಡ ಈಗ ಇಲ್ಲಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆಯಂತೆ. ನಂತರ ನ್ಯಾಯಾಲಯಕ್ಕೆ ವಿಚಾರಣೆಗೆ ಬರಬೇಕಾಗುತ್ತದೆಂದು ಹೇಳಿ ಕಳುಹಿಸಿದೆಯಂತೆ.
ಇನ್ನು ಮತ್ತೊಂದು ಕಡೆ ನಗರದ ಶಾಸಕ ಭರತ್ ರೆಡ್ಡಿ ಕಡೆಯ ಕಾಂಗ್ರೆಸ್ ಬೆಂಬಲಿತ 20 ಕ್ಕೂ ಹೆಚ್ಚು ಜನರಿಗೆ ನಗರದ ಎಂ.ಆರ್.ವಿ.ಲೇಔಟ್ ನಲ್ಲಿರುವ ಆರೋಪಿಯ ಮನೆಗೆ ಕರೆದು ನೋಟೀಸ್ ನೀಡಿ. ಮೇ.11 ರಂದು ಬೆಂಗಳೂರಿಗೆ ಬಂದು ಹೇಳಿಕೆ ನೀಡುವಂತೆ ಹೇಳಿದೆಯಂತೆ.
ಒಟ್ಟಾರೆ ಬ್ಯಾನರ್ ಗಲಾಟೆ ಪೈರಿಂಗ್ ಪ್ರಕರಣಕ್ಜೆ ಸಂಬಂಧಿಸಿ ಸಧ್ಯದಲ್ಲೇ ಚಾರ್ಜ್ ಶೀಟ್ ಸಲ್ಲಿಸಲು ಸಿಐಡಿ ರೆಡಿಯಾಗುತ್ತಿದೆಯಂತೆ





















