Home ಜಿಲ್ಲೆ ಮಂಗಳೂರು ಬಿಸಿಎಂ ಇಲಾಖೆ ವತಿಯಿಂದ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಕೆಸರು ಗದ್ದೆ ಕ್ರೀಡಾ ಕೂಟ

ಬಿಸಿಎಂ ಇಲಾಖೆ ವತಿಯಿಂದ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಕೆಸರು ಗದ್ದೆ ಕ್ರೀಡಾ ಕೂಟ

ಸುಳ್ಯ:ಸಾಂಪ್ರದಾಯಿಕ ಆಚರಣೆಗಳು ಮುಂದಿನ ಪೀಳಿಗೆಗೆ ಹಸ್ತಾಂತರ ವಾಗಬೇಕು – ಕೆ. ಎಂ. ಮುಸ್ತಫ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸುಳ್ಯ ತಾಲೂಕು ಮಟ್ಟದ ಕೆಸರುಗೆದ್ದೆ ಕ್ರೀಡಾ ಸ್ಪರ್ಧೆ ಸುಳ್ಯ ಕಾಂತಮಂಗಲದ ಮನಮೋಹನ ಪುತ್ತಿಲ ಅವರ ಗೆದ್ದೆಯಲ್ಲಿ ನಡೆಯಿತು.

ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ. ಎಂ. ಮುಸ್ತಫ ಉದ್ಘಾಟಿಸಿ ಮಾತನಾಡಿ ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಸಂಪ್ರದಾಯಗಳು, ಪ್ರಕೃತಿ ಯೊಂದಿಗೆ ಮನುಷ್ಯ ರಲ್ಲಿ ಇರಬೇಕಾದ ಭಾಂದವ್ಯಗಳು ಮರೆಯಾಗುತ್ತಿವೆ. ವಿದ್ಯಾರ್ಥಿ ಜೀವನದಿಂದಲೇ ಇದನ್ನು ಮೈಗೂಡಿಸಲು ಇಂತಹ ಕ್ರೀಡಾ ಕೂಟ ಸಹಕಾರಿ ಎಂದರು

ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ತಹಸೀಲ್ದಾರ್ ಮಂಜುಳಾ ವಹಿಸಿದ್ದರು. ಯುವಜನ ಸಂಯುಕ್ತ ಮಂಡಳಿ ಮಾಜಿ ಅಧ್ಯಕ್ಷ ಮನಮೋಹನ ಪುತ್ತಿಲ ಕ್ರೀಡಾಂಗಣ ಉದ್ಘಾಟಿಸಿದರು

ವೇದಿಕೆಯಲ್ಲಿ ಆದಿ ವೆಜಿಟೇಬಲ್ ಮಾಲಕ ಮಣಿಕಂಠ ಉಪಸ್ಥಿತರಿದ್ದರು.

ತಾಲೂಕು ಬಿಸಿಎಂ ಇಲಾಖೆ ಅಧಿಕಾರಿ ಗೀತಾ ಸ್ವಾಗತಿಸಿ, ನಿಲಯ ಮೇಲ್ವಿಚಾರಕಿ ದೀಪಿಕಾ ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ತಾಲೂಕಿನ ದೇವರಾಜ ಅರಸು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ೧೧ ವಿದ್ಯಾರ್ಥಿ ನಿಲಯಗಳ ಸುಮಾರು ೭೦೦ ವಿದ್ಯಾರ್ಥಿಗಳು ಭಾಗವಹಿಸಿದ್ದರು