
ಸಂಜೆವಾಣಿ ವಾರ್ತೆ
ನಂಜನಗೂಡು: ಸೆ. 11: ಮಹದೇವಮ್ಮ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಹೊಸ ಕಡೆಜಟ್ಟಿ ಗ್ರಾಮದಲ್ಲಿ ಮೃತ ಮಹದೇವಮ್ಮನ ಶವವಿಟ್ಟು 2ನೇ ದಿನದ ಪ್ರತಿಭಟನೆಯನ್ನು ಮುಂದುವರಿಸಲಾಯಿತು. ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಹುಲ್ಲಹಳ್ಳಿ ಠಾಣೆಯ ಪೆÇಲೀಸರಿಂದ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಯಿತು.ತಹಶೀಲ್ದಾರ್ ಸ್ಮಿತಾರಾಮು ಮತ್ತು ಧರ್ಮೇಂದ್ರರವರ ಭರವಸೆಯ ಮೇರೆಗೆ ಮೃತ ಮಹದೇವಮ್ಮನ ಅಂತ್ಯ ಸಂಸ್ಕಾರ ನಡೆಸಲಾಯಿತು.
ಪ್ರಕರಣದ ವಿವರ: ಸೆ 9 ಬಾನುವಾ ರಂದು ಹಣ ಕಾಸಿನ ವಿಚಾರಕ್ಕೆ ಸಂಬಂದಿಸಿದಂತೆ ಗ್ರಾಮದ ಮಹಾದೇವಮ್ಮ ಮತ್ತು ಅದೆ ಗ್ರಾಮದ ಅರೋಪಿ ನವಿನ ಜೋತೆ ಮಾತಿನ ಜೊತೆ ಮಾತಿನ ಚಕಮಕಿ ನಡೆದು. ಅರೋಪಿ ನವಿನ್ ಮೃತ ಮಹಾದೇವಮ್ಮ ನಿಗೆ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಮಹಾದೇವಮ್ಳನ್ನು ಪ್ರಥಮ ಚಿಕಿತ್ಸೆಗಾಗಿ ನಂಜನಗೂಡಿನ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗಂಭೀರವಾದ ಗಾಯಗಳಾದ ಹಿನ್ನೆಲೆಯಲ್ಲಿ ಮಹಾದೇವಮ್ಮ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ ಆರ್ ಆಸ್ಪತ್ರೆಗೆ ರವಾನಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮಹಾದೇವಮ್ಮ ಕೊನೆ ಉಸಿರೆಳೆದಿದ್ದಾರೆ. ಈ ಸಂಬಂಧ ನಂಜನಗೂಡಿನ ಹುಲ್ಲಹಳ್ಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾದರು. ಈ ವೇಳೆಗೆ ಅರೋಪಿ ನವಿನ ಕಡೆಯವರ ಗುಂಪೆÇಂದು ಮೃತ ಮಹಾದೇವಮ್ಮಳ ಮಗಳ ಅಳಿಯನ ಜೋತೆ ಮಾತುಕತೆ ನಡೆಸಿ. 1 ಲಕ್ಷದ20 ಸಾವಿರ ಹಣ ಪಡೆದು ಪ್ರಕರಣ ದಾಖಲು ಮಾಡದಂತೆ ತಾಕೀತು ಮಾಡಿದರು ಎಂದು ಮೃತ ಮಗಳಾದ ಗೀತಾ ಅಳಿಯ ಸುರೇಶ್ ತಿಳಿಸಿದರು.
ನ್ಯಾಯಕ್ಕಾಗಿ ಹುಲ್ಲಹಳ್ಳಿ ಪೆÇಲೀಸ್ ಠಾಣೆ ಮುಂದೆ ಪೆÇಲೀಸರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದರು, ಉದ್ರಿಕ್ತರನ್ನು ಪೆÇಲೀಸರು ಸಂತೈಸಿ ಕಳುಹಿಸಿದ್ದರು ಸಹ ಕೂಡ ಮೃತ ಮಹದೇವಮ್ಮಳ ಶವಸಂಸ್ಕಾರ ಕಾರ್ಯ ನಡೆಸದೆ ಶವದೊಂದಿಗೆ ಪ್ರತಿಭಟನೆ ಮುಂದುವರಿಸಿದ್ದರು, ಸೆ.10ರ ಗುರುವಾರವು ಸಹ ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಸಮುದಾಯದ ಹಿರಿಯ ಮುಖಂಡರಾದ ವಕೀಲ ಅರುಣ್ ಕುಮಾರ್, ಜಗಜೀವನರಾಮ್ ಸಂಘಟನೆಯ ಅಧ್ಯಕ್ಷ ಸಮಾಜ ಸೇವಕ ಚಂದ್ರು ನೇತೃತ್ವದಲ್ಲಿ ಕೊಲೆಯಾಗಿ ನಾಲ್ಕು ದಿನ ಕಳೆದರೂ ಶವಸಂಸ್ಕಾರ ಕಾರ್ಯವನ್ನು ನಡೆಸದೆ ಆರೋಪಿಯನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಗ್ರಾಮದಲ್ಲಿ ಬೃಹತ್ ಪ್ರತಿಭಟನೆ ಮುಂದುವರಿಸಿದ್ದರು. ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಹುಲ್ಲಹಲಕ್ಷದ ಪೆÇಲೀಸ್ ಠಾಣೆಯ ಪೆÇಲೀಸರು ಎಫ್ಐಆರ್ ದಾಖಲಿಸಿ ಕೊಂಡು ಶೀಘ್ರವಾಗಿ ಆರೋಪಿಯನ್ನು ಬಂಧಿಸುವ ಭರವಸೆ ನೀಡಿದ್ದಾರೆ.
ಜನಾಂಗದವರಿಗೆ ಆಗಿರುವ ಅನ್ಯಾಯದ ಪರ ಚಂದ್ರು ನೇತೃತ್ವದಲ್ಲಿ ಮತ್ತು ಇದರ ಮುಖಂಡರ ಒಳಗೊಂಡಂತೆ ನಾಲ್ಕು ದಿನ ಪ್ರತಿಭಟನೆ ಮಾಡಿ ಗ್ರಾಮದಲ್ಲಿ ಪಾದಯಾತ್ರೆ ಮಾಡಿ ಸುಮಾರು ಐದು ಗಂಟೆಗಳ ಕಾಲ ಅಧಿಕಾರಿಗಳು ಪೆÇಲೀಸ್ ಇಲಾಖೆಗಳ ಜೊತೆ ಚರ್ಚೆ ಮಾಡಿ ನ್ಯಾಯ ಸಿಗುವವರೆಗೂ ಧಿಕ್ಕಾರ ಕೂಗುತ್ತಾ ಪ್ರತಿಭಟನೆ ಮಾಡಿದರು ಸಂಜೆ ಅಂತಿಮವಾಗಿ ಇವರ ಮಾತಿಗೆ ಸ್ಪಂದಿಸಿದ ಅಧಿಕಾರಿಗಳು ಮೃತಪಟ್ಟ ಮಹಿಳೆಯರಿಗೆ ಇಲಾಖೆಯಿಂದ ಅವರ ಕುಟುಂಬಕ್ಕೆ ಎಲ್ಲ ಸೌಕರ್ಯ ಅಂತಂತವಾಗಿ ಒದಗಿಸಲಾಗುತ್ತದೆ ಆತನ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದೇವೆ ಆದ್ದರಿಂದ ತಕ್ಷಣ ಪ್ರತಿಭಟನೆ ಕೈ ಬಿಟ್ಟು ಶ ವ ಸಂಸ್ಕಾರ ಮಾಡಲು ಸೂಚಿಸಿದರು ಇದಕ್ಕೆ ಒಪ್ಪಿದೆ ಎಲ್ಲ ಮುಖಂಡರು ಸಂಜೆ ಶವಸಮಸ್ಕಾರ ನಡೆಯಿತು
ಸಮಾಜ ಸೇವಕ ಜನಾಂಗದ ಯುವ ಮುಖಂಡ ಚಂದ್ರು ಮಾತನಾಡಿ ಒಬ್ಬ ನಮ್ಮ ಜನಾಂಗದ ಬಡ ಮಹಿಳೆಗೆ ಈ ರೀತಿ ಆಗಿರುವುದು ಖಂಡಿಸುತ್ತೇವೆ ಮುಂದೆ ಈ ರೀತಿ ಆಗದಂತೆ ಸೂಕ್ತ ಬಂದು ಬಸ್ ವ್ಯವಸ್ಥೆ ಮಾಡಬೇಕು ಇಂಥ ಸಂದರ್ಭ ಬಂದಾಗ ಪೆÇಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳೇಬೇಕು ಈ ರೀತಿ ನಾಲ್ಕು ದಿನ ಐದು ದಿನ ಪ್ರತಿಭಟನೆ ಮಾಡಲು ಅವಕಾಶ ನೀಡಬಾರದು ತಪ್ಪು ಮಾಡಿದರೆ ಕ್ರಮ ತೆಗೆದುಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಮಾತನಾಡಿ ಅವಕಾಶ ಇದ್ದರೆ ಅವರು ಕುಟುಂಬದಕ್ಕೆ ಯಾರಿಗಾದರೂ ಒಂದು ಕೆಲಸ ನೀಡಬೇಕು ಎಂದು ಮನವಿ ಮಾಡಿದರು
ಈ ಸಂಬಂದ ಸಮಾಜ ಮುಖಂಡ ಯಾಲಹಳ್ಳಿ ಸಿದ್ದು ಮಾತನಾಡುತ್ತಾ
ದಲಿತ ಮಹಿಳೆ ಹಾಗೂ ವೃದ್ಧೆ ಎಂಬುದನ್ನು ಕಾಣದೆ ಆರೋಪಿ ನವೀನ್ ರವರು ಮನೋಸೊ ಇಚ್ಛೆ ಥಳಿಸಿದ್ದಾರೆ. ಇದು ಅವರೇ ಮೃತ ಮಹದೇವಮ್ಮಗಳ ಮೇಲೆ ಮೂರನೇ ಬಾರಿ ನಡೆಸುತ್ತಿರುವ ಹಲ್ಲೆಯಾಗಿದೆ. ಮಾದೇವಮ್ಮಳ ಹೊಟ್ಟೆ ಭಾಗ ಹಣೆ ಹಾಗೂ ಎದೆಯ ಭಾಗಗಳಲ್ಲಿ ಗಂಭೀರ ಗಾಯಗಳಾಗಿದೆ. ಅವರು ಅಲ್ಲೇ ನಡೆಸುತ್ತಿರುವುದನ್ನು ಗ್ರಾಮ ದೇವರೆಲ್ಲರೂ ನೋಡಿದ್ದಾರೆ.ಇನ್ನು ದಲಿತ ಮಹಿಳೆಯ ಕೊಲೆ ನಡೆದಿದ್ದರೂ ಸಹ ಸ್ಥಳಕ್ಕೆ ತಹಸಿಲ್ದಾರ್ ಸ್ಮಿತಾರಾಮು, ಮತ್ತು ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಉಪನಿರ್ದೇಶಕ ಸಿದ್ದಲಿಂಗು ಮಾನವೀಯತೆಯ ಹಿತದೃಷ್ಟಿಯಿಂದಲೂ ಬೇಟೆ ನೀಡಿಲ್ಲ. ಎಂದರು.
ಪ್ರತಿಭಟನೆಯಲ್ಲಿ ಮಾದಿಗ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರಾದ ಚಂದ್ರು, ಮಧುರಾಜ್, ಶ್ರೀನಿವಾಸ್, ಮೋಹನ, ಸಿದ್ದಪ್ಪ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಿದ್ದರಾಜು, ಸೇರಿದಂತೆ ಕಡೆಜಟ್ಟಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.
































