
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.10: ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅವರು ಇಂದು ತಾಲೂಕಿನ ಪರಮದೇವನ (ಪಿಡಿ) ಹಳ್ಳಿ ಪೊಲೀಸ್ ಠಾಣಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರಿಗೆ ಡಿವೈಎಸ್ಪಿ ಮಾಲತೇಶ್ ಕೂನಬೇವು, ಸರ್ಕಲ್ ಇನ್ಸ್ಪೆಕ್ಟರ್ ಸುಭಾಷ್ ಚಂದ್ರ, ಪಿಎಸ್ ಐ ತಿಮ್ಮಾರೆಡ್ಡಿ ಸ್ವಾಗತಿಸಿ ಠಾಣೆಯಲ್ಲಿ ಕೈಗೊಂಡಿರುವ ತನಿಖೆಗಳು, ವಿಳಂಬ ವಾಗಿರುವ ಕೇಸುಗಳ ಬಗ್ಗೆ, ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಇಲಾಖೆಯಿಂದ ಕೈಗೊಂಡ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ




























