
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.25: ನಗರದ ಶಾಸಕ ನಾರಾ ಭರತ್ ರೆಡ್ಡಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ಇಲ್ಲಿನ ನೇತಾಜಿ ನಗರದ ಕೆಹೆಚ್ ಬಿ ಕಾಲೋನಿಯ ಇನ್ಫೆಂಟ್ರಿ ರಸ್ತೆಯಲ್ಲಿ ಕಾಂಗ್ರೆಸ್ ಮುಖಂಡರು ಸಸಿ ನೆಟ್ಟು ಸಿಹಿ ಹಂಚುವ ಮೂಲಕ ಆಚರಿಸಿದರು.
ಈ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 34ನೇ ವಾರ್ಡಿನ ಕಾಂಗ್ರೆಸ್ ಯುವ ಮುಖಂಡ ಪಿ..ಜಗನ್ನಾಥ (ಜಗನ್) ಮಾತನಾಡಿ, ನಗರದ ಶಾಸಕರು ಅನೇಕ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜಮಾನುರಾಗಿ ಯಾಗಿದ್ದಾರೆ. ಅವರು ನಗರದ ಅಭಿವೃದ್ಧಗೆ ಬದ್ದರಾಗಿದ್ದಾರೆಂದರು.
ಪಕ್ಷದ ಯುವ ಮುಖಂಡ ಎಂ.ಎಸ್.ಸಾಗರ್ ಮೆಟ್ರಿ ಮಾತನಾಡಿ, ಶಾಸಕ ಭರತ್ ರೆಡ್ಡಿ ಅವರು ತಮ್ಮ ಕಾರ್ಯವೈಖರಿ ಮೂಲಕ ಯುವ ಸಮೂಹದ ಮನ ಗೆದ್ದಿದ್ದಾರೆ. ನಗರದ ಅನೇಕ ಸಮಸ್ಯೆಗಳ ನಿವಾರಣೆಗೆ, ಪಕ್ಷದ ಸಂಘಟನೆಯಲ್ಲಿ ಅವರ ಪ್ರಯತ್ನ ಮುಂದುವರೆದಿದೆ. ಜನರ ಸಮಸ್ಯೆಗಳನ್ನು ಸಮಚಿತ್ತ ದಿಂದ ಆಲಿಸಿ ಪರಿಹಾರ ಸೂಚಿಸುವ ಅವರ ಶೈಲಿ ಎಲ್ಲರೂ ಗಮನಿಸುವಂತಹುದು ಎಂದರು.
ಮುಖಂಡರಾದ ನರಹರಿ ಪ್ರದೀಪ್ (ಬಾಬಿ), ಕುಡಿತಿನಿ ರಾಮಾಂಜನಿ. ಸಿದ್ಧಾರ್ಥ ಮೆಟ್ರಿ( ಸೋನು) ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.


























