Home ಜಿಲ್ಲೆ ಮೈಸೂರು ನರೇಗಾ ಕೂಲಿ ಕಾರ್ಮಿಕರಿಂದ ಬೃಹತ್ ಸರ್ಕಾರಿ ಶಾಲಾ ದಾಖಲಾತಿ ಆಂದೋಲನ ಜಾಗೃತಿ ಕಾರ್ಯಕ್ರಮ

ನರೇಗಾ ಕೂಲಿ ಕಾರ್ಮಿಕರಿಂದ ಬೃಹತ್ ಸರ್ಕಾರಿ ಶಾಲಾ ದಾಖಲಾತಿ ಆಂದೋಲನ ಜಾಗೃತಿ ಕಾರ್ಯಕ್ರಮ

ಸಂಜೆವಾಣಿ ವಾರ್ತೆ
ಮಳವಳ್ಳಿ:ಮೇ.26:-
ತಾಲೂಕು ಪಂಚಾಯಿತಿ ಕಾರ್ಯಾಲಯ ಮಳವಳ್ಳಿ ಹಾಗೂ ಬಂಡೂರು ಗ್ರಾಮ ಪಂಚಾಯಿತಿ ಕಾರ್ಯಾಲಯ ಸಹಯೋಗದಲ್ಲಿ ಸರ್ಕಾರಿ ಶಾಲೆ ಉಳಿಸಿ ಅಭಿಯಾನದೊಂದಿಗೆ ಬೃಹತ್ ಸರ್ಕಾರಿ ಶಾಲೆ ದಾಖಲಾತಿ ಆಂದೋಲನ ಕಾರ್ಯಕ್ರಮ ಜರುಗಿತು.


ಬಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಸಿಯಾಲಪುರ ಗ್ರಾಮದ ಗಂಗಾಧರ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಸುಮಾರು ಮುನ್ನೂರಕ್ಕೂ ಹೆಚ್ಚು ನರೇಗಾ ಕೂಲಿ ಕಾರ್ಮಿಕರು ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದು ಕಾಮಗಾರಿ ನಡೆಯುವ ಸ್ಥಳದಲ್ಲಿ ಜಾಗೃತಿ ಕಾರ್ಯಕ್ರಮ ಜರುಗಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಕಾರ್ಯ ನಿರ್ವಹಣ ಅಧಿಕಾರಿಗಳಾದ ಶ್ರೀನಿವಾಸ್ ರವರು ಜಿಲ್ಲೆಯಲ್ಲೇ ಮೊದಲ ಬಾರಿಗೆ ನರೇಗಾ ಕಾಮಗಾರಿ ನಡೆಯುವ ಸ್ಥಳದಲ್ಲಿ ಸರ್ಕಾರಿ ಶಾಲೆ ದಾಖಲಾತಿ ಜಾಗೃತಿ ಕಾರ್ಯಕ್ರಮ ನಡೆಯುತ್ತಿದ್ದು ಉತ್ತಮ ಕಾರ್ಯಕ್ರಮವಾಗಿದೆ ಎಂದರು ಇಲ್ಲಿ ಇರುವ ಸಾಕಷ್ಟು ಕೂಲಿ ಕಾರ್ಮಿಕರು ನಿಮ್ಮ ಮಕ್ಕಳನ್ನು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿದ್ದೀರಿ ಡೊನೇಷನ್ ಶುಲ್ಕಗಳನ್ನು ಳನ್ನು ಕೂಲಿ ಮಾಡಿ ಕಟ್ಟುತ್ತಿದ್ದೀರಿ ಈ ರೀತಿ ಆದರೆ ಜೀವನ ಸಾಗಿಸುವುದು ಕಷ್ಟ ಸಂಘಗಳ ಸಾಲ ಫೈನಾನ್ಸ್ ಗಳ ಕಾಟ ಇಷ್ಟೆಲ್ಲ ಸಮಸ್ಯೆಗಳು ಇದ್ದರೂ ಪ್ರೈವೇಟ್ ಶಾಲೆಗೆ ಸೇರಿಸಿದ್ದೀರಿ.


ಜೂನ್ 1 ನೇ ತಾರೀಕು ಶಾಲೆ ಪ್ರಾರಂಭೋತ್ಸವ ಆಗುತ್ತಿದ್ದು ನಿಮ್ಮ ಮಕ್ಕಳನ್ನು ಹತ್ತಿರದ ಸರ್ಕಾರಿ ಶಾಲೆಗೆ ಸೇರಿಸಿ ಯಾವುದೇ ಶುಲ್ಕ ಡೊನೇಶನ್ ಇರುವುದಿಲ್ಲ ಎಲ್ಲಾ ಉಚಿತ ಸರ್ಕಾರವು ಹಲವಾರು ಉಪಯುಕ್ತ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಇಂತಹ ಉತ್ತಮವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಸ್ನಾತಕೋತ್ತರ ಪದವೀಧರ ಚುಂಚಣ್ಣ ರವರಿಗೆ ಅಭಿನಂದನೆಗಳು ಅತಿಥಿ ಶಿಕ್ಷಕರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.


ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಉಮಾ ರವರು ಮಾತನಾಡಿ ನರೇಗಾ ಕಾಮಗಾರಿ ನಡೆಯುವ ಸ್ಥಳದಲ್ಲಿ 300 ಜನ ಕೂಲಿ ಕಾರ್ಮಿಕರು ಕೆಲಸ ಮಾಡುವ ಈ ಗಂಗಾಧರ ಕೆರೆ ಸ್ಥಳದಲ್ಲಿ ಕಾರ್ಯಕ್ರಮವನ್ನು ಆ ಯೋಜನೆ ಮಾಡಿರುವುದು ಸಂತೋಷವಾಗಿದ್ದು ಬೃಹತ್ ಸರ್ಕಾರಿ ಶಾಲೆ ದಾಖಲಾತಿ ಜಾಗೃತಿ ಕಾರ್ಯಕ್ರಮ ಜಿಲ್ಲೆಯಲ್ಲಿ ವಿಶಿಷ್ಟವಾಗಿದೆ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಆಯೋಜಕರಿಗೆ ಧನ್ಯವಾದಗಳು ಶಿಕ್ಷಣ ಇಲಾಖೆಗೆ ನಿಮ್ಮ ಸಹಕಾರ ಅಗತ್ಯವಾಗಿದೆ ಕೂಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ಬೋಧನೆ ಮಾಡುತ್ತಾರೆ ಉಚಿತ ಪಠ್ಯಪುಸ್ತಕ ಸಮವಸ್ತ್ರ ಮೊಟ್ಟೆ ಹಾಲು ಬಾಳೆಹಣ್ಣು ನೀಡುತ್ತಾರೆ ಕಂಪ್ಯೂಟರ್ ಶಿಕ್ಷಣ ಸ್ಮಾರ್ಟ್ ಕ್ಲಾಸ್ ಗಳನ್ನು ಸರ್ಕಾರಿ ಶಾಲೆ ಹೊಂದಿದೆ ಸರ್ಕಾರಿ ಶಾಲೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಕೂಲಿ ಕಾರ್ಮಿಕರಿಗೆ ಮಾಹಿತಿ ನೀಡಿದರು ಮಹಿಳಾ ಕೂಲಿ ಕಾರ್ಮಿಕರಿಗೆ ಬಾಗಿನ ನೀಡಿದರು ಅರಿಶಿಣ ಕುಂಕುಮ ಹಸಿರು ಬಳೆ ಹೂ ಎಲೆ ಅಡಿಕೆ ನೀಡಿ ಇಲಾಖೆ ವತಿಯಿಂದ ಸತ್ಕರಿಸಲಾಯಿತು.


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿಗಳಾದ ಶಾಂತರಾಜುರವರು ಅಲ್ಪಸಂಖ್ಯಾತ ಇಲಾಖೆಯ ಶಿವಕುಮಾರ್ ರವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚೇತನ್ ಕುಮಾರ್ ಹೋರಾಟಗಾರ್ತಿ ಮಹಾದೇವಮ್ಮ ಬಂಡೂರು ಅಂಬೇಡ್ಕರ್ ಸೈನ್ಯದ ಜಿಲ್ಲಾ ಅಧ್ಯಕ್ಷರಾದ ಸಿದ್ದರಾಜು ಕಾಯಕ ಬಂಧುಗಳು ನರೇಗಾ ಕೂಲಿ ಕಾರ್ಮಿಕರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಿಬ್ಬಂದಿ ವರ್ಗ ಅಧಿಕಾರಿಗಳು ಹಾಜರಿದ್ದರು.