Home ಜಿಲ್ಲೆ ದೇಶ ಭಕ್ತಿ ಗೀತಗಾಯನ ಸ್ಪರ್ಧೆ

ದೇಶ ಭಕ್ತಿ ಗೀತಗಾಯನ ಸ್ಪರ್ಧೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಸೆ,13- ಭಾರತ್ ಸೌಟ್ಸ್ ಮತ್ತು ಗೈಡ್ಸ್, ಕರ್ನಾಟಕ, ಸ್ಥಳೀಯ ಸಂಸ್ಥೆ ಬಳ್ಳಾರಿ ವತಿಯಿಂದ ತಾಲೂಕ ಮಟ್ಟದ ‘ದೇಶ ಭಕ್ತಿ ಗೀತಗಾಯನ ಸ್ಪರ್ಧೆ’ಯನ್ನು  ಜಿಲ್ಲಾ ಸ್ಕೌಟ್ಸ್ & ಗೈಡ್ಸ್ ಕಚೇರಿ ಬಳ್ಳಾರಿ ಇಲ್ಲಿ ಆಯೋಜಿಸಲಾಗಿತ್ತು.*

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಕುಪ್ಪಗಲ್ ವೀರೇಶ್, ಜಿಲ್ಲಾ ಆಯುಕ್ತರು (ಸ್ಕೌಟ್)ರವರು ವಹಿಸಿದ್ದರು

ಅತಿಥಿಗಳಾಗಿ ಶ್ರೀಮತಿ ಮಲ್ಲೇಶ್ವರಿ ಜುಜಾರೆ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರು(ಗೈಡ್) ಹಾಗೂ ಕಲ್ಯಾಣ ಕರ್ನಾಟಕ ಉಸ್ತುವಾರಿಗಳು ರವರು ಆಗಮಿಸಿ, ಪ್ರಾಸ್ತಾವಿಕ ನುಡಿಗಳಲ್ಲಿ ದೇಶಭಕ್ತಿ ಗೀತೆ ಗಾಯನ ಹಾಗೂ ಜನಪದ ಗೀತ ಗಾಯನ ಸ್ಪರ್ಧೆಯನ್ನು 2016 ರಿಂದ ಪ್ರಾರಂಭಿಸಲಾಯಿತು, ಪ್ರತಿ ವರ್ಷ ತಾಲೂಕು ಹಂತದಲ್ಲಿ ಜಿಲ್ಲಾ ಹಂತದಲ್ಲಿ ವಿಭಾಗ ಹಂತದಲ್ಲಿ ರಾಜ್ಯ ಮಟ್ಟದಲ್ಲಿ ಆಯೋಜಿಸುತ್ತ ಬರುತ್ತಿದೆ ಇದರಿಂದ ಮಕ್ಕಳಿಗೆ ಬಹಳಷ್ಟು ಪ್ರೇರಣೆಯನ್ನು ಸಿಗುತ್ತದೆ ಜೊತೆಗೆ ವೃತ್ತಿ ಜೀವನಕ್ಕೂ ಸಹ ಇದು ಒಂದು ಮಾರ್ಗ ಆಗಿರುತ್ತದೆ ಎಂದು ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿರುತ್ತಾರೆ

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ . ಶಿವಾಜಿ ರಾವ್ ರವರು, ಜಿಲ್ಲಾ ಕಾರ್ಯದರ್ಶಿಗಳಾದ  S. ಜಯಸಿಂಹ, ಜಿಲ್ಲಾ ಸ್ಥಾನಿಕ ಆಯುಕ್ತರಾದ  ಅನಂತಕುಮಾರ ಶೆಟ್ಟಿ,  ಹಾಗೂ . ನಾಗರಾಜ್, ಸಹಾಯಕ ಜಿಲ್ಲಾ ಆಯುಕ್ತರು ರವರು ಆಗಮಿಸಿದ್ದರು

ಈ ಕಾರ್ಯಕ್ರಮದ ನಿರ್ಣಯಕರಾಗಿ ಜಿಲ್ಲಾ ತರಬೇತಿ ಆಯುಕ್ತರಾದ  ಎಂ. ನಾಗರಾಜ್ ರವರು  ಹಾಗೂ  ಟಿ. ತಿಮ್ಮಪ್ಪ, ಹಿರಿಯ ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜ್ (ಮಾ.ಪೂ) ಬಳ್ಳಾರಿ  ರವರು ನಿರ್ವಹಿಸಿದರು

ಈ ಕಾರ್ಯಕ್ರಮವನ್ನು  ದೊಡ್ಡ ಬಸಪ್ಪ, ತಾಲೂಕಿನ ಕಾರ್ಯದರ್ಶಿಗಳು ಆಯೋಜಿಸಿದ್ದರು, ಹಾಗೂ ನಿರೂಪಣೆಯನ್ನು ನಿರ್ವಹಿಸಿದರು ಈ ಕಾರ್ಯಕ್ರಮದ ಸಂಘಟನೆಯನ್ನು ಶ್ರೀ. ಮಹಮ್ಮದ್ ಶರ್ಫುದಿನ್, ಎಸ್.ಜಿ.ಎ ರವರು ಸಂಘಟಿಸಿ, ಕಾರ್ಯನಿರ್ವಹಿಸಿದರು.