Home ಜಿಲ್ಲೆ ಮಂಗಳೂರು ದೇಶದ ಆರ್ಥಿಕತೆ ಬಗ್ಗೆ ಶ್ವೇತಪತ್ರ ಹೊರಡಿಸಲಿ- ಶಾಸಕ ಅಶೋಕ್ ರೈ

ದೇಶದ ಆರ್ಥಿಕತೆ ಬಗ್ಗೆ ಶ್ವೇತಪತ್ರ ಹೊರಡಿಸಲಿ- ಶಾಸಕ ಅಶೋಕ್ ರೈ

oplus_2

ದೇಶದ ಜ್ವಲಂತ ಸಮಸ್ಯೆ ವಿರುದ್ಧ ತಟ್ಟೆ ಬಡಿದು ಪ್ರತಿಭಟನೆ
ಪುತ್ತೂರು; ದೇಶದ ಸಂಪತ್ತು ಮೂರು ಮಂದಿ ಉದ್ಯಮಿಗಳಲ್ಲಿ ಕೇಂದ್ರೀಕೃತವಾಗಿದ್ದು, ಭವಿಷ್ಯದಲ್ಲಿ ಇದು ದೊಡ್ಡ ಅಪಾಯಕಾರಿಯಾಗಿ ಪರಿಣಮಿಸಲಿದೆ. ಜನಸಾಮಾನ್ಯರ ಬದುಕು ದುಸ್ತರವಾಗುತ್ತಿದೆ. ಹಾಗಾಗಿ ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಶೀಘ್ರವೇ ‘ಶ್ವೇತಪತ್ರ ಹೊರಡಿಸಬೇಕು. ಇಲ್ಲವಾದರೆ ದೇಶದಾದ್ಯಂತ ಪ್ರತಿಭಟನೆಯ ಕಾವು ಏರಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಎಚ್ಚರಿಸಿದರು.
ಅವರು ಸೋಮವಾರ ಪುತ್ತೂರು,ವಿಟ್ಲ ಹಾಗೂ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೇಸ್ ಸಮಿತಿಯಿಂದ ಗಾಂಧಿಕಟ್ಟೆ ಬಳಿಯಲ್ಲಿ ಆಯೋಜಿಸಲಾಗಿದ್ದ ಕೇಂದ್ರ ಸರ್ಕಾರದ ವೈಫಲ್ಯದ ವಿರುದ್ಧ ಪ್ರತಿಭಟನೆಯಲ್ಲಿ ಮಾತನಾಡಿದರು.
ಕಾಂಗ್ರೇಸ್ ಪಕ್ಷ ಪ್ರತಿಷ್ಠೆಗಾಗಿ ಈ ಪ್ರತಿಭಟನೆ ನಡೆಸುತ್ತಿಲ್ಲ. ಭಾರತದ ಜನರ ಮನಸ್ಸಿನ ವೇದನೆಯ ಪ್ರತೀಕವಾಗಿ ನಡೆಸುತ್ತಿದ್ದೇವೆ. ಮೋದಿ ಅವರನ್ನು ಒಪ್ಪುವ ಜನರಿಗೂ ಕೇಂದ್ರ ಸರ್ಕಾರದ ವೈಫಲ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡುತ್ತಿದ್ದೇವೆ. ದೇಶದ ಜ್ವಲಂತ ಸಮಸ್ಯೆ ಕೇವಲ ಕಾಂಗ್ರೇಸಿಗರ ನೋವಲ್ಲ. ಬಿಜೆಪಿಗರು ಸೇರಿದಂತೆ ಜನಸಾಮಾನ್ಯರ ನೋವು ಇದಾಗಿದೆ. ಇದರ ನಿವಾರಣೆಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದರು.
ನೀಟ್ ಹಗರಣದಿಂದ ಸಾಕಷ್ಟು ಭ್ರಷ್ಟಾಚಾರಗಳ ಶಂಕೆ ಎದ್ದು ಕಾಣುತ್ತಿದೆ. ಮಕ್ಕಳ ಬದುಕಿನಲ್ಲಿ ಇವರು ಆಡಿದ ಆಟದಿಂದ ಮಕ್ಕಳ ಭವಿಷ್ಯಕ್ಕೆ ಮಾರಕ ಹೊಡೆತಬಿದ್ದಿದೆ. ಬಿಜೆಪಿ ವಿರೋಧಿಗಳಿಗೆ ಇಡಿ,ಸಿಬಿಐ ಮೂಲಕ ಧಾಳಿ ನಡೆಸುತ್ತಿರುವ ಮೋದಿ ಸರ್ಕಾರ ಈ ಹಗರಣದ ಬಗ್ಗೆ ಸಿಬಿಐ ಇಡಿಗೆ ತನಿಖೆ ನಡೆಸಲು ಆದೇಶ ನೀಡಲಿ ಎಂದು ಸವಾಲು ಹಾಕಿದರು. ಕೊಲ್ಲಿ ದೇಶದಲ್ಲಿ ಯುದ್ಧ ನಡೆದಾಗ ನಮ್ಮ ಪರಿಸ್ಥಿತಿ ಈ ರೀತಿಗೆ ತಲುಪಿದರೆ ಮುಂದೆ ಎಲ್ಲಿಯಾದರೂ ನಮ್ಮ ವಿರೋಧಿ ದೇಶಗಳ ನಮ್ಮ ದೇಶದ ಮೇಲೆ ಯುದ್ಧ ಸಾರಿದರೆ ದೇಶದ ಪರಿಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿದ ಅವರು ದೇಶದ ಖಜಾನೆಯ ಸ್ಥಿತಿಯನ್ನು ಭಾರತದ ಪ್ರಜೆಗಳಿಗೆ ತಿಳಿಸಬೇಕಾದ ಜವಾಬ್ದಾರಿ ಪ್ರಧಾನಿಯವರ ಮೇಲಿದೆ ಎಂದರು.
ಬಟ್ಟಲು ಬಡಿದು ಪ್ರತಿಭಟನೆ
ಕೊರೊನಾ ಸಂದರ್ಭದಲ್ಲಿ ಪ್ರಧಾನಿ ಮೋದಿ ದೇಶವಾಶಿಗಳಿಗೆ ತಟ್ಟೆ ಬಡಿದು ಕೊರೊನಾ ಓಡಿಸಲು ಆದೇಶಿಸಿದ್ದರು. ಇದೀಗ ನಾವು ದೇಶದ ಸಂಕಷ್ಟ ಪರಿಸ್ಥಿತಿ ವಿರುದ್ಧ ಬಟ್ಟಲು ಬಡಿದು ಪ್ರತಿಭಟನೆ ನಡೆಸುತ್ತಿದ್ದೇವೆ. ಇದನ್ನು ಪ್ರಧಾನಿಯೇ ನಮಗೆ ಕಲಿಸಿದ್ದು ಎಂದು ಅವರು ಹೇಳಿದರು.
ದೇಶದ ದೊಡ್ಡ ಹಾಸ್ಯನಟ
ವಿಟ್ಲ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಮಾತನಾಡಿ, ದೇಶದೊಳಗಡೆ ಜ್ವಲಂತ ಸಮಸ್ಯೆ ಕಾಡುತ್ತಿದ್ದರೂ ಪ್ರಧಾನಿ ಮೋದಿ ವಿದೇಶದಲ್ಲಿ ಸುತ್ತಾಡುತ್ತಿದ್ದಾರೆ. ಜನರಿಗೆ ಬಿಟ್ಟಿ ಸಲಹೆ ನೀಡುವ ಪ್ರಧಾನಿ ಈ ದೇಶಕ್ಕೆ ಬೇಕಾಗಿಲ್ಲ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಈಗಲೂ ನಾವು ಪ್ರತಿಭಟಿಸದಿದ್ದಲ್ಲಿ ಬದುಕು ಹಕ್ಕನ್ನು ಕಳೆದುಕೊಂಡು ಬೇಡುವ ಪರಿಸ್ಥಿತಿ ಬರಬಹುದು ಎಂದರು. ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್ ಅವರು ಮಾತನಾಡಿ, ಬಂಗಾರ ಖರೀದಿ ಮಾಡಬೇಡಿ ಎನ್ನುವ ಮೋದಿಗೆ ಹೆಂಡತಿ ಮಕ್ಕಳು ಇದ್ದರೆ ಬಂಗಾರದ ಅಗತ್ಯತೆಯ ಅರಿವು ಇರುತ್ತಿತ್ತು. ಸದಾ ಸುಳ್ಳಿನಿಂದಲೇ ಬದುಕುತ್ತಿರುವ ಮೋದಿ ದೇಶ ದೊಡ್ಡ ಹಾಸ್ಯನಟ. ಇಂತಹ ಪ್ರಧಾನಿ ಇರುವುದು ನಮ್ಮ ದುರಾದೃಷ್ಟ ಎಂದರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಜಿಲ್ಲಾ ಗ್ರಾಮಾಂತರ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಮಹಮ್ಮದ್ ಆಲಿ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ, ಪುತ್ತೂರು ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅವರು ಮಾತನಾಡಿದರು. ಉಪ್ಪಿನಂಗಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಯು.ಟಿ ತೌಸೀಫ್, ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪಕ್ಷದ ಮುಖಂಡರಾದ ಫಾರೂಕ್ ಪೆರ್ನೆ, ಮುರಳೀಧರ್ ರೈ ಮಠಂತಬೆಟ್ಟು, ಕುಂಬ್ರ ದುರ್ಗಾಪ್ರಸಾದ್ ರೈ, ಪ್ರವೀಣ್ ಚಂದ್ರ ಆಳ್ವ, ಪ್ರಸಾದ್ ಕೌಶಲದ ಶೆಟ್ಟಿ, ಅಬ್ದುಲ್ ರಹಿಮಾನ್ ಆಝಾದ್, ರಾಮಣ್ಣ ಪಿಲಿಂಜ, ಅಮಳ ರಾಮಚಂದ್ರ, ವಿಕ್ರಂ ಶೆಟ್ಟಿ ಅಂತರ ಮತ್ತಿತರರು ವೇದಿಕೆಯಲ್ಲಿದ್ದರು. ಪುತ್ತೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ಪಿ.ಆಳ್ವ ಕಾರ್ಯಕ್ರಮ ನಿರೂಪಿಸಿದರು.

ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಪತ್ರಿಕಾಗೋಷ್ಟಿ ನಡೆಸಿ ಕ್ಯಾನ್ ಹಾಗೂ ಬಾಟಲಿಗಳಲ್ಲಿ ಪೆಟ್ರೋಲ್ ಡೀಸೆಲ್ ನೀಡುತ್ತಿಲ್ಲ. ಅದಕ್ಕೆ ರಾಜ್ಯ ಸರ್ಕಾರ ಕಾರಣ ಎಂಬ ಹೇಳಿಕೆ ನೀಡಿದ್ದಾರೆ. ಆದರೆ ಇದು ರಾಜ್ಯ ಸರ್ಕಾರದ ಸೂಚನೆಯಲ್ಲ ಕೇಂದ್ರ ಸರ್ಕಾರ ನೀಡಿದ ಸುತ್ತೋಲೆ. ಆದರೆ ಮಾಜಿ ಶಾಸಕರ ಈ ಮುಠ್ಠಾಳತನಕ್ಕೆ ಏನು ಹೇಳಬೇಕು ಎಂಬುವುದು ಅರ್ಥವಾಗುತ್ತಿಲ್ಲ. ಬಾಟಲಿಯಲ್ಲಿ ಬೇಕಾದರೆ ಅವರು ಬಾರಿನಿಂದ ತೆಗೆದಕೊಂಡು ಹೋಗಲಿ. ಅವರಿಗೆಷ್ಟು ಪೆಟ್ರೋಲ್ ಡೀಸೆಲ್ ಬೇಕೋ ಅದನ್ನು ನಾವು ಕೊಡುತ್ತೇವೆ. ನಮ್ಮಲ್ಲಿಗೆ ಬರಲಿ. – ಕಾವು ಹೇಮನಾಥ ಶೆಟ್ಟಿ