
ಸಂಜೆವಾಣಿ ವಾರ್ತೆ
ಬಳ್ಳಾರಿ, ಆ.10: ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ, ಕ್ರಾಂತಿಜ್ಯೋತಿ ( ಕ್ವೀಟ್ ಇಂಡಿಯಾ ಮೂಮೆಂಟ್) ದಿನವನ್ನು ಕರ್ನಾಟಕ ಸರ್ಕಾರದ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾರದ ಸನ್ಮಾನ್ಯ ಶ್ರೀ ಈಶ್ವರ್ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಸಚಿವರು ಮಾತನಾಡಿ, 1942ರ ಆಗಸ್ಟ್ 09 ರಂದು ಭಾರತದಲ್ಲೇ ಅಲ್ಲ, ಜಗತ್ತಿನ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲೂ ಚೀರಸ್ತಾಯಿಯಾಗಿ ಅಚ್ಚೋತ್ತಿದ ಒಂದು ಮಹತ್ತರ ದಿನ, ಅಂದರೆ ಕ್ವೀಟ್ ಇಂಡಿಯಾ ಮೂಮೆಂಟ್.
ಮಹಾತ್ಮ ಗಾಂಧೀಜಿ ” ಮಾಡಿ ಇಲ್ಲ ಮಾಡಿ” ಎಂಬ ಘೋಷಣೆಯನ್ನು ನೀಡಿದಾಗ, ಅದು ಕೇವಲ ಒಂದು ಮಾತಲ್ಲ, ಅದು ದೇಶದ ಪ್ರತಿಯೊಬ್ಬರ ಹೃದಯದಲ್ಲಿ ಸ್ವಾತಂತ್ರ್ಯದ ಅಗ್ನಿಯನ್ನು ಹಚ್ಚಿದ ಪ್ರೇರಣೆಯ ಜ್ಯೋತಿ. ಆ ಘೋಷಣೆ ಬ್ರಿಟಿಷ್ ಆಡಳಿತದ ವಿರುದ್ಧ ಅಂತಿಮ ಹೋರಾಟ “ಬ್ರಿಟಿಷರೇ ಭಾರತ ಬಿಟ್ಟು ತೊಲಗಿ” ಎಂಬ ಚಳುವಳಿ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ಮಹನೀಯರನ್ನು ಸ್ಮರಿಸೋಣ ಎಂದು ಮಾತನಾಡಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸನ್ಮಾನ್ಯ ಅಲ್ಲಂ ಪ್ರಶಾಂತ್, ಬುಡಾ ಅಧ್ಯಕ್ಷರಾದ ಆಂಜಿನೆಯುಲು, ಲಿಡ್ಕರ್ ಅಧ್ಯಕ್ಷರಾದ ಮುಂಡ್ರಿಗಿ ನಾಗರಾಜ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುಮಯೂನ್ ಖಾನ್, ಮಹಾಪೌರರಾದ ಪಿ. ಗಾದೆಪ್ಪ, ಮಜಿ ಡಿಸಿಸಿ ಅಧ್ಯಕ್ಷರಾದ ಜೆ.ಎಸ್.ಮಹಮ್ಮದ್ ರಫೀಕ್, ಡಿಸಿಸಿ ಕಾರ್ಯಾಧ್ಯಕ್ಷರಾದ ಬೋಯಪಾಟಿ ವಿಷ್ಣು ವರ್ಧನ್, ಡಿಸಿಸಿ ಉಪಾಧ್ಯಕ್ಷರಾದ ಕೆ.ಶ್ರೀನಿವಾಸುಲು,ಡಿಸಿಸಿ ಪ್ರಧಾನ ಕಾರ್ಯದರ್ಶಿ ಆರುಣ್ ಕುಮಾರ್, ಕೌಲ್ ಬಜಾರ್ ಬ್ಲಾಕ್ ಅಧ್ಯಕ್ಷರಾದ ಅಲ್ಲಾ ಭಕಾಶ್, ಕೆಪಿಸಿಸಿ ಸದಸ್ಯರಾದ ಶ್ರೀಮತಿ ಕಮಲ ಮರಿಸ್ವಾಮಿ, ಮುಂಚೂಣಿ ಘಟಕಗಳ ಅಧ್ಯಕ್ಷರುಗಳಾದ ಎಂ.ಎಸ್.ಮಂಜುಳಾ, ಎರಕುಲ ಸ್ವಾಮಿ, ಕನೇಕಲ್ ಮೆಹಬೂಬ್ ಸಾಬ್, ಅಲಿವೇಲು ಸುರೇಶ್, ಶೇಕ್ ಅಫಾಕ್ ಹುಸ್ಸೇನ್, ಮಂಜುನಾಥ್, ಡಿಸಿಸಿ ಕಾರ್ಯದರ್ಶಿ ಶ್ರೀಮತಿ ಶೋಭಾ ಕಾಳಿಂಗ, ಪಾಲಿಕೆ ಸದಸ್ಯರಾದ ಪಿ.ವಿವೇಕ್, ಕುಬೇರ, ಎಂ. ನಂದೀಶ್, ಜಬ್ಬಾರ್, ರಾಮಾಂಜಿನೆಯುಲು, ನಾಗಲಕೇರಿ ಗೋವಿದ, ರಾಜಶೇಖರ್, ಉಮಾದೇವಿ ಶಿವರಾಜ್, ಪಕ್ಷದ ಮುಖಂಡರುಗಳಾದ ಕಳಕಂಭ ಪಂಪಾಪತಿ, ಯಾತಿಂದ್ರ ಗೌಡ, ಶ್ರೀಮತಿ ಪದ್ಮ, ವೀರೇಂದ್ರ ಕುಮಾರ್, ಈರನಗೌಡ, ವಿ.ಕೆ.ಬಸಪ್ಪ, ವೆಂಕಟಲಕ್ಷ್ಮಿ ನಾರಾಯಣ,ಸಂಗಣಕಲ್ ವಿಜಯ್, ಕಾರ್ಯಕರ್ತರಾದ ಮಲ್ಲೇಶ್ವರಿ, ಪರ್ವಿನ್ ಭಾನು, ಗೀತಾ, ಮಮತಾ, ಕವಿತಾ, ಉಮೇಶ್ ಗೌಡ, ಕೌಶಿಕ್ ಮತ್ತು ಇತರರು ಉಪಸ್ಥಿತರಿದ್ದರು.




























