
ಮಂಗಳೂರು : ಕ್ರೀಡಾಕ್ಷೇತ್ರದಲ್ಲಿ ಹನ್ನೆರಡು ವರ್ಷಗಳಿಂದೀಚೆ ಮುರಿಯಲಸಾಧ್ಯವಾದದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿ ಚಿನ್ನದ ಪದಕವನ್ನು ಕೊರಳಲಿ ಧರಿಸಿ ಬೀಗಿದವಿದ್ಯಾರ್ಥಿಅದ್ವಿತ್ ವಿ ಯಾದವ್.
ಅವರು ಬೆಂಗಳೂರಿನಲ್ಲಿ ನಡೆದಕರ್ನಾಟಕರಾಜ್ಯಜೂನಿಯರ್ಅತ್ಲೆಟಿಕ್ ಚಾಂಪಿಯನ್ಶಿಪ್ಸ್ ೨೦೨೬ ರಕ್ರೀಡಾ ಸ್ಪರ್ಧೆಯಲ್ಲಿ ೧೧೦ ಮೀಟರ್ ಹರ್ಡಲ್ಸ್ ಮತ್ತು ಹೆಪ್ಟಾಥ್ಲಾನ್ನಲ್ಲಿಚಿನ್ನದ ಪದಕವನ್ನು ಪಡೆದು ನ್ಯಾಶನಲ್ಸ್ಗೆಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಹರಿಕಿಶನ್ ಡಿ ಸುವರ್ಣಅವರು ಹೆಪ್ಟಾಥ್ಲಾನ್ನಲ್ಲಿಕಂಚಿನ ಪದಕವನ್ನು ಗಳಿಸಿದರು.
ಇವರೀರ್ವರ ಸಾಧನೆಯಿಂದಕಾಲೇಜಿಗೆ ಹೆಮ್ಮೆ ಹಾಗೂ ಕೀರ್ತಿತಂದಿದೆ. ಮುಂದೆಯೂಕೂಡಉತ್ತಮ ಸಾಧನೆ ಮಾಡಿದೇಶಕ್ಕೆಕೀರ್ತಿತರಲಿ ಎಂದು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದಡಾ| ಎಂ.ಬಿ. ಪುರಾಣಿಕರು ಅಭಿನಂದಿಸಿ ಶ್ಲಾಘಿಸಿದ್ದಾರೆ.
ಆಡಳಿತಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕವೃಂದದವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.






























