
(ಸಂಜೆವಾಣಿ ವಾರ್ತೆ)
ಬಳ್ಳಾರಿ. ಅ. 25 : ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಆದೇಶ ಹೊರಡಿಸಿದ್ದರೂ, ಅದನ್ನು ಸಂವಿಧಾನದ 9ನೇ ಶೆಡ್ಯೂಲ್ಗೆ ಸೇರಿಸುವಂತೆ ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ ಹಾಗೂ ಮಾನವ ಬಂಧುತ್ವ ವೇದಿಕೆ ಸಂಯುಕ್ತವಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಎರಡು ದಿನಗಳ ಧರಣಿ ಸತ್ಯಾಗ್ರಹ ಆರಂಭಗೊಂಡಿದೆ.
ಇದರಲ್ಲಿ ಪಾಲ್ಗೊಂಡಿದ್ದ ವಾಲ್ಮೀಕಿ ಸಮುದಾಯದ ಮುಖಂಡ ವಿ.ಎಸ್. ಶಿವಶಂಕರ್, ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಚುನಾವಣೆ ದೃಷ್ಟಿಯಿಂದ ಎಸ್ಸಿ ಮತ್ತು ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿ ಆದೇಶ ಹೊರಡಿಸಿತೇ ವಿನಃ, ಅದಕ್ಕೆ ಸೂಕ್ತ ಸಂವಿಧಾನಾತ್ಮಕ ರಕ್ಷಣೆ ನೀಡಲಿಲ್ಲ. ಸಂವಿಧಾನದ ಶೆಡ್ಯೂಲ್ 9ಕ್ಕೆ ಸೇರಿಸದೆ ದಲಿತ ಸಮುದಾಯಕ್ಕೆ ಅನ್ಯಾಯವೆಸಗಿದೆ ಎಂದು ಆರೋಪಿಸಿದರು,
ಕೂಡಲೇ ಕೇಂದ್ರ ಸರ್ಕಾರವು ಈ ಹೆಚ್ಚಳವನ್ನು 9ನೇ ಶೆಡ್ಯೂಲ್ಗೆ ಸೇರಿಸುವಂತೆ ಕ್ರಮ ಕೈಗೊಳ್ಳಲು ಹಾಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಕಾನೂನಾತ್ಮಕ ಹಾಗೂ ರಾಜಕೀಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಧರಣಿ ಸ್ಥಳದಲ್ಲಿ ಮಹರ್ಷಿ ವಾಲ್ಮೀಕಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.
ಪ್ರತಿಭಟನೆಯಲ್ಲಿ ಬಾದನಹಟ್ಟಿ ಶಿವಶಂಕರ್, ಮಾನಯ್ಯ ಕಪ್ಪಗಲ್ ರಾಮಣ್ಣ ಹುಸೇನಪ್ಪ ಗಂಗಾಧರ ಚೇಳುಗುರ್ಕಿ ಕುಬೇರ್ ಬೈಲೂರು ನಿಂಗಪ್ಪ ಪಾಲಾಕ್ಷಿ ಶ್ರೀಶೈಲ ಅರುಣ್ ಕುಮಾರ್ ಬಿ ಹನುಮಂತ ಸಿರವಾರ ಗಾದಿಲಿಂಗ ವಣೆ ನೂರು ಶ್ರೀನಿವಾಸ ರಂಗಸ್ವಾಮಿ ಅಮರಾಪುರ ಗಾದಿಲಿಂಗ ದುರ್ಗಮ್ಮ ಮಾರುತಿ ಸಂಚಾಲಕರು ಡಿಎಸ್ಎಸ್, ಅಲ್ಲಿಪುರ ಶಿವರಾಜು, ಸೋಮು ಮಾನವ ಬಂಧುತ್ವ ವೇದಿಕೆಯ ಸಂಗನಕಲ್ಲು ವಿಜಯಕುಮಾರ್, ಬಾದಾಮಿ ಶಿವಲಿಂಗ ನಾಯಕ, ಮೀನಳ್ಳಿ ವೆಂಕಟೇಶ್, ಸಂಗನಕಲ್ಲು ಗಂಗಾಧರ, ದುರ್ಗಪ್ಪ ತಳವಾರ್ ಹುಸೇನಪ್ಪ ದೇವದಾಸಿ ವಿಮೋಚನಾ ಸಂಘದ ದುರ್ಗಮ್ಮ, ಕರ್ಚೇಡ ತಿಪ್ಪಯ್ಯ ರಾಮಣ್ಣ ಮೊದಲಾದವರು ಇದ್ದರು.


























