Home ಜಿಲ್ಲೆ ಹೊಸಪೇಟೆ: ಎಂ.ಪಿ.ಪ್ರಕಾಶ್ ನಗರದಲ್ಲಿ ನಡು ರಸ್ತೆಯಲ್ಲಿಯೇ ಚಾಕುವಿನಿಂದ ಚುಚ್ಚಿ ವ್ಯಕ್ತಿಯ ಭೀಕರ ಕೊಲೆ

ಹೊಸಪೇಟೆ: ಎಂ.ಪಿ.ಪ್ರಕಾಶ್ ನಗರದಲ್ಲಿ ನಡು ರಸ್ತೆಯಲ್ಲಿಯೇ ಚಾಕುವಿನಿಂದ ಚುಚ್ಚಿ ವ್ಯಕ್ತಿಯ ಭೀಕರ ಕೊಲೆ

ಸಂಜೆವಾಣಿ ವಾರ್ತೆ

ಹೊಸಪೇಟೆ.ಜೂ.14 ನಡು ರಸ್ತೆಯಲ್ಲಿಯೇ ವ್ಯಕ್ತಿಯೊರ್ವನನ್ನು ಚಾಕುವಿನಿಂದ ಚುಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ಶನಿವಾರ ರಾತ್ರಿ ಜರುಗಿದೆ.

ನಗರದ ಎಂ.ಪಿ.ಪ್ರಕಾಶ್ ನಗರದಲ್ಲಿ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಜರುಗಿದ ಘಟನೆಯಲ್ಲಿ ಸ್ಥಳೀಯ ನಿವಾಸಿ ಯೂನೂÀಸ್(28) ಎಂಬ ವ್ಯಕ್ತಿಯನ್ನು ಎಂ.ಪಿ.ಪ್ರಕಾಶ್ ನಗರದ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಹೋಗಿ ಕಣ್ಣಿಗೆ ಕಾರದಪುಡಿ ಎರಚಿ, ಹೊಟ್ಟೆ, ಕತ್ತು ಭಾಗಕ್ಕೆ ಚಾಕುವಿನಿಂದ ಇರಿದು ನಡು ರಸ್ತೆಯಲ್ಲಿಯೇ ಭೀಕರವಾಗಿ ಕೊಲೆ ಮಾಡಲಾಗಿದೆ.

ರಸ್ತೆಯಲ್ಲಿ ಬಿದ್ದಿದ್ದ ದೇಹ: ಎಂ.ಪಿ.ಪ್ರಕಾಶ್ ನಗರದ ನಿವಾಸಿ ಯೂನೂಸ್ ನನ್ನು ಕೊಲೆ ಮಾಡಿದ ನಂತರ ಕೊಲೆಗಾರರು ಅಲ್ಲಿಂದ ಪರಾರಿ ಆಗಿದ್ದರು. ಮೃತ ದೇಹ ಪೊಲೀಸರು ಬರುವವರೆಗೆ ರಸ್ತೆ ಮಧ್ಯದಲ್ಲಿಯೇ ಬಿದ್ದಿತ್ತು. ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಪೊಲೀಸರು ಮೃತ ದೇಹವನ್ನು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು.

ಪೊಲೀಸರಿಗೆ ಶರಣು: ವ್ಯಕ್ಯಿಯನ್ನು ಕೊಲೆ ಬರ್ಭರವಾಗಿ ಕೊಲೆ ಮಾಡಿದ ಇಬ್ಬರು ಆರೋಪಿಗಳಾದ ಖಾಜಾ ಹಾಗೂ ಇರ್ಫಾನ್ ಎಂಬುವವರು ತಾವೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡು ಚಾಕು ಸಮೇತ ಪೊಲೀಸರಿಗೆ ಶರಣಾಗಿದ್ದಾರೆ.

ಪ್ರೀತಿಗೆ ಅಡ್ಡಿ ಕೊಲೆಗೆ ಕಾರಣ: ಪ್ರೀತಿ ವಿಷಯಕ್ಕೆ ಅಡ್ಡಿಪಡಿಸಿದ ಎಂಬ ಕಾರಣಕ್ಕೆ ವ್ಯಕ್ತಿಯ ಬರ್ಭರ ಕೊಲೆ ಜರುಗಿದೆ. ಚಿತ್ತವಾಡ್ಗಿಯ ನಿವಾಸಿ ಖಾಜಾ ಎಂಬುವಾತ ಯುವತಿಯೊಬ್ಬಳನ್ನು ಪ್ರೀತಿಸಿದ್ದು. ಅದಕ್ಕೆ ಯೂನೂಸ್ ಅಡ್ಡಿಪಡಿಸಿದ ಎಂಬ ಕಾರಣಕ್ಕೆ, ಆರೋಪಿಗಳಾದ ಖಾಜಾ ಹಾಗೂ ಇರ್ಫಾನ್ ಎಂಬಿಬ್ಬರು ಸೇರಿ ಬೀಕರವಾಗಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಮೃತ ವ್ಯಕ್ತಿಗೆ ಮದುವೆಯಾಗಿ ಒಂದು ಮಗು ಇದೆ ಎಂದು ತಿಳಿದು ಬಂದಿದೆ. ಯಾರ ತಂಟೆಗೂ ಹೋಗದೆ ತಾನಾಯಿತು ತನ್ನ ಕೆಲಸವಾಯಿತು ಎನ್ನುವ ರೀತಿಯಲ್ಲಿ ಇದ್ದ ಎಂದು ಮೃತ ವ್ಯಕ್ತಿಯ ಕುಟುಂಬಸ್ಥರು ತಿಳಿಸಿದ್ದಾರೆ.

ಸ್ಥಳಕ್ಕೆ ಅಡಿಷನಲ್ ಎಸ್ಪಿ ಜಿ.ಮಂಜುನಾಥ, ಹೊಸಪೇಟೆ ಡಿವೈಎಸ್ಪಿ ಪಿ.ಮುರಳೀಧರ್, ಗ್ರಾಮೀಣ ಠಾಣೆ ಪಿಐ ಗುರುರಾಜ ಕಟ್ಟಿಮನಿ ಭೇಟಿ ನೀಡಿದ್ದರು.

ಈ ಕುರಿತು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಆರೋಪಿಗಳನ್ನು ವಶಕ್ಕೆ ಪಡೆದಿರುವ ಗ್ರಾಮೀಣ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕೋಟ್

ಕ್ಷುಲ್ಲಕ ಕಾರಣಕ್ಕೆ ಎಂ.ಪಿ.ಪ್ರಕಾಶ್ ನಗರದಲ್ಲಿ ಯೂನೂಸ್ ಎಂಬ ವ್ಯಕ್ತಿಯನ್ನು ಇಬ್ಬರು ಆರೋಪಿಗಳು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ. ಕೊಲೆ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ತನಿಖೆ ಮುಂದುವರೆದಿದೆ.

ಎಸ್.ಜಾಹ್ನವಿ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ವಿಜಯನಗರ.

ಕೋಟ್-

ರಾತ್ರಿ 9-45ರ  ಸುಮಾರಿಗೆ ನಾನು ನನ್ನ ಮಗನಿಗೆ ಊಟಕ್ಕೆ ಕರೆ ಮಾಡಿದ್ದೆ. 10 ನಿಮಿಷದಲ್ಲಿ ಬರುತ್ತೇನೆ ಎಂದು ಹೇಳಿದ್ದ. ಸ್ವಲ್ಪ ಹೊತ್ತಿನಲ್ಲಿಯೇ ನನ್ನ ಮಗ ಕೊಲೆಯಾದ ವಿಷಯ ತಿಳಿಯಿತು. ಕೊಲೆಗೆ ಕಾರಣ ಗೊತ್ತಿಲ್ಲ. ಕೊಲೆ ಮಾಡಿದವರಿಗೆ ತಕ್ಕ ಶಿಕ್ಷೆ ಆಗಬೇಕು.

ನಜೀರ್ ಅಹಮದ್

ಮೃತ ವ್ಯಕ್ತಿಯ ತಂದೆ

ಹೊಸಪೇಟೆ.