
ಸಂಜೆವಾಣಿ ವಾರ್ತೆ
ಹನೂರು ಜು 14 :- ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 40 ವರ್ಷಗಳ ಹಳೆಯ ಕಟ್ಟಡದ ತೆರವಿಗೆ ಇಂದು ಸೋಮವಾರ ಪೂಜೆ ಸಲ್ಲಿಸಿ ನಂತರ ಜೆ.ಸಿ.ಬಿ ಯಂತ್ರದ ಮೂಲಕ ಕಟ್ಟಡವನ್ನು ತೆರವು ಮಾಡಲು ಸಂಘದ ಆಡಳಿತ ಮಂಡಳಿ ಸರ್ವ ಸದಸ್ಯರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.
ಇದೆ ವೇಳೆ ಸಹಕಾರ ಸಂಘದ ಮಾಜಿ ಅಧ್ಯಕ್ಷ ನಟರಾಜು ಗೌಡ ಅವರು ಮಾತನಾಡಿ ನಮ್ಮ ಸಹಕಾರ ಸಂಘದ ಕಟ್ಟಡವು ಈಗಾಗಲೇ 40 ವರ್ಷಗಳಿಗೂ ಹೆಚ್ಚು ಕಳೆದಿದೆ. ಮಾಜಿ ಸಚಿವರಾದ ದಿವಂಗತ ರಾಜು ಗೌಡರು ಅವರ ಕಾಲದಲ್ಲಿ ನಿರ್ಮಾಣ ಮಾಡಿದಂತಹ ಈ ಕಟ್ಟಡದಲ್ಲಿ ಇಲಿಯತನಕ ಹಲವಾರು ಆಡಳಿತ ಮಂಡಳಿ ರಚನೆ ಮಾಡಲಾಗಿದೆ.
ಈ ಕಟ್ಟಡ ಈಗಾಗಲೇ ಶೀತಲಗೊಂಡಿತ್ತು. ನಂತರ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಕಳೆದ ವರ್ಷ ಎಂ.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರು ಮಾಜಿ ಶಾಸಕರಾದ ಆರ್. ನರೇಂದ್ರರವರು 1.70 ಕೋಟಿ ರೂ. ವೆಚ್ಚದ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಇದೀಗ ಹೊಸ ಕಟ್ಟಡವನ್ನು ನಿರ್ಮಾಣ ಮಾಡುವುದಕ್ಕೆ ಹಳೆಯ ಕಟ್ಟಡವನ್ನು ತೆರವು ಮಾಡಲು ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ಉಪಾಧ್ಯಕ್ಷೆ ಪುಷ್ಪಲತಾ, ನಿರ್ದೇಶಕರುಗಳಾದ ಶ್ರೀನಿವಾಸಗೌಡ, ಎಸ್. ಲಿಂಗೇಗೌಡ, ಎಲ್. ನಟರಾಜುಗೌಡ, ಕೆ. ರಾಜುಗೌಡ, ವಿ.ಗೋವಿಂದ ಕೆಂಚಯ್ಯನದೊಡ್ಡಿ, ಟಿ.ಎಸ್. ಮಹದೇಶ್, ಕೆಂಚನಾಯಕ ಉದ್ದನೂರು, ನಾಗರತ್ನಮ್ಮ, ರಂಗಸ್ವಾಮಿನಾಯ್ಡು, ಮುಖ್ಯಕಾರ್ಯ ನಿರ್ವಹಣಾಧಿಕಾರಿ ಬಿ. ಬಸವರಾಜು, ಸಂಘದ ಮೇಲ್ವಿಚಾರಕ ಬಾಲಾರಾಜು, ನಾಗೇಂದ್ರ ಎಂ, ಶಿವಕುಮಾರಸ್ವಾಮಿ, ರಾಜೇಶ್, ಸುಮತಿ, ಮುಖಂಡರು ಸಿಂಗಾನಲ್ಲೂರು ಪ್ರಸಾದ್ ಸೇರಿದಂತೆ ಇನ್ನಿತರರು ಇದ್ದರು.

































