Home ಜಿಲ್ಲೆ ಕಲಬುರಗಿ ಮಕ್ಕಳು ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಬೇಕು

ಮಕ್ಕಳು ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಬೇಕು

ಕಲಬುರಗಿ,ಜು.14-“ಮಕ್ಕಳು ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಬೇಕು” ಎಂದು ಹಿರಿಯ ಕಲಾವಿದ ನಾಗಭೂಷಣ ಅಗಸ್ತ್ಯ ಕರೆ ನೀಡಿದರು.
ನಗರದ ಕಲಾಮಂಡಲದಲ್ಲಿ ರಂಗಾಂತರಂಗ ಸಾಂಸ್ಕøತಿಕ ಕಲಾಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ನಾಟಕೋತ್ಸವ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ನಾಟಕ, ಭರತನಾಟ್ಯ ಜಾನಪದ ನೃತ್ಯಗಳು, ಡೊಳ್ಳುಕುಣಿತ ಹಾಗೂ ಏಕಾಭಿನಯ ಪಾತ್ರಗಳು ಜರುಗಿದವು.
ಈ ಸಂದರ್ಭದಲ್ಲಿ ಅಕ್ಷಯ್ ವೆಂಕಪ್ಪ, ಜಗದೀಶ್ವರಿ ನಾಸಿ, ಸಂಕೇತ್ ಹೆಗಡೆ ಹಾಗೂ ಅಧ್ಯಕ್ಷ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.