Home ಜಿಲ್ಲೆ ಕಲಬುರಗಿ ಹಳ್ಳಿ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ: ಕ್ರಾಂತಿಕಾರಿ ಬದಲಾವಣೆಗೆ ಸರ್ಕಾರ ಸಜ್ಜು ಎಂದ ಸಚಿವ ಡಾ. ಶರಣಪ್ರಕಾಶ್...

ಹಳ್ಳಿ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ: ಕ್ರಾಂತಿಕಾರಿ ಬದಲಾವಣೆಗೆ ಸರ್ಕಾರ ಸಜ್ಜು ಎಂದ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಊಡಗಿ

ಸೇಡಂ, ಜು 14: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನಗರ ಪ್ರದೇಶದ ಮಟ್ಟಕ್ಕೆ ಸಮನಾದ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಮತ್ತು ಹಳ್ಳಿಗಳ ಸರ್ಕಾರಿ ಶಾಲೆಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ನಮ್ಮ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಊಡಗಿ ಹೇಳಿದರು. ನಗರದಲ್ಲಿಂದು ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆ
2024-25 ನೇ ಸಾಲಿನ ಡಿ.ಡಿ.ಪಿ.ಐ. ಯೋಜನೆ ಅಡಿಯಲ್ಲಿ 72.50 ಲಕ್ಷ ರೂಪಾಯ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿದ್ಯಾನಗರ 2 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5 ಕೋಣೆಗಳು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಶಾಲೆಗಳಲ್ಲಿ ಸುಸಜ್ಜಿತ ಕಟ್ಟಡ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮುಂತಾದ ಮೂಲಸೌಕರ್ಯಗಳನ್ನು ಒದಗಿಸಲು ಕೆಕೆ ಆರ್ ಡಿ ಬಿ ವಿಶೇಷ ಅನುದಾನ ಮೀಸಲಿಡಲಾಗಿದೆ ಎಂದರು.ಈ ವೇಳೆಯಲ್ಲಿ ಗ್ಯಾರೆಂಟಿ ಅನುμÁ್ಠನದ ಅಧ್ಯಕ್ಷರಾದ ಶಿವಶರಣರೆಡ್ಡಿ ಪಾಟೀಲ್, ನಗರ ಪ್ರಾಧಿಕಾರದ ಅಧ್ಯಕ್ಷರಾದ ವಿಶ್ವನಾಥ ಪಾಟೀಲ ಬೋಮ್ನಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾರುತಿ ಹುಜುರಾತಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಎಇಇ ವಿಶ್ವನಾಥ ಮಾವಿನಗಿಡ, ಗುತ್ತಿಗೆದಾರ ಚಂದ್ರಯ್ಯ ಮಠಪತಿ, ಸತೀಶ್ ರೆಡ್ಡಿ ಪಾಟೀಲ್ ರಂಜೋಳ, ಹಾಜಿ ನಾಡೇಪಲ್ಲಿ, ಜಗನ್ನಾಥ ಚಿಂತಪಳ್ಳಿ, ಬಸವರಾಜ ಸಾಗರ, ಅಂಬರೀಶ್ ಊಡಗಿ, ನಗರ ಸಭೆ ಪೌರಾಯುಕ್ತರಾದ ಶರಣಯ್ಯ ಸ್ವಾಮಿ, ಜೀನಜಾನಿ ಜಾಗೀರದಾರ ಹಾಗೂ, ರಾಜು ಚವ್ಹಾಣ,ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಭೀಮರಾಯ ದೊಡ್ಡಮನಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಮ್.ಡಿ ಸೈಯ್ಯದ್, ಶಾಲಾ ಮುಖ್ಯೋಪಾಧ್ಯಾಯರಾದ ಚಂದುಬಾಯಿ ಕುಲಕರ್ಣಿ, ಲಲಿತಾ ಬಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು