Home ಜಿಲ್ಲೆ ಮೈಸೂರು ಭಗವಾನ್ ರಮಣ ಮಹರ್ಷಿಗಳ ಜಯಂತಿ ಆಚರಣೆ: ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯ

ಭಗವಾನ್ ರಮಣ ಮಹರ್ಷಿಗಳ ಜಯಂತಿ ಆಚರಣೆ: ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯ

ಸಂಜೆವಾಣಿ ನ್ಯೂಸ್
ಮೈಸೂರು, ಜು.14:-
ಭಗವಾನ್ ರಮಣ ಮಹರ್ಷಿಗಳ 146ನೇ ಜಯಂತಿಯನ್ನು ಮೈಸೂರಿನ ಕುವೆಂಪು ನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಶ್ರೀ ರಮಣ ಜ್ಞಾನ ಕೇಂದ್ರ ಟ್ರಸ್ಟ್ ಆವರಣದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.


ಕಾರ್ಯಕ್ರಮದ ಅಂಗವಾಗಿ ಮೊದಲು ಭಗವಾನ್ ರಮಣ ಮಹರ್ಷಿಗಳ ಪ್ರತಿಮೆಗೆ ಪೂಜೆ ಮತ್ತು ಪುಷ್ಪ ನಮನ ಸಲ್ಲಿಸಲಾಯಿತು. ನಂತರ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯ ಮತ್ತು ಶೈಕ್ಷಣಿಕ ಸಾಮಗ್ರಿಗಳ ವಿತರಣೆ ಮಾಡಲಾಯಿತು.


1 ಲಕ್ಷ ರೂ. ಧನಸಹಾಯ, 100 ಮಕ್ಕಳಿಗೆ ಪುಸ್ತಕ ವಿತರಣೆ
ಈ ಸಂದರ್ಭದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಒಟ್ಟು 1 ಲಕ್ಷ ರೂ. ವರೆಗೆ ಧನಸಹಾಯ ನೀಡಲಾಯಿತು. ಅದೇ ರೀತಿ 100ಕ್ಕೂ ಹೆಚ್ಚು ಮಕ್ಕಳಿಗೆ ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.


ಮಾನಸ ಗಂಗೋತ್ರಿಯ ತತ್ವ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಎಚ್.ಎಲ್. ಚಂದ್ರಶೇಖರ್ ಅವರು ಭಗವಾನ್ ರಮಣ ಮಹರ್ಷಿಗಳ ಜೀವನ ಮತ್ತು ತತ್ವಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿಕ್ಷಣ ತಜ್ಞ ಕೆ.ಜಿ. ಸುಧೀಂದ್ರ ಲಾ ಫಾರ್ ಆಲ್ ಕನ್ನಡ ಕಾನೂನು ಮಾಸಪತ್ರಿಕೆಯ ಸಂಪಾದಕರು ಹಾಗೂ ಮಾಜಿ ಜಿಲ್ಲಾ ಸಹಕಾರಿ ವಕೀಲರು ಮತ್ತು ಮಾಜಿ ಕಾರ್ಯದರ್ಶಿ ಮೈಸೂರು ವಕೀಲರ ಸಂಘ, ಮಾಜಿ ನಗರ ಪಾಲಿಕೆ ಸದಸ್ಯರು ಮತ್ತು ಚಲನಚಿತ್ರ ನಿರ್ಮಾಪಕ ಎಂ.ಡಿ. ಪಾರ್ಥಸಾರಥಿ(ಪಾತಿ) ಕೆ.ಎಮ್.ಪಿ.ಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಉಪಸ್ಥಿತರಿದ್ದರು.


ಶ್ರೀ ರಮಣ ಜ್ಞಾನ ಕೇಂದ್ರದ ಗೌರವಾಧ್ಯಕ್ಷ ಎ.ಜಿ. ಸುವ್ರತೀಂದ್ರಗೌರವ ಕಾರ್ಯದರ್ಶಿ ಗೀತಾ ಚರಣ್ ಗೌರವ ಕಾರ್ಯಾಂಗ ಅಧ್ಯಕ್ಷರು ಪ್ರಾರ್ಥನಾ ಕುಮಾರಿ ವ್ಯವಸ್ಥಾಪಕರು ಶಿಕುಮಾರ್ ರಾಘವೇಂದ್ರ ಅಭಿಷೇಕ್ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಂಬಲ ನೀಡುವ ಮೂಲಕ ರಮಣ ಮಹರ್ಷಿಗಳ ಆದರ್ಶಗಳನ್ನು ಮುಂದುವರಿಸಲಾಗುತ್ತಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದರು.