Home ಜಿಲ್ಲೆ ಮೈಸೂರು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಗಳಿಂದ ಮತದಾರರ ಸೌಲಭ್ಯ ಕೇಂದ್ರಗಳ ಸ್ಥಳ ಪರಿಶೀಲನೆ

ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಗಳಿಂದ ಮತದಾರರ ಸೌಲಭ್ಯ ಕೇಂದ್ರಗಳ ಸ್ಥಳ ಪರಿಶೀಲನೆ

ಸಂಜೆವಾಣಿ ನ್ಯೂಸ್
ಮೈಸೂರು, ಜು.14:-
ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಪಿ.ಎಸ್. ವಸ್ತ್ರದ್, ಐಎಸ್ ಅವರು ಇಂದು ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವಲಯ ಕಚೇರಿ-9ರ ವ್ಯಾಪ್ತಿಯ ವಾರ್ಡ್ ಸಂಖ್ಯೆ-39ರ ಎಂಸಿಸಿ ಕಾಲೋನಿಗೆ ಭೇಟಿ ನೀಡಿ ಮತದಾರರ ಸೌಲಭ್ಯ ಕೇಂದ್ರದ ಸ್ಥಳ ಪರಿಶೀಲನೆ ನಡೆಸಿದರು.


ವಿಶೇಷ ತೀವ್ರ ಪರಿಷ್ಕರಣೆ (SIಖ) ಕಾರ್ಯಕ್ರಮದ ಅಂಗವಾಗಿ ಮತಗಟ್ಟೆ ಸಂಖ್ಯೆ 144, 145, 146 ಹಾಗೂ 147ರ ಮತದಾರರ ಅನುಕೂಲಕ್ಕಾಗಿ ಸ್ಥಾಪಿಸಲಾಗಿರುವ ಮತದಾರರ ಸೌಲಭ್ಯ ಕೇಂದ್ರ (ಗಿoಣeಡಿ ಈಚಿಛಿiಟiಣಚಿಣioಟಿ ಅeಟಿಣಡಿe)ಕ್ಕೆ ಅವರು ಭೇಟಿ ನೀಡಿದರು.


ಸೌಲಭ್ಯಗಳು ಹಾಗೂ SIಖ ಪ್ರಗತಿ ಪರಿಶೀಲನೆ
ಈ ಸಂದರ್ಭದಲ್ಲಿ ಕೇಂದ್ರದಲ್ಲಿ ಸಾರ್ವಜನಿಕರಿಗೆ ಕಲ್ಪಿಸಲಾಗಿರುವ ಸೌಲಭ್ಯಗಳು, ಅರ್ಜಿಗಳ ಸ್ವೀಕಾರ, ದಾಖಲೆಗಳ ಪರಿಶೀಲನೆ ಹಾಗೂ SIಖ ಕಾರ್ಯದ ಪ್ರಗತಿಯನ್ನು ಅಧಿಕಾರಿಗಳು ಅವಲೋಕಿಸಿದರು. ಮತದಾರರೊಂದಿಗೆ ನೇರ ಸಂವಾದ ನಡೆಸಿದ ವಸ್ತ್ರದ್ ಅವರು, ಕೇಂದ್ರದಲ್ಲಿ ದೊರೆಯುತ್ತಿರುವ ಸೇವೆಗಳ ಕುರಿತು ಮಾಹಿತಿ ಪಡೆದು ಸಾರ್ವಜನಿಕರ ಅಭಿಪ್ರಾಯಗಳನ್ನು ಆಲಿಸಿದರು.


ಅಧಿಕಾರಿಗಳಿಗೆ ಮಾರ್ಗದರ್ಶನ;
ಃಐಔಗಳು, ಃಐಔ Suಠಿeಡಿvisoಡಿs ಹಾಗೂ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳೊಂದಿಗೆ(ಂಇಖಔಗಳು) ಸಮಾಲೋಚನೆ ನಡೆಸಿದ ಅವರು, SIಖ ಕಾರ್ಯವನ್ನು ಗುಣಮಟ್ಟದೊಂದಿಗೆ, ಪಾರದರ್ಶಕವಾಗಿ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಗತ್ಯ ಮಾರ್ಗದರ್ಶನ ನೀಡಿದರು.


ಅಧಿಕಾರಿಗಳು ಉಪಸ್ಥಿತ:
ಈ ವೇಳೆ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಿ ಅಧಿಕಾರಿಗಳಾದ ವೆಂಕಟೇಶ್ ಸಿ.ಂಇಖಔಗಳು, ಕಂದಾಯ ಅಧಿಕಾರಿಗಳು,BLO Supervisors, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿ ಉಪಸ್ಥಿತರಿದ್ದರು.