
ಕಲಬುರಗಿ,ಮೇ.19-ನಂದೂರ ಇಂಡಸ್ಟ್ರಿಯಲ್ ಏರಿಯಾದ ಪೆಟ್ರೋಲ್ ಪಂಪ್ ಹಿಂದುಗಡೆ ಇರುವ ಬಯಲು ಜಾಗದಲ್ಲಿ ಗಿಡದ ಕೆಳಗೆ ಕುಳಿತು ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಎಎಸ್‍ಐ ಹಣಮಂತ ವಾಲಿ, ಸಿಬ್ಬಂದಿಗಳಾದ ಪ್ರಕಾಶ, ರಾಜಕುಮಾರ ಮತ್ತು ಕಿಶೋರ ಅವರು ದಾಳಿ ನಡೆಸಿ 6 ಜನರನ್ನು ಬಂಧಿಸಿದ್ದಾರೆ.
ಸದ್ದಾಂ ತಂದೆ ಲತೀಫ್, ಮಹಮ್ಮದ್ ಶೇರು ತಂದೆ ಚಾಂದಪಾಶಾ ಭಾಗವಾನ, ಶ್ರೀಮಂತ ತಂದೆ ದೇನು ಪವಾರ, ನೀಲಕಂಠ ತಂದೆ ಚಂದು ಪವಾರ, ಅತ್ತಾರ ಅಹ್ಮದ್ ತಂದೆ ಶಬ್ಬೀರ್ ಅಹ್ಮದ್ ಚುಲಬುಲ್ ಮತ್ತು ನೂರಷಾ ತಂದೆ ಜಾನಿಷಾರ ಎಂಬುವವರನ್ನು ಬಂಧಿಸಿ 9500 ರೂ.ನಗದು ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.