Home ಜಿಲ್ಲೆ ಮಂಗಳೂರು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ಗೆ ಹೊತ್ತಿ ಉರಿದ ಫ್ಯಾನ್ಸಿ ಗೋಡೌನ್

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ಗೆ ಹೊತ್ತಿ ಉರಿದ ಫ್ಯಾನ್ಸಿ ಗೋಡೌನ್

ಸುಳ್ಯ:ಸುಳ್ಯದ ಬಾಳೆಮಕ್ಕಿಯಲ್ಲಿರುವ ಶ್ರೀಹರಿ ಕಾಂಪ್ಲೆಕ್ಸ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಫ್ಯಾನ್ಸಿವೊಂದರ ಗೋಡೌನ್ ಹೊತ್ತಿ ಉರಿದ ಘಟನೆ ನಡೆದಿದೆ.
ಸೋಮವಾರ ಬೆಳಗ್ಗಿನ ಜಾವ ಸುಳ್ಯದ ಶ್ರೀಹರಿಕಾಂಪ್ಲೆಕ್ಸ್ ನಲ್ಲಿರುವ ಮಹಾಲಕ್ಷ್ಮಿ ಫ್ಯಾನ್ಸಿ ಅಂಗಡಿಯ ಹಿಂಬದಿಯಲ್ಲಿರುವ ಅವರ ಗೋಡೌನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಕ್ಷಣ ಮಾತ್ರದಲ್ಲಿ ಬೆಂಕಿ ಧಗ ಧಗನೆ ಉರಿಯಲಾರಂಭಿಸಿತು. ವಿಷಯ ತಿಳಿದ ಅಂಗಡಿ ಮಾಲಕರು ಕಟ್ಟಡ ಮಾಲಕರಿಗೆ ವಿಷಯ ತಿಳಿಸಿದರು. ಅಗ್ನಿಶಾಮಕ ದಳದವರೂ ಬಂದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.