
ಸಂಜೆವಾಣಿ ವಾರ್ತೆ
ಮಂಡ್ಯ:ಜು.11:- ವಿದ್ಯಾರ್ಥಿಗಳು ಪ್ರಾರಂಭದ ದಿನಗಳಲ್ಲಿಯೇ ಮಹಾ ಕಾವ್ಯಗಳ ಬಗ್ಗೆ ಅರಿವು, ಅಭಿಮಾನ ಹೋಂದುವುದು ಅಗತ್ಯಗಳೊಂದಾಗಿದೆ.ಇದು ಅವರ ಜೀವನವನ್ನು ಸುಭದ್ರಗೊಳಿಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಹಕಾರಿಯಾಗುತ್ತದೆ ಎಂದು ಎಲ್ಲರೂಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್ ಕುಮಾರ್ ಅಭಿಪ್ರಾಯಿಸಿದರು.
ನಗರದ ಡ್ಯಾಫೆÇೀಡಿಲ್ಸ್ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಮಂಡ್ಯ ಜಿಲ್ಲಾ ಘಟಕ ಹಾಗೂ ಡ್ಯಾಫೆÇೀಡಿಲ್ಸ್ ಶಿಕ್ಷಣ ಸಂಸ್ಥೆಯ ಸಂಯುಕ್ತಆಶ್ರಯದಲ್ಲಿ ಆಯೋಜಿಸ ಲಾಗಿದ್ದ ಗಮಕ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿದರು.
ಮಹಾ ಕಾವ್ಯಗಳಲ್ಲಿ ಬರುವ ಮಹನೀಯರು ಗಳ ಆದರ್ಶ, ತ್ಯಾಗ ಬಲಿದಾನ,ಇತ್ಯಾದಿಗಳನ್ನು ವಿದ್ಯಾರ್ಥಿ ಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಇದರಿಂದ ಮಾನಸಿಕ ಸದೃಢತೆ ಸಾಧ್ಯ ಎಂದರು.
ಯಶಸ್ವಿಯಾಗಿ ಜೀವನ ಶೈಲಿಗೆ,ಉತ್ತಮ ಸಾಂಸ್ಕೃತಿಕ ಪ್ರಜೆಯಾಗಿ ದೇಶಕ್ಕೆ ಮಾದರಿಯಾಗಿ ಬದುಕಿ ಜೀವನದಲ್ಲಿ ಶ್ರೇಷ್ಠ ಸಾಧನೆ ಮಾಡಲು ಮಹಾ ಕಾವ್ಯಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದ ಅವರು ಈ ಎಲ್ಲಾ ಅವಕಾಶಗಳನ್ನು ಪ್ರಾಚೀನ ಶ್ರೇಷ್ಠ ಕಲೆಯಾದ ಗಮಕದ ಕಲಿಕೆ ಮತ್ತು ಆಸ್ವಾಧನೆಯಿಂದ ಸಾಹಿತಿಕ ಪ್ರೀತಿ ಗಳಿಸಲು ಸಾಧ್ಯ ಎಂದರು.
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡ್ಯಾಫೆÇೀಡಿಲ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿ.ಸುಜಾತಾ ಕೃಷ್ಣ ಪ್ರಾಚೀನ ಪಾರಂಪರಿಕ ಕಲೆ ಯಾದ ಗಮಕ ( ಕಾವ್ಯವಾಚನ ) ಕ್ಕೆ 3 ಸಾವಿರ ವರ್ಷಗಳ ಭವ್ಯ ಇತಿಹಾಸವಿದ್ದು ತ್ರೇತಾಯುಗದಿಂದ ಅರಳಿದ ಶ್ರೇಷ್ಠ ಗಮಕ ಕಲೆ ಕನ್ನಡ ಭಾಷೆಯ ಅಸ್ಮಿತೆ ಯಾಗಿದೆ.ಕಲೆಯ ಪ್ರಸಾರಕ್ಕೆ ಪೂರಕವಾಗಿ ಶಿಕ್ಷಣ ಸಂಸ್ಥೆ ಇಂತಹ ವಿಶಿಷ್ಟ ಕಾರ್ಯಕ್ರಮಕ್ಕೆ ಸದಾ ಬೆಂಬಲ ವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ
ಎಂ.ವಿ.ಧರಣೇoದ್ರಯ್ಯ ಮಾತನಾಡಿದರು.
ಶಾಲೆಯ ಮುಖ್ಯ ಶಿಕ್ಷಕಿ ನಯನ ಭಾಗವಹಿಸಿದ್ದರು.
ಗಮಕ ಕಾರ್ಯಕ್ರಮವಾಗಿ ಡಿವಿಜಿಯವರ ಮಂಕು ತಿಮ್ಮನ ಕಗ್ಗ, ಹಾಗೂ 10 ನೇ ತರಗತಿಯ ಕಾವ್ಯ ಭಾಗ ವೀರಲವ ವನ್ನು ಹಿರಿಯ ಗಮಕಿ ಕಲಾಶ್ರೀ
ಸಿ.ಪಿ.ವಿದ್ಯಾಶಂಕರ್ ವಾಚಿಸಿ ಖ್ಯಾತ ವ್ಯಾಖ್ಯಾನ ಕಾರ ಡಾ.ಎಸ್. ಶ್ರೀನಿವಾಸ ಶೆಟ್ಟಿ ಆಕರ್ಷಕವಾಗಿ ವ್ಯಾಖ್ಯಾನಿಸಿ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.
ಮಂಡ್ಯ ಜಿಲ್ಲಾ ಗಮಕ ಪರಿಷತ್ತಿನ ಪ್ರತಿನಿಧಿ ವಿದ್ಯಾಶಂಕರ್ ಸ್ವಾಗತಿಸಿ ಕಾರ್ಯಕ್ರಮದ ಸದುದ್ದೇಶ ವನ್ನು ವಿವರಿಸಿದರು.

































