Home ಜಿಲ್ಲೆ ಬಳ್ಳಾರಿ ಅರ್ಬನ್ ಬ್ಯಾಂಕಿಗೆ 31 ಲಕ್ಷ ರೂ ಲಾಭ

ಬಳ್ಳಾರಿ ಅರ್ಬನ್ ಬ್ಯಾಂಕಿಗೆ 31 ಲಕ್ಷ ರೂ ಲಾಭ

Oplus_19005442

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಸೆ.20: ನಗರದ ಬಳ್ಳಾರಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ನ 2025-26 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಬ್ಯಾಂಕಿನ ಅಧ್ಯಕ್ಷ ಉಪ್ಪಾರ ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಎಂ.ಜಿ.ಬಳಿಯ      ಬ್ಯಾಂಕಿನ ಉದ್ದೇಶಿತ ಕಟ್ಟಡ ಆವರಣದಲ್ಲಿ ಇಂದು ನಡೆಯಿತು.2025-26. ನೇ ಸಾಲಿನಲ್ಲಿ ಬ್ಯಾಂಕ್ 28,96,22,455 ಸಾಲ ವಿತರಣೆ ಮಾಡಿದೆ. ಒಟ್ಟು ವಹಿವಾಟು  ರೂ. 90.22 ಕೋಟಿ ಮುಟ್ಟಿದೆ. ರೂ. 31 ಲಕ್ಷದ 20715 ರೂ ಲಾಭಗಳಿಸಿದೆ.

ಈ ವೇಳೆ ಬ್ಯಾಂಕಿನ ಮಾಜಿ ಅಧ್ಯಕ್ಷರಾಗಿದ್ದ ಮೇಯರ್ ಪಿ.ಗಾದೆಪ್ಪ ಅವರನ್ನು ಬ್ಯಾಂಕಿನಿಂದ ಸನ್ಮಾನಿಸಿ ಗೌರವಿಸಲಾಯ್ತು. ನಂತರ ಮಾತನಾಡಿದ ಗಾದೆಪ್ಪ ನನ್ನ ರಾಜಕೀಯ ಜೀವನದ ಮೊದಲಮೆಟ್ಟಿಲು ಈ ಅರ್ಬನ್ ಬ್ಯಾಂಕ್ 1992 ರಲ್ಲಿ ಯುವ ನಿರ್ದೇಶಕರಾಗಿದ್ದ ನನ್ನನ್ನು ಮೊದಲಬಾರಿಗೆ ಅಧ್ಯಕ್ಷರನ್ನಾಗಿಸಿದರು.  ಎಂದು ಸ್ಮರಿಸಿ. ನಂತರದ ದಿನಗಳಲ್ಲಿ ಸಹಕಾರ ಕ್ಷೇತ್ರದಲ್ಲಿ ಬೆಳೆಯಲು ಇದು ಸಹಕಾರಿಯಾಯ್ತು ಎಂದರು. ಕಲಾವಿದರಾದ ಪಾಂಡುರಂಗಪ್ಪ, ಓಂಕಾರಮ್ಮ , ವಿದ್ಯಾರ್ಥಿಗಳಾದ ಮನಿಷಾ, ಎಂ.ಲಾವಣ್ಯ, ಪ್ರತಿಭಾ    ಹಿರಿಯ ಸದಸ್ಯರಾದ ಪಂಪಾಪತಿ ಅವರನ್ನು ಸನ್ಮಾನಿಸಿ ಗೌರವಿಸಲಾಯ್ತು.

ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಕೆ.ರಾಮಕೃಷ್ಣಯ್ಯ, ಡಾ ಕೆ.ಮಹಾಂತೇಶ್, ಪಿ.ಶೇಕ್ಷಾಸಾಬ್, ಎಂ.ನಾರಾಯಣಾಚಾರ್, ಕೆ.ಗಾದಿಲಿಂಗ, ಗುರುರಾಜ್,ಅನಿಲ್, ಕಲ್ಪನಾ , ಪದ್ಮಾವತಿ ಮೊದಲಾದವರು ವೇದಿಕೆಯಲ್ಲಿ ಇದ್ದರು.

ಬ್ಯಾಂಕಿನ ಸಿಇಓ ಶಿವರಾಜ್ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಸಿಂಧು ಸ್ವಾಗತಿಸಿದರು.  ರಕ್ಷಾ ಪ್ರಾರ್ಥನೆ ಮಾಡಿದರು. ಮ್ಯಾನೇಜರ್ ಕೃಷ್ಣ  ವಾರ್ಷಿಕ ವರದಿ ಮಂಡಿಸಿದರು. ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಈ  ಬ್ಯಾಂಕ್ 1916 ರಲ್ಲಿ ದಿವಂಗತ ದಿವಾನ್ ಬಹದ್ದೂರ್ ಪೆನುಗೊಂಡ ರಾಮಾರಾವ್ ಸ್ಥಾಪಿಸಿದ್ದು 110 ವರ್ಷಗಳ ಸೇವೆ ಸಲ್ಲಿಸಿದೆ. ಸಮಾಜದ ಮಧ್ಯಮ, ಕೆಳ ವರ್ಗದ ಕುಟುಂಬಗಳಿಗೆ ಆರ್ಥಿಕ ಸವಲತ್ತುಗಳನ್ನು ನೀಡುತ್ತಾ ಕಾರ್ಯ ಕ್ಷೇತ್ರದ ಎಲ್ಲಾ ಸದಸ್ಯರ ಹಾಗೂ ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಷೇರು ಬಂಡವಾಳ 1,39,88,500  ರೂ ಹೊಂದಿದೆ,  ಠೇವಣಿ ರೂ. 61,26,09,259 ಇದೆ. ವರದಿಯ ವರ್ಷಾಂತ್ಯಕ್ಕೆ   ರೂ. 2,19,21,818 ಶಿಲ್ಕು  ಹೊಂದಿದೆ.ಹೂಡಿಕೆ ರೂ. 22,14,32,300 ಭಾರತೀಯ ರಿಜರ್ವ್ ಬ್ಯಾಂಕಿನ ಹೂಡಿಕೆಯ ನಿಯಮಾವಳಿಗಳಂತೆ ಶೇ. 18% ರಷ್ಟು ಎಸ್.ಎಲ್.ಆರ್. ಹೂಡಿಕೆಗಳನ್ನು ಸರಕಾರಿ ಭದ್ರತಾ ಪತ್ರಗಳಲ್ಲಿ ಮಾಡಲಾಗಿದೆ.