Home Uncategorized ನಾಲ್ವಡಿಯನ್ನು ಯುವ ಪೀಳಿಗೆಗೆ ಪರಿಚಯಿಸೋಣ: ಸಿ.ಎನ್.ಮಂಜೇಗೌಡ

ನಾಲ್ವಡಿಯನ್ನು ಯುವ ಪೀಳಿಗೆಗೆ ಪರಿಚಯಿಸೋಣ: ಸಿ.ಎನ್.ಮಂಜೇಗೌಡ

ಸಂಜೆವಾಣಿ ನ್ಯೂಸ್
ಮೈಸೂರು.ಜೂ.4:-
ರಾಜ್ಯ ಸರ್ಕಾರ ನಾಲ್ವಡಿ ಕೃಷ್ಣರಾಜ ಒಡೆಯರಂತಹ ಮಹನೀಯರ ಜಯಂತಿ ಕಾರ್ಯಕ್ರಮವನ್ನು ಈಗಿನ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ತಿಳಿಸಿದರು.


ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಎದುರು ಆಯೋಜಿಸಿದ್ದ ನಾಲ್ವಡಿಯವರ ಜಯಂತಿ ಕಾರ್ಯಕ್ರಮದಲ್ಲಿ ನಾಲ್ವಡಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಈ ದೇಶ ಕಂಡ ಮಹಾನ್ ಮಹಾರಾಜ.


ಪ್ರಾತಃ ಸ್ಮರಣೀಯರು. ಅಭಿವೃದ್ಧಿಯ ಹರಿಕಾರ. ಕನ್ನಂಬಾಡಿ ಕಟ್ಟೆ, ಮೈಸೂರು ವಿಶ್ವವಿದ್ಯಾಲಯ ಹಾಗೂ ಶಿವನ ಸಮುದ್ರ ಜುಲೈ ವಿದ್ಯುತ್ ಗಾರ ಸೇರಿದಂತೆ ಹಲವಾರು ಹೊಸ ನೂತನ ಯೋಜನೆಗಳನ್ನು ಜಾರಿಗೆ ತಂದರು. ಜತೆಗೆ ಪ್ರಜೆಗಳ ಹಿತರಕ್ಷಣೆಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಇವರು ರಾಜ್ಯವನ್ನು ವಿಸ್ತರಿಸದೆ, ಅಭಿವೃದ್ಧಿ ಕೆಲಸಗಳನ್ನು ಮಾಡಿ ಶಾಶ್ವತವಾಗಿ ಪ್ರಜೆಗಳ ಮನದಲಿ ಉಳಿದವರು ಎಂದು ಸ್ಮರಿಸಿದರು.


ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ ರಾಜ್ಯ ಸರ್ಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆಯನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕು ಹಾಗೂ ಕೇಂದ್ರ ಸರ್ಕಾರ ನಾಲ್ವಡಿರವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕೆಂದು ಒತ್ತಾಯಿಸಿದರು. ಪ್ರವಾಸಿಗರಿಗೆ ಎಪಿಎನ್ ಪ್ರಾಪರ್ಟೀಸ್ ನ ಅಧ್ಯಕ್ಷ ಎ.ಪಿ.ನಾಗೇಶ್ ಮೈಸೂರು ಪಾಕ್ ಅನ್ನು ವಿತರಿಸಿದರು. ಹಿರಿಯ ಸಮಾಜ ಸೇವಕ ಡಾ.ರಘುರಾಂ.ಕೆ.ವಾಜಪೇಯಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್.ಜಯಪ್ರಕಾಶ್, ಜೆಡಿಎಸ್ ನಗರಾಧ್ಯಕ್ಷ ಎಸ್ ಬಿಎಂ ಮಂಜು, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ.ಲಿಂಗರಾಜು, ಸಮಾಜ ಸೇವಕ ಎಂ.ಎನ್.ದೊರೆಸ್ವಾಮಿ, ಮಹಾತ್ಮ ಗಾಂಧಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಟಿ.ಜಿ.ಆದಿಶೇಷಗೌಡ, ಗೋಲ್ಡನ್ ಸುರೇಶ್, ನಾಗೇಗೌಡ, ಕುಮಾರ್ ಗೌಡ, ಕೃಷ್ಣಪ್ಪ, ಪ್ರಭುಶಂಕರ, ಎಳನೀರು ರಾಮಣ್ಣ, ಸಿಂದುವಳ್ಳಿ ಶಿವಕುಮಾರ್, ನೇಹಾ, ಶೋಭಾರಾಣಿ ಗೌಡ, ಸುಜಾತಾ, ಸೌಮ್ಯ, ಇಂದಿರಾ, ಪದ್ಮಾ, ಪ್ರಭಾಕರ್, ಶಿವರಾಂ, ವಿಜಯೇಂದ್ರ, ರಾಧಾಕೃಷ್ಣ, ದರ್ಶನ್ ಗೌಡ, ಪ್ರದೀಪ್, ಗಣೇಶ್ ಪ್ರಸಾದ್, ವಿಷ್ಣು, ರವೀಶ್, ರವಿನಾಯಕ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.