
ಕಲಬುರಗಿ: ನಗರದ ಡಾ. ಎಸ್ ಎಂ ಪಂಡಿತರಂಗಮಂದಿರದಲ್ಲಿಂದು ಜಿಲ್ಲಾ ಜೈನ ಯುವ ವೇದಿಕೆ ಮತ್ತು ಜಿಲ್ಲಾ ಸಕಲ ಜೈನ ಸಮಾಜದ ವತಿಯಿಂದ ಆಯೋಜಿಸಲಾದ ಜೈನಧರ್ಮ ವಿಶ್ವಶಾಂತಿ ಮತ್ತು ವರ್ತಮಾನದ ತವಕ ತಲ್ಲಣಗಳು ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ರಾಷ್ಟ್ರಮಟ್ಟದ ಚಾರುಶ್ರೀ ಹಾಗೂ ವೈದ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವು ಶ್ರವಣಬೆಳಗೊಳದ ದಿಗಂಬರ ಜೈನ ಮಹಾಸಂಸ್ಥಾನ ಮಠದ ಚಾರುಕೀರ್ತಿ ಪಂಡಿತಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಿತು. ಡಾ. ಹಂಪ ನಾಗರಾಜಯ್ಯ, ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ,ಅಂಕುಶ್ ಶಹಾ,ಚಂದನ್ ಶ್ರೇಯಾಂಸ್ ಸೇಠಿಯಾ,ಸುರೇಶ ತಂಗಾ ಅವರು ಸೇರಿದಂತೆ ಹಲವರಿದ್ದರು.























