ತುಮಕೂರು ಸಿದ್ದಗಂಗಾಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಸಿದ್ದಲಿಂಗ ಮಹಾಸ್ವಾಮೀಜಿ ಅವರಿಂದು ಬೆಂಗಳೂರಿನ ಈಶ್ವರ ಬಿ ಖಂಡ್ರೆ ಅವರ ಅಧಿಕೃತ ನಿವಾಸಕ್ಕೆ ಆಗಮಿಸಿ, ನೂತನ ಸಚಿವರಾಗಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ ಈಶ್ವರ ಖಂಡ್ರೆ ಹಾಗೂ ಅವರ ಧರ್ಮಪತ್ನಿ ಡಾ.ಗೀತಾ ಖಂಡ್ರೆ ಅವರನ್ನು ಆಶೀರ್ವದಿಸಿದರು.