
ನವದೆಹಲಿ/ಕೋಲ್ಕತ್ತಾ,ಜೂ.12- ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಒಡೆದು ಹೋಳಾಗಿದೆ, ಈ ನಡುವೆಯೇ ಪಕ್ಷದ ಲೋಕಸಭೆಯ ಪಕ್ಷದ ಮುಖ್ಯ ಸಚೇತಕ ಕಲ್ಯಾಣ್ ಟಿಎಂಸಿ ಬ್ಯಾನರ್ಜಿ ತಿರುಗಿಬಿದ್ದಿದ್ದು ನನ್ನನ್ನು ಕಸದ ಬುಟ್ಟಿಯಂತೆ ನಡೆಸಿಕೊಳ್ಳಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ಕಲ್ಯಾಣ್ ಬ್ಯಾನರ್ಜಿ ಎಂದಿಗೂ ಯಾರೊಂದಿಗೂ ಜಗಳವಾಡಲು ಅಥವಾ ವಾಗ್ದಾಳಿ ಮಾಡಲು ಹಿಂಜರಿಯುವುದಿಲ್ಲ. ಅದು ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೂ ಕೂಡ ಎಂದು ಹೇಳಿರುವುದು ಟಿಎಂಸಿ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಸಾಬೀತಾಗಿದೆ
ನಾಲ್ಕು ಬಾರಿ ಶ್ರೀರಾಂಪುರ ಸಂಸದ ಕಲ್ಯಾಣ್ ಬ್ಯಾನರ್ಜಿ, ಕೇವಲ ಒಂದು ತಿಂಗಳ ಹಿಂದೆ ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್ನ ಮುಖ್ಯ ಸಚೇತಕರಾಗಿ ನೇಮಕ ಮಾಡಲಾಗಿತ್ತು. ಸಹೋದ್ಯೋಗಿಗಳಿಂದ ದಂಗೆಗಳನ್ನು ಹತ್ತಿಕ್ಕಲು ಪಕ್ಷದ ಪರವಾಗಿ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿದ್ದ ವ್ಯಕ್ತಿ, ಈಗ ಸ್ವತಃ ಬಂಡಾಯದ ಕಹಳೆ ಮೊಳಗಿಸಿದ್ದಾರೆ.
69 ವರ್ಷದ ಪಾದರಸದ ವಕೀಲ ಕಲ್ಯಾಣ್ ಬ್ಯಾನರ್ಜಿ ಅವರು ಪಕ್ಷದ ಮುಖ್ಯಸ್ಥೆ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಟಿಎಂಸಿ ಮತ್ತು ಮಮತಾ ಬ್ಯಾನರ್ಜಿ ಉಳಿವಿಗಾಗಿ ಹೋರಾಡುತ್ತಿರುವ ಸಮಯದಲ್ಲಿ ಅವರ ಇತ್ತೀಚಿನ ಆಕ್ರೋಶ ಪಕ್ಷದಲ್ಲಿ ಮತ್ತಷ್ಟು ಹೊಡೆದು ಹೋಳಾಗುವಂತೆ ಮಾಡಿದೆ.
ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕನನ್ನಾಗಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಆಯ್ಕೆ ಮಾಡಿಕೊಳ್ಳುವಂತೆ “ಮಮತಾ ಬ್ಯಾನರ್ಜಿಗೆ ತಿಳಿಸುವಂತೆ ಪಕ್ಷದ ನಾಯಕ ಡೆರೆಕ್ ಒ’ಬ್ರೇನ್ಗೆ ಹೇಳಿದ್ದೇನೆ ಅದು ಅಭಿಷೇಕ್ ಬ್ಯಾನರ್ಜಿ ಅಥವಾ ನಾನು ಎನ್ನುವುದು ಇತ್ಯರ್ಥವಾಗಬೇಕು ಎಂದಿದ್ದಾರೆ.
ಪಕ್ಷದ ಬಂಡಾಯದ ಮಧ್ಯೆ ಹೊಸ ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿ ನೇಮಕಗೊಂಡ ಡೆರೆಕ್ ಒ’ಬ್ರೇನ್, ಕಲ್ಯಾಣ್ ಬ್ಯಾನರ್ಜಿ -ಮಮತಾ ಬ್ಯಾನರ್ಜಿ ಅವರೊಂದಿಗೆ ಸಮಾಲೋಚಿಸಿದ ನಂತರ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಮಾಹಿತಿ ನೀಡಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ ಟಿಎಂಸಿ ಸಂಸದರು ಮತ್ತು ಶಾಸಕರು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿಮ ಹಾಗೂ ಅಭಿಷೇಕ್ ಬ್ಯಾನರ್ಜಿ ಅವರ ವಿರುದ್ದ ತಿರುಗಿ ಬಿದ್ದಿದ್ದಾರೆ.
























