
ಮುಂಬೈ, ಆ. 12- ಖ್ಯಾತ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಸುದೀರ್ಘ 24 ವರ್ಷಗಳ ನಂತರ ಮತ್ತೆ ನಿರೂಪಕಿಯಾಗಿ ಕಿರುತೆರೆಗೆ ಮರಳುತ್ತಿದ್ದಾರೆ. ಮರಾಠಿಯ ಜನಪ್ರಿಯ ರಿಯಾಲಿಟಿ ರಸಪ್ರಶ್ನೆ ಕಾರ್ಯಕ್ರಮವಾದ ಕೋನ್ ಹೊನಾರ್ ಕರೋಡ್ಪತಿ'ಯ ಹೊಸ ಸೀಸನ್ ಅನ್ನು ಅವರು ನಡೆಸಿಕೊಡಲಿದ್ದಾರೆ. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಿರೂಪಿಸುವ ಪ್ರಸಿದ್ಧಕೌನ್ ಬನೇಗಾ ಕರೋಡ್ಪತಿ’ ಕೆಬಿಸಿ ಮಾದರಿಯಲ್ಲೇ ಈ ಮರಾಠಿ ಕಾರ್ಯಕ್ರಮ ಮೂಡಿಬರಲಿದೆ. ಈ ಬಾರಿಯ ಶೋ ಅನ್ನು “ಆಟ ಖೇಲ್ ಬದಲ್ನಾರ್” (ಆಟ ಈಗ ಬದಲಾಗಲಿದೆ) ಎಂಬ ವಿಶಿಷ್ಟ ಅಭಿಯಾನದೊಂದಿಗೆ ಪ್ರಚಾರ ಮಾಡಲಾಗುತ್ತಿದ್ದು, ಮಾಧುರಿ ಅವರ ಹೊಸ ಪಾತ್ರವನ್ನು ಪರಿಚಯಿಸುವ ಪೆÇ್ರೀಮೋವನ್ನು ನಿರ್ಮಾಪಕರು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿದ್ದಾರೆ.
2002ರ ನಂತರ ಮೊದಲ ಬಾರಿ ನಿರೂಪಣೆ
ಮಾಧುರಿ ದೀಕ್ಷಿತ್ ಅವರಿಗೆ ನಿರೂಪಣೆ ಹೊಸದೇನಲ್ಲ. ಇವರು 2002 ರಲ್ಲಿ ಕಹಿ ನಾ ಕಹಿ ಕೋಯಿ ಹೈ' ಎಂಬ ಮ್ಯಾಚ್ ಮೇಕಿಂಗ್ ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿ ಸಣ್ಣ ತೆರೆ ಪ್ರವೇಶಿಸಿದ್ದರು. ಆ ಬಳಿಕಝಲಕ್ ದಿಖ್ಲಾ ಜಾ’ ಮತ್ತು ಡ್ಯಾನ್ಸ್ ದೀವಾನೆ'ಯಂತಹ ಜನಪ್ರಿಯ ನೃತ್ಯ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡು ಪ್ರೇಕ್ಷಕರ ಮನ ಗೆದ್ದಿದ್ದರು. ಸಿನಿಮಾ, ಒಟಿಟಿಯಲ್ಲೂ ಸಕ್ರಿಯ ಕಿರುತೆರೆಯಷ್ಟೇ ಅಲ್ಲದೆ ಚಲನಚಿತ್ರ ಹಾಗೂ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲೂ ಮಾಧುರಿ ಬ್ಯುಸಿಯಾಗಿದ್ದಾರೆ. ನೆಟ್ಫ್ಲಿಕ್ಸ್ನಮಾ ಬೆಹೆನ್’ ಚಿತ್ರದ ನಂತರ, ಜಿಯೋಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿರುವ ಶ್ರೀಮತಿ ದೇಶಪಾಂಡೆ' ಸರಣಿಯ ಎರಡನೇ ಸೀಸನ್ನಲ್ಲಿ ಅವರು ನಟಿಸುತ್ತಿದ್ದಾರೆ. ಮಹಾರಾಷ್ಟ್ರದ ವೀಕ್ಷಕರಿಗೆ ಜ್ಞಾನ ಮತ್ತು ಮನರಂಜನೆಯ ಹೊಸ ಅನುಭವ ನೀಡಲು ಸಜ್ಜಾಗಿರುವಕೋನ್ ಹೊನಾರ್ ಕರೋಡ್ಪತಿ’ ಕಾರ್ಯಕ್ರಮದ ಪ್ರಸಾರದ ಅಧಿಕೃತ ದಿನಾಂಕ ಶೀಘ್ರದಲ್ಲೇ ಹೊರಬೀಳಲಿದೆ.





























