
ಸಂಜೆವಾಣಿ ವಾರ್ತೆ
ನಂಜನಗೂಡು,ಜು.20:- ಪವಿತ್ರ ನದಿ ಕಪಿಲೆಯಲ್ಲಿ ಮೀನು ಹಿಡಿಯಲು ಹೋದ ಕಾರ್ಮಿಕ ಕಾಲು ಜಾರಿ ಬಿದ್ದು ನಾಪತ್ತೆಯಾಗಿರುವ ಘಟನೆ ನಂಜನಗೂಡು ನಗರದ ಅರಸು ಸೇತುವೆಯ ಬಳಿ ನಡೆದಿದೆ.
ವೆಸ್ಟ್ ಬೆಂಗಾಲ್ ರಾಜ್ಯದ ಉತ್ತರ ದಿನಾಯಿಪುರ ಗ್ರಾಮ ನಿವಾಸಿ ಅನ್ಬರ್ ( 30 ) ನಾಪತ್ತೆಯಾಗಿರುವ ಕಾರ್ಮಿಕ. ನಗರದ ಕೈಗಾರಿಕಾ ಪ್ರದೇಶದ ಅರ್ ವಿ ಕಾಲೇಜಿನಲ್ಲಿ ಕಟ್ಟಡದ ಕಾಮಗಾರಿ ಕೆಲಸಮಾಡುತ್ತಿದ್ದ. ಅನ್ಬರ್ ಭಾನುವಾರ ಕೆಲಸಕ್ಕೆ ರಜಾದ ಕಾರಣ ಬಟ್ಟೆಗಳನ್ನು ಶುಚಿಗೊಳಿಸಿ. ಬಿಡುವಿನ ವೇಳೆಯಲ್ಲಿ ಕಪಿಲಾ ನದಿಯ ಅರಸು ಸೇತುವೆ ಕೆಳಭಾಗದಲ್ಲಿ ಮೀನು ಹಿಡಿಯುವ ಸಂದರ್ಭದಲ್ಲಿ. ಕಾಲು ಜಾರಿ ನದಿಗೆ ಬಿದ್ದಿದ್ದಾನೆ ಈವರೆಗೂ ಆತನ ಯಾವುದೇ ಸುಳಿವು ದೊರೆತಿಲ್ಲ. ಅಗ್ನಿಶಾಮಕ ದಳದವರು ಆತನನ್ನು ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

































