
ಕಲಬುರಗಿ,ಜು.27-ಹಳೆ ವೈಷಮ್ಯದಿಂದ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ಸೇಡಂ ರಸ್ತೆಯ ವೈನ್‍ಶಾಪ್ ಹತ್ತಿರ ಭಾನುವಾರ ರಾತ್ರಿ ನಡೆದಿದೆ.
ಆದರ್ಶ ನಗರದ ರವಿಚಂದ್ರ ಗುತ್ತೇದಾರ (47) ಕೊಲೆಯಾದವರು.
ಹುಮನಾಬಾದ ರಿಂಗ್ ರಸ್ತೆಯಲ್ಲಿರುವ ಫೈನಾನ್ಸ್ ಹತ್ತಿರ ಟೀಪಾಯಿಂಟ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ರವಿಚಂದ್ರ ಗುತ್ತೇದಾರ ಎಂದಿನಂತೆ ಸೇಡಂ ರಸ್ತೆಯಲ್ಲಿರುವ ವೈನ್‍ಶಾಪ್‍ಗೆ ಮದ್ಯ ಸೇವಿಸಲು ಹೋದ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ರೋಜಾ ಏರಿಯಾದಲ್ಲಿ ಕುಟುಂಬದೊಂದಿಗೆ ರವಿಚಂದ್ರ ಗುತ್ತೇದಾರ ವಾಸವಾಗಿದ್ದ. 2020ರಲ್ಲಿ ನಡೆದ ಅಬ್ದುಲ್ ಇನ್ಸಾದ್ ಕೊಲೆ ಪ್ರಕರಣದಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಬ್ದುಲ್ ಇನ್ಸಾದ್ ಕಡೆಯವರು ಆಗಾಗ ಹೆದರಿಸುತ್ತಿದ್ದುದ್ದರಿಂದ ಅಲ್ಲಿನ ಮನೆ ಮಾರಿ ಆದರ್ಶನಗರದಲ್ಲಿ ಹೊಸ ಮನೆ ಖರೀದಿಸಿದ್ದ. ಅಲ್ಲದೆ ಹುಮನಾಬಾದ ರಿಂಗ್ ರಸ್ತೆಯಲ್ಲಿರುವ ಫೈನಾನ್ಸ್ ಹತ್ತಿರ ಟೀಪಾಯಿಂಟ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಭಾನುವಾರ ಸೇಡಂ ರಸ್ತೆಯಲ್ಲಿರುವ ವೈನ್‍ಶಾಪ್‍ಗೆ ಮದ್ಯ ಸೇವಿಸಲು ಹೋದ ವೇಳೆ ಹಳೆ ವೈಷಮ್ಯದಿಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಕೊಲೆಯಾದ ರವಿಚಂದ್ರ ಅವರ ಪತ್ನಿ ಜಯಶ್ರೀ ಗುತ್ತೇದಾರ ಅವರು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.



























