
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.14: ತಾಲೂಕಿನ ಕೊಳಗಲ್ಲು ಗ್ರಾಮದಿಂದ ಮೇ 24 ರಂದು 21 ವರ್ಷದ ಮಹಿಳೆ ಕಾಣೆಯಾಗಿದ್ದಳು.
ಕಾಣೆಯಾಗಿದ್ದ ಮಹಿಳೆಯು ಗಂಡನ ಜೊತೆಯಲ್ಲಿ ಮನಸ್ತಾಪ ಮಾಡಿಕೊಂಡು, ಮನೆ ಬಿಟ್ಟು ಹೋಗಿ, ಬೆಂಗಳೂರಿನಲ್ಲಿ ನೆಲೆಸಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಜೀವನ ನಡೆಸುತ್ತಿದ್ದಳು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮಹಿಳಾ ಠಾಣೆಯ ಪಿಐ ರಮೇಶ್ ಕುಲಕರ್ಣಿ ಮತ್ತವರ ತಂಡ ಕಾಣೆಯಾದ ಮಹಿಳೆಯನ್ನು ಸಿಡಿಆಆರ್ ಹಾಗೂ ತಾಂತ್ರಿಕ ಸಾಕ್ಷಿಗಳ ಆಧರದಲ್ಲಿ ಬೆಂಗಳೂರಿನಲ್ಲಿ ಪತ್ತೆ ಮಾಡಿ, ಮಹಿಳೆಯ ಗಂಡ ಶಿವಕುಮಾರ್ ಅವರಿಗೆ ಒಪ್ಪಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಕಳೆದ 2025 ರ ನವೆಂಬರ್ ನಲ್ಲಿ ಇಲ್ಲಿನ ರಾಮಾಂಜನೇಯ ನಗರದಿಂದ ಅಪ್ರಾಪ್ತ ಬಾಲಕಿ ಅಪಹರಣದ ಪ್ರಕರಣ ದಾಖಲಾಗಿತ್ತು.
ಕಾಣೆಯಾದ ಅಪ್ರಾಪ್ತ ಬಾಲಕಿಯನ್ನು ಸಿಡಿಟಿಆರ್ ಹಾಗೂ ತಾಂತ್ರಿಕ ಸಾಕ್ಷಿಗಳ ಆಧಾರದಲ್ಲಿ ಬೆಂಗಳೂರಿನಲ್ಲಿ ಪತ್ತೆ ಮಾಡಿ, ಬಾಲಕಿಯನ್ನು ಬಾಲ ಮಂದಿರಕ್ಕೆ ಒಪ್ಪಿಸಲಾಗಿದೆ.
ಅಪಹರಿಸಿದ್ದ ಆರೋಪಿ ಗೌತಮ ನಗೆದ ಖಾದರ್ ಭಾಷ, (22) ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.


























