Home ಜಿಲ್ಲೆ ಉಚಿತ ನೋಟ್ ಪುಸ್ತಕ ವಿತರಣೆ

ಉಚಿತ ನೋಟ್ ಪುಸ್ತಕ ವಿತರಣೆ

ಸಂಜೆವಾಣಿ ವಾರ್ತೆ

ಹೊಸಪೇಟೆ.ಜೂ.14 ಸ್ಥಳೀಯ ಹಂಪಿ ರಸ್ತೆಯಲ್ಲಿರುವ ಪತ್ತಿಕೊಂಡ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಶನಿವಾರ ಉಚಿತ ನೋಟ್ ಪುಸ್ತಕಗಳು ಹಾಗೂ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಸ್ಥಳೀಯ ಪತ್ತಿಕೊಂಡ ಕುಟುಂಬದ ಬೆಂಗಳೂರು ಮೂಲದ ಉದ್ಯಮಿ ಸಾಯಿನಾಥ್ ಮನೋಹರ್ ಅವರ ಹುಟ್ಟು ಹಬ್ಬದ ಅಂಗವಾಗಿ ಪತ್ತಿಕೊಂಡ ವಿದ್ಯಾಸಂಸ್ಥೆಯ 1200 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಮತ್ತು ಲೇಖನ ಮತ್ತು ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.

ಪತ್ತಿಕೊಂಡ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ವಿತರಣೆ ಮಾಡುವ ಮೂಲಕ ಅನುರಾಗ್ ಮಾಂಟೇಸರಿ ಸಂಸ್ಥೆಯ  ಮಾಲೀಕರಾದ ಸಾಯಿನಾಥ್ ಮನೋಹರ್ ಶಾಲೆಯಲ್ಲಿಯೇ ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಅನುರಾಧ ಸಾಯಿನಾಥ್ ಮನೂಹರ್, ಶಾಲೆ ಆಡಳಿತ ಮಂಡಳಿಯ ವರಲಕ್ಷ್ಮೀ, ಶ್ಯಾಮಲ ಮನೋಹರ, ಸಂದೀಪ್ ಪತ್ತಿಕೊಂಡ, ಶಾಲೆಯ ಮುಖ್ಯಗುರು ಡಾ.ಎತ್ನಳ್ಳಿ ಮಲ್ಲಯ್ಯ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.