Home ಜಿಲ್ಲೆ ಮೈಸೂರು ಅರಮನೆ ಮೈದಾನದಲ್ಲಿ ಯೋಗಾಭ್ಯಾಸ ಯಶಸ್ವಿ

ಅರಮನೆ ಮೈದಾನದಲ್ಲಿ ಯೋಗಾಭ್ಯಾಸ ಯಶಸ್ವಿ

ಸಂಜೆವಾಣಿ ನ್ಯೂಸ್
ಮೈಸೂರು, ಜೂ.01:-
ವಿಶ್ವ ಯೋಗ ದಿನದಂದು ನಗರದ ವಿವಿಧೆಡೆ 1.20 ಲಕ್ಷ ಜನ ಏಕಕಾಲಕ್ಕೆ ಯೋಗಾಭ್ಯಾಸ ಮಾಡುವ ಮಹಾಸಂಕಲ್ಪದೊಂದಿಗೆ ಭಾನುವಾರ ಸಾಮೂಹಿಕ ಯೋಗಾಭ್ಯಾಸ ಮಾಡಲಾಯಿತು.


ಯೋಗ ಫೆಡರೇಷನ್ ಆಫ್ ಮೈಸೂರು ವತಿಯಿಂದ ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಮಹಾಸಂಕಲ್ಪ ದಿನಸ್ ಕಾರ್ಯಕ್ರಮದಲ್ಲಿ ನೂರಾರು ಜನರು ಯೋಗ ಅಭ್ಯಾಸ ಮಾಡಿದರು.
ಆಯುಷ್ ಸಚಿವಾಲಯದ ಸಾಮಾನ್ಯ ಯೋಗ ಶಿಷ್ಟಾಚಾರದ ಪ್ರಕಾರ, 45 ನಿಮಿಷಗಳ ಯೋಗಾಭ್ಯಾಸ ಮಾಡಲಾಯಿತು.
ಪ್ರಾರ್ಥನೆ, ಚಾಲನಾ ಕ್ರಿಯೆಗಳ ನಂತರ ನಿಂತು ಮಾಡುವ ತಾಡಾಸನ, ವೃಕ್ಷಾಸನ, ಪಾದ-ಹಸ್ತಾಸನ, ಅರ್ಧ ಚಕ್ರಾಂತಾಸನ ಮತ್ತು ತ್ರಿಕೋಣಾಸನ ಅಭ್ಯಾಸಿಸಲಾಯಿತು
ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಶಶಕಾಸನ, ಉತ್ತಾನ ಮಂಡೂಕಾಸನ ಮತ್ತು ವಕ್ರಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ತಾನಪಾದಾಸನ, ಅರ್ಧಹಲಾಸನ, ಪವನಮುಕ್ತಾಸನ ಮತ್ತು ಶವಾಸನದ ಬಳಿಕ ಕಪಾಲಭಾತಿ, ಪ್ರಾಣಾಯಾಮ, ನಾಡಿಶೋಧನೆ, ಧ್ಯಾನ ಅಭ್ಯಾಸದ ನಂತರ ಯೋಗ ದಿನ ಯಶಸ್ಸಿಗೆ ಸಂಕಲ್ಪದ ಪ್ರಮಾಣ ವಚನ ಸ್ವೀಕರಿಸಲಾಯಿತು.


ಸಂಕಲ್ಪ ಸೂತ್ರ ಕಟ್ಟಿಸಿಕೊಂಡ ಯದುವೀರ್: ಇದಕ್ಕೂ ಮುನ್ನ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪತಂಜಲಿ ಗುರುಗಳ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶ್ವ ಯೋಗ ದಿನದ ಪೆÇೀಸ್ಟರ್ ಬಿಡುಗಡೆ ಮಾಡಲಾಯಿತು. ಇದೇ ವೇಳೆ ಜಿಎಸ್‍ಎಸ್ ಯೋಗ ಸಂಸ್ಥೆಯ ಸಂಸ್ಥಾಪಕ ಶ್ರೀಹರಿ ದ್ವಾರಕನಾಥ್ ಅವರು ಸಂಸದರಿಗೆ ಸಂಕಲ್ಪದ ದಾರ ಕಟ್ಟಿದರು.
ಬಳಿಕ ಮಾತನಾಡಿದ ಯದುವೀರ್, ಪ್ರತಿ ವರ್ಷ ಯೋಗ ದಿನ ಆಚರಣೆ ಮಾಡುತ್ತಿದ್ದೇವೆ. ಇದು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಯಬೇಕು. ಈ ವರ್ಷ 120 ಜಾಗಗಳಲ್ಲಿ 1.20 ಲಕ್ಷ ಜನರನ್ನು ಸೇರಿಸಿ ದಾಖಲೆ ಮಾಡಲು ಹೊರಟಿರುವುದು ಸಂತೋಷ ಎಂದರು.


ಯೋಗಕ್ಕೆ ಮಹತ್ವ ಇರುವ ಮೈಸೂರಿನಲ್ಲಿ ಮಹಾ ಸಂಕಲ್ಪದಲ್ಲಿ ಭಾಗವಹಿಸಿರುವುದು ಖುಷಿ ನೀಡಿದೆ. ಮೈಸೂರಿನ ಯೋಗ ಪರಂಪರೆಗೆ ಮುಮ್ಮಡಿ ಕೃಷ್ಣರಾಜ ಕಾಲಕ್ಕಿಂತಲೂ ಪ್ರಾಚೀನವಾದ ಇತಿಹಾಸವಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಯೋಗ ಗುರು ಕೃಷ್ಣಮಾಚಾರಿ ಅವರ ಸಂಬಂಧದೊಂದಿಗೆ ಮೈಸೂರು ಯೋಗಕ್ಕೆ ಹೆಸರಾಗಿದೆ. ನಮ್ಮ ಪೂರ್ವಿಕರು ಸಂಗೀತ, ಸಂಸ್ಕೃತಿಯ ಯೋಗದ ಪರಂಪರೆಗೆ ಪೆÇ್ರೀತ್ಸಾಹ ನೀಡಿದ್ದರು ಎಂದು ಸ್ಮರಿಸಿದರು.
ಭಾರತ್ ಸ್ವಾಭಿಮಾನ್ ಟ್ರಸ್ಟ್ ಸಂಸ್ಥಾಪಕ ಶಶಿಕುಮಾರ್, ಎಸ್‍ಪಿವೈಎಸ್‍ಎಸ್ ಸಂಸ್ಥೆಯ ನಂಜುಂಡಸ್ವಾಮಿ, ಯೋಗ ಸ್ಪೋರ್ಟ್ ಫೌಂಡೇಶನ್ ಗಣೇಶ್ ಕುಮಾರ್, ಯೋಗ ಒಕ್ಕೂಟ ಕೆ.ಜಿ.ದೇವರಾಜು, ಮೈಸೂರು ಯೋಗ ಅಸೋಸಿಯೇಷನ್ ಸಂಸ್ಥೆಯ ಅನಂತು, ಪ್ರಮುಖರಾದ ಸುಮಿತ್, ವೆಂಕಟೇಶ್, ರವಿಕುಮಾರ್ ಮುಂತಾದರಿದ್ದರು.