Home ಜಿಲ್ಲೆ ಜೀವಾತ್ಮನನ್ನು ಪರಮಾತ್ಮನೊಂದಿಗೆ ಒಂದುಗೂಡಿಸುವುದು ಯೋಗ – ಮುಖ್ಯ ಗುರು ಗೋಣೆಪ್ಪ

ಜೀವಾತ್ಮನನ್ನು ಪರಮಾತ್ಮನೊಂದಿಗೆ ಒಂದುಗೂಡಿಸುವುದು ಯೋಗ – ಮುಖ್ಯ ಗುರು ಗೋಣೆಪ್ಪ

ಗುರುಮಠಕಲ್.ಜೂ ೨೧: ಜಗತ್ತಿನಾದ್ಯಂತ ಆಚರಿಸಲ್ಪಡುವ ದಿನ ಜೂನ್ ೨೧ ಅಂತರರಾಷ್ಟ್ರೀಯ ಯೋಗದಿನ. ಯೋಗ ಅನ್ನುವಂತದು ಸಂಸ್ಕೃತ ಪದದಿದ ಬಂದಿರುವಪದ, ಇದರ ಅರ್ಥ ಯೋಗ ಅಂದರೆ ಸಮಾಗಮ ಅಥವಾ ಕೂಡುವುದು. ಈ ಯೋಗದಿನ ಇವತ್ತು ಅಥವಾ ನಿನ್ನೆಯದಲ್ಲ ಇದು ಅತಿ ಪುರಾತನ ಕಾಲದಿಂದಲೂ ಬಂದಿರುವAತದ್ದು ಎಂದು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಚಂಡರಕಿ ಮುಖ್ಯ ಗುರು ಗೋಣೆಪ್ಪ ಅವರು ಹೇಳಿದರು. ಅಂತರ ರಾಷ್ಟ್ರೀಯ ಯೋಗದಿನಾಚರಣೆ ಅಂಗವಾಗಿ ಅವರು ಮಾತನಾಡುತ್ತ ಯೋಗದ ಪಿತಾಮಹ ಪೂಜ್ಯ ಪತಂಜಲಿ ಮಹಾಋಷಿಗಳು. ಅವರು ಯೋಗದ ಆಯಾಮಗಳನ್ನು ಜಗತ್ತಿಗೆ ಕಲಿಸಿಕೊಟ್ಟಿದ್ದಾರೆ. ಆದುದರಿಂದ ನಾವೆಲ್ಲರೂ ಪ್ರತಿದಿನಾಲು ಸ್ವಲ್ಪ ಸಮಯವಾದರೂ ಯೋಗವನ್ನು ತಪ್ಪದೆ ಮಾಡಬೇಕು. ಇದರಿಂದ ನಮ್ಮ ಅವಯವಗಳು ವೃದ್ಧಿಗೊಳ್ಳುತ್ತವೆ. ಇಂತಹ ಮಹತ್ವದ ದಿನವನ್ನು ವಿಶ್ವಕ್ಕೆ ಪರಿಚಯ ಮಾಡಿಕೊಟ್ಟವರು ನಮ್ಮ ಭಾರತದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು. ಇವತ್ತು ನಾವು ೧೨ನೇ ಅಂತರ ರಾಷ್ಟ್ರೀಯ ಯೋಗದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಯೋಗವು ಅನೇಕ ರೋಗಗಳಿಂದ ಮುಕ್ತಿಯನ್ನು ಕೊಡುವಂತಹದ್ದು ಎಂದು ಸಂಕ್ಷಿಪ್ತವಾಗಿ ಅಂತರ ರಾಷ್ಟ್ರೀಯ ಯೋಗ ದಿನದ ಬಗ್ಗೆ ಹೇಳಿದರು. ಈ ವೇಳೆ ಯೋಗ ಶಿಕ್ಷಕ ನರಸಿಂಹರೆಡ್ಡಿ ರಾವುಲಪಲ್ಲಿ, ಹಾಗೂ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು. ಈವೇಳೆ ಚಂಡರಕಿಸರಕಾರಿ ಪ್ರೌಢಶಾಲೆ ಹಾಗೂ ಚಂಡರಕಿ ಶ್ರೀ ಸಾಯಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದರು.