
ಸಂಜೆವಾಣಿ ವಾರ್ತೆ:
ಕೊಟ್ಟೂರು: ಜೂನ್ 21: ಕೊಟ್ಟೂರು ತಾಲೂಕಿನ ಗಡಿ ಗ್ರಾಮದ ಗಾಣಗಟ್ಟೆ ಸರ್ಕಾರಿ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಸಹಶಿಕ್ಷಕರಾದ ನಾಗರಾಜ್ ರವರು ಯೋಗವು ಸನಾತನ ಧರ್ಮದ ಸಂಶೋಧನೆ ಅಂದರೆ ತಪ್ಪಾಗಲಾರದು ಯೋಗ ಶಾಸ್ತ್ರವು ಪ್ರಾಚೀನ ಭಾರತದ ಆರು ದರ್ಶನಗಳಾದ ಸಾಂಖ್ಯಾ, ಯೋಗ, ನ್ಯಾಯ, ವೈಶೇಷಿಕ, ಮೀಮಾಂಸ,ಮತ್ತು ವೇದಾಂತಗಳಲ್ಲಿ ಒಂದಾಗಿದೆ ಯೋಗವು ಒಂದು ನಿರಂತರ ಸಾಧನೆ,ಜೀವನ ಶೈಲಿ,ಆರೋಗ್ಯ ರಕ್ಷಕ ಸೂತ್ರ,ನೆಮ್ಮದಿಯ ತಾಣ, ಸಂಸ್ಕಾರ, ದೇವರ ಪೂಜೆ ಹಾಗೂ ಆಸ್ಥಿಕರಿಗೆ ಮೋಕ್ಷದ ದಾರಿಯಾಗಿದೆ ಭಾರತೀಯ ಯೋಗ ಸಂಪ್ರದಾಯದಲ್ಲಿ ಭಗವಾನ್ ಶಿವನನ್ನು ಆದಿಯೋಗಿ ಮತ್ತು ಆದಿಗುರು ಅಂತ ಕರೆಯುತ್ತಾರೆ ಶಿವನ ಆಳವಾದ ಧ್ಯಾನ ಸ್ಥಿತಿಯಿಂದ ಬಂದ ಯೋಗ ಸಪ್ತರ್ಷಿಗಳಿಗೆ ಮೊದಲು ಬೋದಿಸಲಾಯಿತು ಎಂದು ಹೇಳಲಾಗುತ್ತದೆ ಯೋಗಶಾಸ್ತ್ರದಲ್ಲಿ ಮನುಷ್ಯ ತನ್ನ ವೈಯಕ್ತಿಕ ಸಾಮಾಜಿಕ ದೈಹಿಕ ಮಾನಸಿಕ ಆಧ್ಯಾತ್ಮಿಕ ಪ್ರಗತಿ ಕಾಣಲು ಮಾರ್ಗಗಳನ್ನು ನೀಡಲಾಗಿದೆ ಯೋಗದ ಲಾಭ ಪ್ರತಿಶತವಿದ್ದರೂ ಕೆಲವು ಆಸನ ಪ್ರಾಣಾಯಾಮಗಳಿಂದ ನಿರ್ದಿಷ್ಟ ಉಪಯೋಗಗಳು ಕಂಡುಬಂದರೂ ಸಂಪೂರ್ಣ ದೇಹದ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡೆ ಯೋಗ ಸಾಧನೆ ನಡೆಯುತ್ತದೆ ಯೋಗದ ಎಷ್ಟೋ ವಿಧಾನಗಳನ್ನು ವಿಜ್ಞಾನವು ಒಪ್ಪಿಕೊಂಡಿದೆ ಇನ್ನೂ ಕೆಲವು ವಿಧಿ ವಿಧಾನಗಳನ್ನು ಅಭ್ಯಾಸ ಮಾಡಿ ಕಂಡುಕೊಳ್ಳಬೇಕಾಗಿದೆ ಅದರ ಪರಿಣಾಮ ಸಹಜವಾಗಿ ಆರೋಗ್ಯ ಶಾಂತಿ ಮತ್ತು ಸಂತೋಷವನ್ನು ಹೊರಹೊಮ್ಮಿಸುತ್ತದೆ ಅದಕ್ಕಾಗಿ ಜೂನ್ 21ನ್ನು ವಿಶ್ವ ಯೋಗ ದಿನಾಚರಣೆಯನ್ನಾಗಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿ ಆಚರಿಸುತ್ತಿದ್ದಾರೆ ಇಂದು ಇಡೀ ವಿಶ್ವವೇ ಯೋಗದ ಹಿಂದೆ ಬಿದ್ದಿದೆ ಆದ್ದರಿಂದ ಎಲ್ಲರೂ ತಮ್ಮ ಮನಸ್ಸನ್ನು ಮತ್ತು ತಮ್ಮ ದೇಹವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಪ್ರತಿದಿನವೂ ಯೋಗವನ್ನು ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಎಚ್ಎಂ ಸಿದ್ದಲಿಂಗಯ್ಯ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಹಾಂತೇಶ್ ಹಾಗೂ ಸಹಶಿಕ್ಷಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು


























