
ಜಯನಗರ.ಜೂ20: ಚಂದ್ರಗುಪ್ತಮೌರ್ಯ ಆಟದ ಮೈದಾನದಲ್ಲಿ ರಕ್ಷಾ ಫೌಂಡೇಷನ್ ವತಿಯಿಂದ 14ನೇ ವರ್ಷದ ಉಚಿತ ನೋಟ್ ಪುಸ್ತಕ ವಿತರಣೆ ಮತ್ತು ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮತ್ತು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ, ಸಂಘ, ಸಂಸ್ಥೆಗಳಿಗೆ ದೇಣಿಗೆ , ವಿಕಲಚೇತನರಿಗೆ ವೀಲ್ ಚೇರ್ ವಿತರಣೆ ಕಾರ್ಯಕ್ರಮ.
ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರು, ಸಂಸದರಾದ ತೇಜಸ್ವಿಸೂರ್ಯ, ರಕ್ಷಾ ಫೌಂಡೇಷನ್ ಅಧ್ಯಕ್ಷರು, ಶಾಸಕರಾದ ಸಿ.ಕೆ.ರಾಮಮೂರ್ತಿರವರು, ಶಾಸಕರುಗಳಾದ ಎಂ.ಕೃಷ್ಣಪ್ಪ ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ, ಬಿಗ್ ಬಾಸ್ ವಿನ್ನರ್ ನಟ ಗಿಲ್ಲಿ, ಜಯದೇವ ಆಸ್ಪತ್ರೆ ನಿರ್ದಶಕ ಡಾ.ಜಿ.ದಿನೇಶ್ , ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀಮತಿ ನಾಗರತ್ನ ರಾಮಮೂರ್ತಿರವರು,ನಟಿ ತಾರ ಆನುರಾಧರವರು ದೀಪ ಬೆಳಗಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರು ಪ್ರತಿವರ್ಷ ರಕ್ಷಾ ಫೌಂಡೇಷನ್ ವತಿಯಿಂದ ಮಕ್ಕಳ ಶಿಕ್ಷಣಕ್ಕಾಗಿ ಉಚಿತ ನೋಟ್ ಪುಸ್ತಕ, ಲ್ಯಾಪ್ ಟಾಪ್, ವಿದ್ಯಾರ್ಥಿ ವೇತನ ಪವಿತ್ರವಾದ ಕೆಲಸ ಮಾಡುತ್ತಿದ್ದಾರೆ.ಅಡಂಬರ, ಪ್ರಚಾರವಿಲ್ಲದೇ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದು ರಕ್ಷಾ ಫೌಂಡೇಷನ್ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ.
ರಾಜಕಾರಣಿಗಳು ಓಟಿನ ರಾಜಕೀಯ ಮಾಡಬೇಡಿ, ಪ್ರತಿಯೊಬ್ಬ ಶಾಸಕರು ಸಿ.ಕೆ.ರಾಮಮೂರ್ತಿಯವರಂತೆ ಮಕ್ಕಳು ಶಿಕ್ಷಣಕ್ಕೆ ಸಹಾಯ, ಸಹಕಾರ ನೀಡಬೇಕು. ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು.ಮಾಜಿ ಶಾಸಕ ವಿಜಯಕುಮಾರ್ ರವರು ಜಯನಗರ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಅವರ ಶಿಷ್ಯರಾದ ಸಿ.ಕೆ.ರಾಮಮೂರ್ತಿರವರ ಅವರ ಆದರ್ಶಗಳನ್ನು ಪಾಲಿಸುತ್ತಿದ್ದಾರೆ.
ಸಿ.ಕೆ.ರಾಮಮೂರ್ತಿರವರು ಮಾತನಾಡಿ ಶಿಕ್ಷಣದಿಂದ ದೇಶ ಅಭಿವೃದ್ಧಿ, ವಿದ್ಯಾವಂತ ಸಮಾಜ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಕಳೆದ 14ವರ್ಷಗಳಿಂದ ರಕ್ಷಾ ಫೌಂಡೇಷನ್ ಉಚಿತ ನೋಟ್ ಪುಸ್ತಕ, ಲ್ಯಾಪ್ ಟಾಪ್ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ.ಜಯದೇವ ಆಸ್ಪತ್ರೆ ಮತ್ತು ಗೀತಾ ಏಜುಕೇಷನ್ ಸೊಸೈಟಿ, ವಾತ್ಯಲಪುರಂಸೇವಾ ಸಂಸ್ಥೆಗಳಿಗೆ ದೇಣಿಗೆ ನೀಡಲಾಯಿತು.
ರಕ್ಷಾ ಫೌಂಡೇಷನ್ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ, ಪರಿಸರ ಉಳಿಸಿ ಬೆಳಸಲು ಶ್ರಮಿಸುತ್ತಿದೆ. ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ, ತುಮಕೂರು, ತುರುವೆಕೆರೆ , ರಾಮನಗರ ವಿವಿಧ ಕಡೆಗಳಲ್ಲಿ 2 ಲಕ್ಷ ನೋಟ್ ಪುಸ್ತಕಗಳನ್ನು ವಿತರಿಸಲಾಗುತ್ತಿದೆ.
ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಜಿ.ದಿನೇಶ್, ಮಾಜಿ ಬಿಬಿಎಂಪಿ ಸದಸ್ಯರುಗಳಾದ ಬಿ.ಸೋಮಶೇಖರ್, ಗೋವಿಂದನಾಯ್ಡು, ದೀಪಿಕಾ ಮಂಜುನಾಥ್ ರೆಡ್ಡಿ, ಚನ್ನಗಿರಿಯಪ್ಪರವರು ಭಾಗವಹಿಸಿದ್ದರು.


























