
ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ನಗರದ ಜವಳಿಸಾಲನ ಹಿರೇಪೇಟೆ ಸರ್ಕಲ್ ನಲ್ಲಿ ನಡೆದ ಸಮೂಹ ವರ್ತಕರ ಸಭೆಯಲ್ಲಿ ಹಕ್ಕೊತ್ತಾಯ ಮಾಡಿ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡುವ ಮೂಲಕ ಆಗ್ರಹಿಸಲಾಯಿತು. ಈ ವೇಳೆ ಕಾಂಗ್ರೆಸ್ ಮುಖಂಡರಾದ ತಾರಾದೇವಿ ವಾಲಿ, ವಿಜಯಕುಮಾರ್ ಅಳಗುಂಡಗಿ, ಚಂದ್ರಶೇಖರ ಅಳಗುಂಡಗಿ, ಅನ್ವರ ಮುಧೋಳ,ಮೋಹನ ಸವಣೂರ, ಸೇರಿದಂತೆ ವರ್ತಕರ ಸಂಘ ಪದಾಧಿಕಾರಿಗಳು ಮೊದಲಾದವರು ಇದ್ದರು.




























