
ಕಲಬುರಗಿ,ಸೆ.5-ತಂಬಾಕು,ಗುಟ್ಕಾ, ಜರ್ದಾ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ನಾವೆಲ್ಲರು ಒಟ್ಟಾಗಿ ದುಡಿಯೋಣ ಎಂದು ಕಲಬುರಗಿ ನಗರ ಪೆÇಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ ಪೆÇಲೀಸ್ ಅಧಿಕಾರಿಗಳಿಗೆ ಕರೆ ನೀಡಿದರು.
ಇತ್ತೀಚಿಗೆ ಕಲಬುರಗಿ ನಗರದ ಪೆÇಲೀಸ್ ಆಯುಕ್ತರ ಕಚೇರಿ ಸಭೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ಪೆÇಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯುಕ್ತಾಲಯ ವ್ಯಾಪ್ತಿಯ ಪೆÇಲೀಸ್ ಅಧಿಕಾರಿಗಳಿಗೆ ಆಯೋಜಿಸಿದ “ಕೋಟ್ಪಾ ತಿದ್ದುಪಡಿ ಕಾಯ್ದೆ-2024 ನಿಬಂಧನೆಗಳು, Pಇಅಂ-2019 ಮತ್ತು ಇತರ ಕಾನೂನುಗಳ ಕುರಿತ ಸಂವೇದನಾಶೀಲ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ತಂಬಾಕು ಉತ್ಪನ್ನಗಳ ಸೇವನೆಯಿಂದ ಮಾರಕ ಕ್ಯಾನ್ಸರ್ ಗೆ ತುತ್ತಾಗಿ ನಾವೇ ರೋಗಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಒಮ್ಮೆ ರೋಗ ದೇಹಕ್ಕೆ ಅಂಟಿಕೊಂಡಲ್ಲಿ ಇಡೀ ಕುಟುಂಬ ಅರ್ಥಿಕವಾಗಿ, ಮಾನಸಿಕವಾಗಿ ಸಂಕಷ್ಟಕ್ಕೆ ಎಡೆ ಮಾಡಿಕೊಡುತ್ತದೆ. ಹೀಗಾಗಿ ನಮ್ಮ ಪೆÇಲೀಸ್ ಅಧಿಕಾರಿಗಳು ಈ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಬೇಕು ಮತ್ತು ಸ್ವತ: ಸಹ ಯಾವುದೇ ಗುಟಕಾ ಪದಾರ್ಥಗಳ ಸೇವನೆಗೆ ಬಲಿಯಾಗಬಾರದು ಎಂದು ಕಿವಿಮಾತು ಹೇಳಿದರು.
ಕೋಟ್ಪಾ ಕಾಯ್ದೆಯ ಪ್ರಕಾರ ಸಾರ್ವಜನಿಕರ ಸ್ಥಳಗಳಲ್ಲಿ, ಶಿಕ್ಷಣ ಸಂಸ್ಥೆಗಳ ಅವರಣದಲ್ಲಿ, ರಸ್ತೆಗಳಲ್ಲಿ ಧೂಮಪಾನ ಮಾಡುವುದು ಮತ್ತು ಉಗುಳುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಯಂತ್ರಣ, ಆಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಇರುವ ನಿಬರ್ಂಧಗಳು ಹಾಗೂ ತಂಬಾಕು ಉತ್ಪನ್ನಗಳ ಜಾಹೀರಾತು ಮತ್ತು ಪ್ರಚಾರದ ಮೇಲಿನ ನಿಯಂತ್ರಣದ ಕುರಿತು ಪೆÇಲೀಸ್ ಅಧಿಕಾರಿಗಳು ಅರಿತು ಅದರಂತೆ ಕಾರ್ಯಚರಣೆ ನಡೆಸಬೇಕೆಂದರು.
ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಜನ ಹೆಚ್ಚು ಸಿಗರೇಟ್, ತಂಬಾಕು, ಗುಟಕಾದಂತಹ ಮಾದಕ ವಸ್ತುವನ್ನು ಸೇವಿಸುತ್ತಿದ್ದು, ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ನಿಮ್ಮ ಆರೋಗ್ಯ ರಕ್ಷಣೆ ಜೊತೆಗೆ ಬೇರೆಯವರ ಆರೋಗ್ಯಕರ ಜೀವನಕ್ಕೂ ಈ ಕೆಟ್ಟ ಹವ್ಯಾಸ ತ್ಯಜಿಸಬೇಕು ಎಂದು ಕರೆ ನೀಡಿದ ಅವರು, ಇತ್ತೀಚೆಗೆ ನಗರ ಪ್ರದೇಶದಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್‍ಗಳ ಹಾವಳಿ ಹೆಚ್ಚಾಗುತ್ತಿದ್ದು, ಇದರ ಉತ್ಪಾದನೆ, ಆಮದು, ಮಾರಾಟ, ವಿತರಣೆ, ಸಂಗ್ರಹಣೆ ಮತ್ತು ಜಾಹೀರಾತಿಗೆ ಸಂಬಂಧಿಸಿದ ನಿಷೇಧಗಳ ಕುರಿತು ಅಧಿಕಾರಿಗಳಿಗೆ ಸಂಕ್ಷಿಪ್ತವಾಗಿ ತಿಳಿಹೇಳಿದರು.
ಇನ್ನು ಪೆÇಲೀಸ್ ಆಯುಕ್ತಾಲಯ ವ್ಯಾಪ್ತಿಯ ಎಲ್ಲ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಔಖಿPಂ ಕಾಯ್ದೆ ಉಲ್ಲಂಘಿಸಿ ಧೂಮಪಾನ ಮಾಡಿದಲ್ಲಿ ಮೊದಲು 500 ರೂ. ದಂಡ ವಿಧಿಸಲಾಗುತ್ತಿತ್ತು. ಇದೀಗ 1,000 ರೂ. ದಂಡ ಹಾಕಲಾಗುತ್ತಿದ್ದು, ಇದನ್ನು ಜಾಗೃತಿ ಮೂಡಿಸಲು ಪೆÇೀಸ್ಟರ್ ಅಳವಡಿಸಿ ಅದರಂತೆ ದಂಡ ವಸೂಲಿ ಮಾಡಬೇಕೆಂದು ಅಧಿಕಾರಿಗಳಿಗೆ ಡಾ.ಎಸ್.ಡಿ.ಶರಣಪ್ಪ ಸೂಚಿಸಿದರು.
ನವದೆಹಲಿಯ ವೈಟಲ್ ಸ್ಟ್ರಾಟರ್ಜಿ ನಿರ್ದೇಶಕ ಡಾ.ಅಮಿತ್ ಯಾದವ ಅವರು, ಅಔಖಿPಂ-2003ರ ರಾಜ್ಯ ತಿದ್ದುಪಡಿ-2024ರ ಪ್ರಮುಖ ಅಂಶಗಳು ಮತ್ತು ಎಲೆಕ್ಟ್ರಾನಿಕ್ ಸಿಗರೇಟ್‍ಗಳ ಉತ್ಪಾದನೆ, ಆಮದು, ಮಾರಾಟ, ವಿತರಣೆ, ಸಂಗ್ರಹಣೆ ಮತ್ತು ಜಾಹೀರಾತಿಗೆ ಸಂಬಂಧಿಸಿದ ನಿಷೇಧಗಳ ಕುರಿತು ಅಧಿಕಾರಿಗಳಿಗೆ ಸವಿಸ್ತಾರವಾಗಿ ವಿವರಿಸಿದರು.
ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಎಸ್.ಎಸ್.ಎಲ್ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಹೇಶ್ವರಿ ಹಿರೇಮಠ್ ಮತ್ತು ರಾಜ್ಯ ತಂಬಾಕು ನಿಯಂತ್ರಣ ಕೋಶದ ವಿಭಾಗೀಯ ಸಂಯೋಜಕ ಮಹಾಂತೇಶ ಉಳ್ಳಾಗಡ್ಡಿ ಅವರು ಕೋಟ್ಪಾ ಕಾಯ್ದೆ-2003ಯಡಿ ಸಾರ್ವಜನಿಕ ಆರೋಗ್ಯ ರಕ್ಷಣೆ ಕುರಿತು ಮಾತನಾಡಿದರು.
ಜಾಗೃತಿ ಪೆÇೀಸ್ಟರ್ ಬಿಡುಗಡೆ
ಇದೇ ಸಮಯದಲ್ಲಿ ಕೋಟ್ಪಾ ಕಾಯ್ದೆ ಆಡಿಯಲ್ಲಿ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ದಂಡ ವಿಧಿಸುವ ಕುರಿತು ಜಾಗೃತಿ ಮೂಡಿಸುವ ಪೆÇೀಸ್ಟರಗಳನ್ನು ಪೆÇಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಡಿ.ಸಿ.ಪಿ (ಲಾ & ಆರ್ಡರ್) ಶಾಲೂ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಸುಜಾತಾ ಪಾಟೀಲ, ಸಾಮಾಜಿಕ ಕಾರ್ಯಕರ್ತೆ ಆರತಿ ಧನಶ್ರೀ, ಸೈಕಾಲಜಿಸ್ಟ್ ಕೌನ್ಸಿಲರ್ ಮಂಜುನಾಥ ಕಂಬಾಳಿಮಠ ಮತ್ತಿತರು ಉಪಸ್ಥಿತರಿದ್ದರು.






























